June 30, 2021

ಚಿವಿಟ್ ಚಿವಿಟ್ ಸೂರಕ್ಕಿ

 ಚಿವಿಟ್  ಚಿವಿಟ್  ಸೂರಕ್ಕಿ

ಚಿತ್ರ ಲೇಖನ:ಸಿ.ಎಸ್.ನಿರ್ವಾಣ ಸಿದ್ದಯ್ಯ 

   ಸೂರ್ಯನ ಚಿನ್ನದ ಕಿರಣಗಳು ಇಳೆಯ ಮೇಲೆ ಸಂಭ್ರಮಿಸುತ್ತಿದ್ದವು. ಚಿಲಿಪಿಲಿಗುಟ್ಟುತ್ತಲೇ ಗೂಡಿನಿಂದ ಹೊರ ಬಂದ ಹಕ್ಕಿಗಳು ಸಂತಸದಿಂದ ಮರದಿಂದ ಮರಕ್ಕೆ ಜಿಗಿಯುತ್ತಿದ್ದವು. ಸಕಲ ಜೀವಿಗಳು ಎಚ್ಚರಗೊಳ್ಳುವ ಈ ಸಮಯ ಛಾಯಾಚಿತ್ರಕ್ಕೆ ಹೇಳಿ ಮಾಡಿಸಿದ್ದು. ನಿಸರ್ಗದ ಜೀವಿಗಳನ್ನು ಅವುಗಳ ಚೆಲುವನ್ನು ಅಂದವಾಗಿ ಈ ಹೊತ್ತಿನಲ್ಲಿ ಚಿತ್ರಿಸಬಹುದು. ರೆಕ್ಕೆ ಬಡಿಯುವ ,ಕೊಕ್ಕು ತೀಡಿ ಕೊಳ್ಳುವ,ಮೈ ಮುರಿದು ಅಕಳಿಸುವ ಹೀಗೆ ವಿವಿಧ ಚಟುವಟಿಕೆಗಳನ್ನು ಹಕ್ಕಿಗಳು ಈ ಹೊತ್ತಿನಲ್ಲಿ ನಿರ್ವಹಿಸುತ್ತವೆ.



ಅವತ್ತೂ ಇಂಥ ಹೊತ್ತಿನಲ್ಲಿ ಕ್ಯಾಮಾರವನ್ನು ಹೆಗಲಿಗೆ ಹಾಕ್ಕೊಂಡು ಹೊರಟಾಗ ಪಪ್ಪಾಯಿ ಮರದ ಮೇಲೆ ಕುಳಿತು ಚಿವಿಟ್ ಚಿವಿಟ್ ಎಂದು ಶಬ್ದ ಮಾಡುತ್ತದ್ದ ಅಂಗೈ ಅಗಲದ ಹಕ್ಕಿಯೊಂದು ಕಣ್ಣಿಗೆ ಬಿತ್ತು. ತಕ್ಷಣ ಚುರುಕಾದೆ. ಕ್ಯಾಮಾರ ಹೊರ ತೆಗೆದು ಹತ್ತಾರು ಫೋಟೋಗಳನ್ನು ಸೆರೆ ಹಿಡಿದೆ.

   ಸ್ಟ್ರಾನಂತಹ ಕೊಕ್ಕು,ಎದೆ ಭಾಗದಲ್ಲಿ ಹಾಲಿನಂತಹ ಬಿಳುಪುಹಳದಿ ಹೊಟ್ಟೆ ಮತ್ತು ಬಿಳಿ ಬದಿಗಳನ್ನು ಹೊಂದಿರುವ ದೇಹ,ಹೊಳೆಯುವ ಚಿಕ್ಕ ಚಿಕ್ಕ ಅಕ್ಷಿ ವಾಹ್ ಎಷ್ಟು ಚೆಂದ ಈ ಹಕ್ಕಿ.  ಸೂಕ್ಷ್ಮವಾಗಿ ತೆಗೆದ ಫೋಟೋ ನೋಡಿದೆ. ವಾರ್ಹೆ ವಾಹ್ ಇದು ಸುರ್ ಸುರ್ ಸೂರಕ್ಕಿ. ಹೂವಿನ ಮರಕಂದ್ರ ಹೀರಿ ಬದುಕುವ  ಹಕ್ಕಿ ಇದು.



   ಈ ಪುಟಾಣಿ ಹಕ್ಕಿ ರೆಕ್ಕೆ ಬಿಚ್ಚಿ ಹೂವಿನ ಬುಡಕ್ಕೆ ಉದ್ದನೆಯ ಕೊಳವೆ ನಾಲಿಗೆ ಚಾಚಿ ಮಕರಂದ ಹೀರುತ್ತದೆ. 132 ವಿಧಗಳ ಮಕರಂದ ಸವಿಯುವ ಪುಟಾಣಿ ಹಕ್ಕಿಗಳು ವಿಶ್ವದಲ್ಲಿದೆ. ಕರ್ನಾಟಕದಲ್ಲಿ ಅವುಗಳ 6 ತಳಿಗಳಿವೆ. .ಹಳದಿ  ಸೂರಕ್ಕಿ,ಕೆನ್ನೀಲಿ ಪುಷ್ಠಿದ ಸೂರಕ್ಕಿ (ಪರ್ ಸಲ್ ಸನ್ ಬರ್ಡ)ಸಣ್ಣ ಸೂರಕ್ಕಿ,ಕಪ್ಪು ಸೂರಕ್ಕಿ ಹೆಚ್ಚಾಗಿ ನಮ್ಮ ನಾಡಿನಲ್ಲಿ ಇವೆ.

 ಅಮೇರಿಕಾದ ಹಮ್ಮಿಂಗ್ ಬರ್ಡ್ ಹತ್ತಿರದ ಸಂಬಂಧಿ. ಇಂಗ್ಲೀಷ್‍ನಲ್ಲಿ ಇದನ್ನು ಸನ್ ಬರ್ಡ ಎಂದು ಕರೆಯುತ್ತಾರೆ. ಹೂವಿನ ಬಳಿ ಹೋಗಿ ಸುರ್ ಸುರ್ ಎಂದು ಮಕರಂದ ಹೀರುತ್ತದೆ. ಒಂದು ಹೂವಿನ ಬಳಿ  ಮೂವತ್ತು ಸೆಕೆಂಡ್ ಕಾಲ ಮಾತ್ರ ಇರುತ್ತದೆ. ಚಕ ಚಕ ಹೂವಿನಿಂದ ಹೂವಿಗೆ ಹಾರುತ್ತಲೇ ಇರುತ್ತದೆ. ಸದಾ ಲವಲವಿಕೆಯನ್ನು ಹೊಂದಿರುವ ಹಕ್ಕಿ ಇದು.



 ಕೊಂಬೆಗಳ ತುದಿಗೆ ನೇತಾಡುವಂತೆ ಒಣಗಿದ ಎಲೆ,ನಾರು,ಜೇಡರಬಲೆಗಳಿಂದ  ಹತ್ತು ಸೆ.ಮೀ. ಗಾತ್ರದ  ಗೂಡನ್ನು ಇದು ಕಟ್ಟುತ್ತದೆ. ಸಾಮಾನ್ಯವಾಗಿ ಕ್ರೋಟಾನು,ರತ್ನಗಂಧಿ,ನುಗ್ಗೆಕಾಯಿ ಹೂವುಗಳ ಮಕರಂzವನ್ನು   ಹೆಚ್ಚಾಗಿ ಹೀರಿ ಜೀವಿಸುತ್ತದೆ. ಹಸಿ ನೆಲದ ಮೇಲೆ ಓಡಾಡಿ ಚಿಕ್ಕ ಚಿಕ್ಕ  ಕ್ರೀಮಿಗಳನ್ನು ಹಿಡಿದು ತಿನ್ನುತ್ತದೆ.

   ಮನೆ ಅಂಗಳದಲ್ಲಿ ಬೆಳೆಯುವ ದಾಸವಾಳ,ವಿವಿಧ ತರಕಾರಿ ಹೂವುಗಳ ಮಧ್ಯ ಮಕರಂದ ಹೀರಿ ಚಿವಿಟ್ ಚಿವಿಟ್ ಎಂದು ಶಬ್ದ ಮಾಡುತ್ತ ಓಡುವ ಈ ಸೂರಕ್ಕಿ ನೋಡುವುದೇ ಕಣ್ಣಿಗೆ ಹಬ್ಬ. ಪ್ರಕೃತಿ ಅದೆಷ್ಟು ಜೀವಿಗಳನ್ನು ತನ್ನ ಒಡಲಲ್ಲಿಟ್ಟು ಕೊಂಡು ಸಾಕುತ್ತಿದ್ದಿಯೋ ಗೋತ್ತಿಲ್ಲ. ಅದರೆ ಇಂತಹ ಹಕ್ಕಿಗಳ ಬದುಕನ್ನು ನೋಡುತ್ತ ಕಾಣುತ್ತ ಹೋಗುತ್ತಿದ್ದರೆ ಪ್ರಕೃತಿ ಎಷ್ಟು ವೈವಿಧ್ಯಮವನ್ನು ತನ್ನಲ್ಲಿ ಇರಿಸಿಕೊಂಡಿದೆ  ಎಂದು ಅಚ್ಚರಿಯಾಗುವುದು ಸತ್ಯ ಅಲ್ಲವೇ?

 


ನನ್ನೂರು. com

 



{ಬದುಕು ಅನೇಕ ಮಗ್ಗಲನ್ನು ಕಾಣುತ್ತಿದೆ. ಬಾಲ್ಯದಲ್ಲಿ ಕಂಡ ಮರ,ಅಜ್ಜಿ ಮತ್ತು ಸುತ್ತಲ ಪ್ರಪಂಚವು ಹಾಗೆ ಇದೆ. ಅದರೆ ಕ್ರಿಯಾಶೀಲತೆಯು ಬೇರೆ ಮಗ್ಗಲನ್ನು ಕಂಡಿದೆ. ಈ ಕುರಿತು ಒಂದು ಪದ್ಯ ಇಲ್ಲಿದೆ.}


ನನ್ನೂರು. com

ನನ್ನೂರಿನಲ್ಲಿ 

ಬೆಳಗಿತ್ತು ಹಕ್ಕಿಗಳ ಚಿಲಿಪಿಲಿ ಇಲ್ಲ

ಮರವಿತ್ತು ನೆರಳಿಲ್ಲ

ಅಜ್ಜಿ ಇದ್ದಳು 

ಕತೆ ಕೇಳುವರಿಲ್ಲ


ನನ್ನೂರಿನಲ್ಲಿ

ಅಂಗಳವಿತ್ತು

ರಚುಕ್ಕಿಯಿಟ್ಟ ರಂಗೋಲಿ ಇಲ್ಲ

ತಂಬೂರಿ ಇತ್ತು

ಮೀಟುವ ಕೈ ಇಲ್ಲ

ಕೊರವಂಜಿ ಇದ್ದಳು

ಕಣಿ ಹೇಳುತ್ತಿರಲಿಲ್ಲ


ನನ್ನೂರಿನಲ್ಲಿ 

ಸಾರಾಯಿ ಇತ್ತು

ಹನಿ ನೀರಿಲ್ಲ

ತಬ್ಬಲಿಗಳ ನೋವಿತ್ತು

ಆಲಿಸುವ ಕಿವಿ ಇಲ್ಲ

ಓದಿದವರ ಪಡೆ ಇತ್ತು

ಊರು ಕಟ್ಟುವ ಮನಸ್ಸಿಲ್ಲ


ನನ್ನೂರು ಬೀದಿ ದೀಪಗಳಿಂದ ಝಗಮಗಿಸಿತ್ತು

ಇದ್ದ ಎಲ್ಲ ಮನೆಗಳಲ್ಲಿ ಬೆಳಕು ಬೆಳಗಿತ್ತು

ಆದರೆ ಮನದ ಕತ್ತಲು ಹಾಗೇ ಉಳಿದಿತ್ತು.




 


June 24, 2021

ಎ.ಪಿ.ಎಂ.ಸಿ. ವರ್ತಕರ ಬಾಡಿಗೆ ಮನ್ನ ಮಾಡಿ

 ದಾಸನಪುರ ಎ.ಪಿ.ಎಂ.ಸಿ. ವರ್ತಕರ ಬಾಡಿಗೆ ಮನ್ನ ಮಾಡಿ

{ಹೆಸರಘಟ್ಟ ಸಮೀಪ ಗೋಪಾಲಪುರ ಗ್ರಾಮದಲ್ಲಿ ಆಶಾ ಕಾರ್ಯಕರ್ತೆಯರಿಗೆ ಆಹಾರದ ಕಿಟ್ ಗಳನ್ನು ಕಾಂಗ್ರೇಸ್ ಮುಖಂಡ ಕೇಶವರಾಜಣ್ಣ ವಿತರಿಸಿದರು. ಈ ಕುರಿತು ವರದಿ ಇಲ್ಲಿದೆ.}


ಹೆಸರಘಟ್ಟ ಸಮೀಪ ಗೋಪಾಲಪುರ ಗ್ರಾಮದಲ್ಲಿ ಕಾಂಗ್ರೇಸ್ ಮುಖಂಡ ಕೇಶವರಾಜಣ್ಣ ಆಶಾ ಕಾರ್ಯಕರ್ತೆಯರಿಗೆ ದಿನಸಿ ಕಿಟ್ ಗಳನ್ನು ವಿತರಿಸಿದರು. ಕಾಂಗ್ರೇಸ್ ಮುಖಂಡರಾದ ಪ್ರೇಮಲತಾ ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕರಾದ ಕೇಶವಮೂರ್ತಿ ಇದ್ದರು.

ಹೆಸರಘಟ್ಟ:-"ದಾಸನಪುರ ಎ.ಪಿ.ಎಂ.ಸಿ.ಯಲ್ಲಿರುವ ವರ್ತಕರ ಮಳಿಗೆಗಳ ಬಾಡಿಗೆಯನ್ನು ರದ್ದು ಮಾಡಬೇಕು. ವ್ಯಾಪಾರ ಅಭಿವೃದ್ದಿಗೆ ಒತ್ತು ನೀಡಿದೆ ಬರೀ ಬಾಡಿಗೆಯನ್ನು ವಸೂಲಿ ಮಾಡಲು ನೋಟಿಸ್ ನೀಡುತ್ತಿರುವ ಕ್ರಮ ಖಂಡನೀಯ.ಯಶವಂತಪುರದಿಂದ ಸ್ಥಳಾಂತರಗೊಂಡಿರುವ ವರ್ತಕರು ಇಲ್ಲಿಯೇ ವ್ಯಾಪಾರವನ್ನು ಮುಂದುವರಿಸುವಂತೆ ಸರ್ಕಾರ ಅದೇಶ ಮಾಡಬೇಕು" ಎಂದು ಕಾಂಗ್ರೇಸ್ ಮುಖಂಡ ಕೇಶವರಾಜಣ್ಣ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಅವರು ದಾಸನಪುರ ಹೋಬಳಿ ಗೋಪಾಲಪುರ ಗ್ರಾಮದಲ್ಲಿ ಆಶಾ ಕಾರ್ಯಕರ್ತೆಯರು,ದಿನಗೂಲಿ ನೌಕರಿಗೆ ದಿನಸಿ ಕಿಟ್ ಗಳನ್ನು ವಿತರಿಸಿ ಮಾತನಾಡಿದರು. 

"ಯಲಹಂಕ ಶಾಸಕ ಎಸ್.ಅರ್.ವಿಶ್ವನಾಥ್ ಶಿವರಾಮಕಾರಂತ ಬಡಾವಣೆಯನ್ನು ಮಾಡಲು ಬಿಡುವುದಿಲ್ಲ. ಮನೆ ಒಡೆಯಲು ಬಂದರೆ ಅಡ್ಡ ಮಲಗುವುದಾಗಿ ಹಿಂದೆ ಹೇಳಿದ್ದರು. ಈಗ ಅವರ ಬಳಿ ಅಧಿಕಾರವಿದೆ. ರೈತರನ್ನು ರಕ್ಷಿಸುವ ಬಲ ಇದೆ. ರಾಜಕೀಯ ಬಿಟ್ಟು ರೈತರನ್ನು ಉಳಿಸುವ ಕೆಲಸವಾಗಬೇಕು" ಎಂದು ಅವರು ತಿಳಿಸಿದರು.

"ಆಲೂರು ಗ್ರಾಮ ಪಂಚಾಯಿತಿ ಚುನಾವಣೆ ನಡೆದು ಎರಡು ತಿಂಗಳು ಅಗಿವೆ. ಇನ್ನೂ ಅಧ್ಯಕ್ಷರ ಆಯ್ಕೆಯಾಗಿಲ್ಲ. ಲಾಕ್ ಡೌನ್ ವಿಳಂಬವಾಗಿರುವುದರಿಂದ ಎಲ್ಲವು ತಡವಾಗುತ್ತಿದೆ. ಶೀಘ್ರವೇ ಅಧ್ಯಕ್ಷರ ಆಯ್ಕೆಯಾಗಿ ಪಂಚಾಯಿತಿ ಅಭಿವೃದ್ದಿ ಕೆಲಸಗಳು ಅಗಲಿ.ಪಂಚಾಯಿತಿ ಸದಸ್ಯರು ಕೊರೊನಾ ಈ ವೇಳೆಯಲ್ಲಿ ಜನರ ಸೇವೆಯನ್ನು ಮಾಡಬೇಕು" ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ರವಿಕುಮಾರ್,ಕಾಂಗ್ರೇಸ್ ಮುಖಂಡರಾದ ಪ್ರೇಮಲತಾ ಮತ್ತು ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕರಾದ ಕೇಶವಮೂರ್ತಿ ಉಪಸ್ಥಿತರಿದ್ದರು.



June 23, 2021

ಹನಿಗವನ

 


ಹನಿಗವನ 

ಶೀಲಾ

ನಲ್ಲೆ ಮೆಚ್ಚಿದೆ ನಿನ್ನ ಗುಣಶೀಲಾ

ಅದರೇನು ಮಾಡಲಿ

ನಿನ್ನ ಸೌಂದರ್ಯ 

ಹರಿದ ಗೋಣಿಶೀಲಾ

420

ನನ್ನಾಕೆ 

ತುಂಬಾ ತುಂಟಿ

ಅದ್ಕಾ ನಾನಾದೆ

420

                                            ಚಿ.ಶಿ.ನಿ. 

ಅವಳಿಟ್ಟ ಉಡುಗೊರೆ --ಗುಟುಕು ಉಸಿರು ಇರುವ ತನಕ

 ಅವಳಿಟ್ಟ ಉಡುಗೊರೆ --ಗುಟುಕು ಉಸಿರು ಇರುವ ತನಕ

{ಒಂದು ಸ್ನೇಹಕ್ಕೆ,ಪ್ರೀತಿಗೆ,ಬೆಚ್ಚನೆಯ ಅನುರಾಗಕ್ಕೆ ಉಡುಗೊರೆ ಬೇಕಾ?ಹುಂ ಬೇಡವೆನ್ನಿಸುತ್ತದೆ. ಅದರೂ ಕೊಟ್ಟ ಉಡುಗೊರೆ ಬದುಕಿನ ಉಸಿರು ನಿಲ್ಲುವ ತನಕ ಇರ್ಬೇಕು, ಅಂತಹ ಉಡುಗೊರೆ ಯಾವುದು ಗೊತ್ತ? ಅಂತಹ ಉಡುಗೊರೆ ಪಡೆದ ಬದುಕಿನ ಕ್ಷಣವನ್ನು ನಾನು ಇಲ್ಲಿ ನೀಡಿದ್ದೀನಿ ಓದಿ}

ಬ್ಯೂಟಿಪುಲ್

ಮಧುರವಾದ ಬೆಚ್ಚನೆಯ ಸ್ನೇಹ ಅದು. ಅವಳು ನಕ್ಕರೆ ಸಾಕು ಹೃದಯದ ತುಂಬೆಲ್ಲ ಚೆಲುವಿನ ಕನಸುಗಳು ಚೆಲ್ಲಾಡುತ್ತಿದ್ದವು. ಹೂವಿನ ಎಳಸಿನ ಸಂಭ್ರಮದ ಕನಸನ್ನು ಪೋಣಿಸಿ ಕೊಂಡ ಮನಸ್ಸು ಪುಲಕಿತಗೊಳ್ಳುತ್ತಿತ್ತು. ಸ್ನೇಹ,ಪ್ರೀತಿ ಪರಸ್ಪರ ಸಂಬಂಧಗಳನ್ನು ಗೌರವಿಸಿ ಕೊಳ್ಳುವ ಪೂಜಿಸಿ ಕೊಳ್ಳುವ ಪರಿ ಅವಸ್ಥೆ ಇದು.

ಸಾಗರದ ಜ್ಯೂನೀಯರ್ ಕಾಲೇಜಿನಲ್ಲಿ ಓದ್ತಾ ಇದ್ದ ನನ್ಗೆ ಅಲ್ಲಿಯ ಸಾಹಿತ್ಯ ವಾತಾವರಣ ಬರೆಯುವುದಕ್ಕೆ ಚೇತನ ತುಂಬುತ್ತಿತ್ತು. ನಾ.ಡಿಸೋಜ,ಮಹಾಬಲೇಶ್ವರ ಭಟ್ಟ,ಕೆ.ವಿ.ಸುಬ್ಬಣ್ಣ,ಟಿ.ಪಿ. ಆಶೋಕ್ ಹೀಗೆ ಘಟಾನುಘಟಿಗಳ ಬರಹ ಮತ್ತು ಚಿಂತನೆಗಳು ನಮ್ಗೆ ಪ್ರೇರಣೆಯನ್ನು ಧಾರಣೆ ಮಾಡುತ್ತಿದ್ದವು. ಅವರೆಲ್ಲನ್ನೂ ನೆನದ ಕೂಡಲೇ ಬರೆಯುವ ಪೆನ್ನು ಎಚ್ಚರವಾಗುತ್ತಿತ್ತು. ಬದುಕಿನ ಅನಂತೆಯನ್ನು ಕಂಡು ಕಾಣಿಸುವ ಬರಹಗಾರರಿಕೆಗೆ ಮನಸ್ಸು ತುಡಿಯುತ್ತಿತ್ತು.

ಪ್ರಥಮ ಪಿ.ಯು.ಸಿ.ಓದ್ತಾ ಇದ್ದ ನಾನು ಕಾಲೇಜು ಮುಗಿಸಿಕೊಂಡು ಕೆಲಸಕ್ಕೆ ಹೋಗುತ್ತಿದ್ದೆ. ಸಾಗರ ಮುದ್ರಣ ಎನ್ನುವ ಪ್ರಿಟಿಂಗ್ ಪ್ರೇಸ್ ನಲ್ಲಿ ಕೆಲಸ. ಮೊಳೆ ಜೋಡಿಸಿವು ವಿಭಾಗದಲ್ಲಿ ಕನ್ನಡವನ್ನು ಜೋಡಿಸುತ್ತಿದ್ದೆ. ಮಧ್ಯಾಹ್ನದಿಂದ ಸಂಜೆ ಎಂಟು ಘಂಟೆಯ ತನಕ ದುಡಿಮೆ. ಕಾಲೇಜು ಮುಗಿಸಿಕೊಂಡು ಬರುವಾಗ ಗೆಳೆಯ ರಾಜಾರಾಂ ಪೈ ವಾಚ್ ರಿಪೇರಿ ಅಂಗಡಿಯಲ್ಲಿ ಕೂತು ಒಂದಿಷ್ಟು ಹರಟೆ ಹೊಡೆದು ಬರುತ್ತಿದ್ದೆ. ಅದು ಐದಾರು ಜನರ ನಮ್ಮ ಅಡ್ಡೆಯಾಗಿತ್ತು.

ಹೊಸ ಪುಸ್ತಕಗಳು,ಹೊಸ ಸಿನಿಮಾಗಳು,ನಾಟಕಗಳು,ಬ್ಯೂಟಿಪುಲ್ ಹುಡ್ಗಿಯರು ಅಬ್ಬಾ ಹೀಗೆ ಎಲ್ಲವನ್ನು ಚಕ್ಕಲುಬಕ್ಕಲು ಹಾಕ್ಕೊಂಡು ಕೂತು ಚರ್ಚೆ ಮಾಡುತ್ತಿದ್ದೇವಿ.ಹೀಗೆ ಹರಟೆ ಕೊಚ್ಚುವಾಗ ಜಾತಿ ವ್ಯವಸ್ಥೆಯ ಬಗ್ಗೆ ದೊಡ್ಡದಾಗಿಯೇ ಚರ್ಚೆ ಅಯ್ತು. ವಿದ್ಯಾವಂತರು ಹೇಗೆ ಅದನ್ನು ತಮ್ಮೋಳಗೆ ಸಾಕಿ ಕೊಂಡಿರುತ್ತಾರೆ ಎನ್ನುವುದ ಕುರಿತು ಗಂಭೀರವಾದ ಚರ್ಚೆಯನ್ನು ಅವತ್ತು ಒಂದು ದಿನ ಮಾಡಿದ್ದೀವಿ. ಅಂದಿನ ಚರ್ಚೆ ಇಟ್ಟುಕೊಂಡು ದ್ವಂದ್ವ ಎನ್ನುವ ಕಥೆಯನ್ನು ನಾನು ಬರೆದೆ. 

ಪ್ರೇಸ್ ಗೆ ತುಸು ಬೇಗ ಬರಲು ಹೇಳಿದ್ದ ಕಾರಣ ಗೆಳೆತಿ ವೀಣಾ ಬಾಯಿ ಕೈಯಲ್ಲಿ ಗುಬ್ಬಿ ಕಾಲು ಕಾಗೆ ಕಾಲು ಲಿಪಿಗಳಿದ್ದ ಹಾಳೆಯನ್ನು ಕೊಟ್ಟು ಟೈಪ್ ಮಾಡಿ ಕೊಡು ಅಂದೆ. "ಹೋಗೋ ನಂಗೆ ಬೇರೆ ಕೆಲ್ಸ" ಅಂದ್ಲು. "ಕಥೆ ಕಳುಹಿಸಬೇಕಾಗಿತ್ತು. ಸರಿ ಬಿಡು ನಾಳೆ ನಾನೇ ಮಾಡಿ ಕೊಳುತ್ತೀನಿ" ಎಂದೆ. "ನಿನ್ನ ಕಥೆನಾ ಕೊಡೊಪ್ಪ ನಾನು ಓದ್ಹಂಗೆ ಅಗುತ್ತೇ. ಟೈಪ್ ಮಾಡುತ್ತೀನಿ" ಅಂತ ಆಕೆ ತೆಗೆದ್ಕೊಂಡು ಹೋದ್ಲು. ಆಕೆಯ ನಗು,ಹೋಗೋ ಎಂದು ಹೇಳಿದ ಸೊಲ್ಲು ಅವತ್ತಿನ ಎಲ್ಲ ಕೆಲಸಕ್ಕೂ ಚೇತನ ತುಂಬಿತ್ತು. ಆಹ್ಹ ಹುಡುಗಿಯೊಬ್ಬಳ ಮಾತು, ನಗು,ಸ್ಪರ್ಶದಲ್ಲಿ ಎಂಥ ಶಕ್ತಿ ಇರುತ್ತೇ ಅಲ್ವಾ? ಅದೆಲ್ಲವನ್ನು ನಾನು ಅವತ್ತು ಅನುಭವಿಸಿದೆ. ಹೃದಯದ ತುಂಬೆಲ್ಲ ಅವಳದ್ದೆ ಘಲ್ ಘಲ್ ಸದ್ದು. 

ಮರು ದಿವ್ಸ ಕಾಲೇಜುನಲ್ಲಿ ಟೈಪ್ ಮಾಡಿದ ಕಥೆ ಕೊಟ್ಟಳು."ಚನ್ನಾಗಿ ಇದೆ ಕಾಣೋ.ಯಾವುದರೂ ಮ್ಯಾಗಜೀನ್ ಗೆ ಕಳುಹಿಸು" ಅಂದ್ಲು. ನೋಡೋಣ ಅಂತ್ಹೇಳಿ ಸೈಕಲ್ ಏರಿದೆ. ಸಿದ್ದು ಅಂದ್ಲು. ಅಬ್ಬಾ ಎಷ್ಟು ಚೆಂದ ಇತ್ತು ಅಂದರೂ ನನ್ನೋಳಗೆ ವೀಣೆಯ ತಂತಿಯನ್ನು ಮೀಟಿದ್ದಂತೆ ಅಗಿತ್ತು. ತುಂಬಾ ಮಧುರವಾದ ಧ್ವನಿ ಅದು. ಸಾಮಾನ್ಯವಾಗಿ ನನ್ನನ್ನು ಅವಳು ಮಾತ್ರ ಹೀಗೆ ಕರೆದ್ದಿದ್ದಳು. ಸುಮ್ಮನೆ ಇರುತ್ತ ಈ ಹಾಳು ಮನಸ್ಸು. ಸಂಭ್ರಮದಲ್ಲಿ ತೇಲಾಡಿತ್ತು. ಆಕೆಯನ್ನು ಪ್ರೀತಿಯಿಂದ ನೋಡಿದೆ. ನಕ್ಕೆ. ಅಷ್ಟು ಹೊತ್ತಿಗೆ ಆಕೆಯ ಗೆಳತಿ ಸವಿತ ಬಂದ್ಲು. ಈ ಟೈಮ್ಗೆ ಬರಬೇಕಾ ಈ ಮೂದೇವಿ ಅಂತ ಶಪಿಸ್ಕೊಂಡು ಮನೆ ದಾರಿ ಹಿಡಿದಿದ್ದೆ. ಈ ಕಥೆಯನ್ನು ಯಾವುದಕ್ಕೆ ಕಳುಹಿಸಲಿ ಅನ್ನುವ ಯೋಚನೆ ತಲೆಯಲ್ಲಿ ಗುಯ್ ಗುಡುತ್ತಿತ್ತು. 

ಬಹುಶಃ ಎರಡು ತಿಂಗಳು ಕಳೆದು ಹೋಗಿತ್ತು. ನನ್ನಲ್ಲಿ ಕಥೆ ಹಾಗೆ ಉಳಿಯಿತ್ತು. ಚನ್ನಾಗಿ ನೆನಪಿದೆ. ಬೆಳಿಗ್ಗೆ ಹತ್ತರ ಸಮಯ.  ಅವತ್ತು ಕನ್ನಡ ಪಿರೀಯಡ್ ಇರಲಿಲ್ಲ. ಲೈಬ್ರರಿಯತ್ತ ಹೆಜ್ಜೆ ಹಾಕುತ್ತಿದ್ದೆ. ವೀಣಾ ಬಾಯಿ ಅವಸರವಾಗಿ ಓಡಿ ಬಂದ್ಲು. "ಎಲ್ಲಿಗೋ?" ಅಂದ್ಲು. "ನಿಧಾನ ಯ್ಯಾಕೆ ಲೈಬ್ರರಿಗೆ ಹೋಗ್ರಾ ಇದ್ದೆ "ಎಂದು ನಿಂತ್ಕೊಂಡೆ. "ಅಯ್ಯೋ ಬಾರೋ ನಿನ್ನ ಹತ್ರ ಅರ್ಜೆಂಟ್ ಕೆಲ್ಸ ಇದೆ" ಎಂದು ಕೈ ಹಿಡಿದು ಎಳೆದಳು. 

ಸ್ಪರ್ಶ. ಮಧುರವಾದ ಸ್ಪರ್ಶ. ವಾಹ್ ಎಷ್ಟು ಚೆಂದ ಈ ಸ್ಪರ್ಶ.ಕರಗಿದೆ. ಪೂರ್ತಿ ಕರಗಿದೆ. ಅವಳನ್ನು ಹಿಂಬಾಲಿಸಿದೆ. ಕಾಲೇಜಿನ ಪಕ್ಕದಲ್ಲಿದ್ದ ಬಾವಿ ಬಳಿ ಕರೆದ್ಕೊಂಡು ಹೋದಳು. ಸಾಮಾನ್ಯವಾಗಿ ಹುಡ್ಗರು ಹುಡ್ಗರಿಯರು ಈ ಬಾವಿ ಕಟ್ಟೆ ಮೇಲೆ ಕೂರುವ ಅಭ್ಯಾಸ ಇತ್ತು. ಅಲ್ಲಿ ಹೋಗಿ ಇಬ್ಬರೂ ಕುಳಿತ್ತೇವು.

ಕೈಯಲ್ಲಿದ್ದ ಮಂಗಳವಾರಪತ್ರಿಕೆಯನ್ನು ನನ್ನ ಕೈಗೆ ಕೊಟ್ಟು "ನನ್ನ ಬೆಸ್ಟ್ ಪ್ರೆಂಡ್ ಕಥೆ ಬಂದಿದೆ. ನೋಡೋ" ಎಂದಳು.ವಾರಪತ್ರಿಕೆಯ ಪುಟಗಳನ್ನು ತಿರುವುತ್ತ "ಏನು ನಿನ್ನ ಪ್ರೆಂಡ್ ಹೆಸ್ರು"ಅಂದೆ. "ನೋಡಪ್ಪ ನಿಂಗೆ ಗೊತ್ತಾಗುತ್ತೆ. ಅವನ ಪರಿಚಯ ಇದೆ ನಿಂಗೆ" ಅಂದ್ಲು. ತುಸು ಅಸಮಾಧಾನ. ಇವಳಿಗೆ ಇನ್ನೊಬ್ಬ ಬೆಸ್ಟ್ ಪ್ರೆಂಡ್ ಇದ್ದಾನೆ ಎನ್ನುವ ಅಸೂಯೆಯಿಂದಲೇ ಪುಟಗಳನ್ನು ತಿರುವಿದೆ. ಅದರೆ ಮನಸ್ಸು ಮತ್ತು ಕಣ್ಣು ಪುಟಗಳನ್ನು ನೋಡಲೇ ಇಲ್ಲ. "ಯಾರದ್ದು ಇಲ್ಲ" ಅಂತ ವಾರ ಪತ್ರಿಕೆಯನ್ನು ಅಕೆಯ ಕೈಗೆ ಕೊಟ್ಟೆ. "ಹೇ ಸರಿಯಾಗಿ ನೋಡೋ" ಅಂತ ಮತ್ತೊಮ್ಮ ನನ್ನ ಕೈಗೆ ಇಟ್ಟಳು. "ಹೇ ಹೆಸ್ರು ಹೇಳು ಹುಡುಕಿ ಓದುತ್ತೀನಿ"

"ಸರಿಯಾಗಿ ನೋಡೋ ಕಥಾವಿಭಾಗ ನೋಡು ಸಾಕು" ಅಂತ ನನ್ನ ಕಡೆ ನೋಡಿದಳು. ಎರಡನೇಯ ಪುಟ. ಕಥೆಗಳ ಶೀರ್ಷಿಕೆ ನೋಡಿದೆ. ಮತ್ತೆ ಮತ್ತೆ ನೋಡಿದೆ. ಅರೆ ನನ್ನ ಕಥೆ ದ್ವಂದ್ವ ಪ್ರಕಟವಾಗಿದೆ. ಸಿ.ಎಸ್.ನಿರ್ವಾಣ ಸಿದ್ದಯ್ಯ ಅಂತ ಹೆಸರಿದೆ. ಅಚ್ಚರಿಗೊಂಡೆ. "ನಾನು ಕಳುಹಿಸಿಲ್ಲ ವೀಣಾ ಹೇಗೆ ಬಂತು?" ಅಂತ ಅಚ್ಚರಿ ವ್ಯಕ್ತಪಡಿಸಿದೆ. ಅಕೆ "ನಾನೇ ಕಳುಹಿಸಿದ್ದು"ಎಂದು ಹೇಳಿದಾಗ ಗೊತ್ತಿಲ್ಲದೇ ಕಣ್ಣಲ್ಲಿ ಹನಿಗಳು ತುಂಬಿದವು. ಅದೇನೋ ಸಂಭ್ರಮ ಹೇಳಲಿಕ್ಕೆ ಪದಗಳು ಇಲ್ಲ. ಆ ಅವರ್ಣನೀಯ ಅನಂದ ಬದುಕಿನಲ್ಲಿ ಮತ್ತೆ ಎಂದು ನೋಡಲಿಲ್ಲ.

ಅವತ್ತು ಇಬ್ಬರೂ ಕೈ ಕೈ ಹಿಡಿದು ಓಡಾಡಿದ್ದೀವಿ. ಟಾನು ಟಾನುಗಟ್ಟಲೇ ಮಾತನಾಡಿ ಕೊಂಡೇವಿ. ಕೈ ರೆಟ್ಟೆ ಮೇಲೆ ಒರಗಿ "ನನ್ನ ಸಿದ್ದು ಬಾಳು ಬಂಗಾರವಾಗ್ವೇಕು" ಪಿಸುಗುಟ್ಟಿ "ಇದು ನಾನು ನಿಂಗೆ ಕೊಟ್ಟ ಉಡುಗೊರೆ" ಅಂದ್ಲು. 

ಇಂದು ಆಕೆ ನನ್ನ ಜೊತೆ ಇಲ್ಲ. ಮದುವೆಯಾಗಿ ಮೂರು ಮುದ್ದಾದ ಮಕ್ಕಳನ್ನು ಹೆತ್ತಿದ್ದಾಳೆ. ಆದರೆ ಅವಳು ನನ್ನ ಬದುಕಿಗೆ ಕೊಟ್ಟ ಆ ಉಡುಗೊರೆ ಇಂದು ಮಾಸಿಲ್ಲ. ಗುಟುಕು ಜೀವ ಇರುವ ತನಕ ಇರುತ್ತೇ ಅಲ್ವಾ? ಇರಲೇ ಬೇಕು. ಇದ್ದಾಗ ಮಾತ್ರ ಬರವಣಿಗೆ ಕಾವು ಬರುತ್ತೆ. 

ಮೊದಲ ಕಥೆಗೆ ಬಂದ ಪತ್ರ




 


June 20, 2021

ತೋಟಗೆರೆ:ಪತ್ರಿಕಾ ವಿತರಕರಿಗೆ ಆಹಾರದ ಕಿಟ್ ವಿತರಣೆ

 ತೋಟಗೆರೆ:ಪತ್ರಿಕಾ ವಿತರಕರಿಗೆ ಆಹಾರದ ಕಿಟ್ ವಿತರಣೆ

{ಹೆಸರಘಟ್ಟ ಸಮೀಪ ದಾಸನಪುರ ಹೋಬಳಿಯ ತೋಟಗೆರೆ ಗ್ರಾಮದಲ್ಲಿ ಪತ್ರಿಕೆ ವಿತರಕರಿಗೆ ದಿನಸಿ ಸಾಮಾಗ್ರಿಗಳ ಕಿಟ್ ನ್ನು ವಿತರಿಸಲಾಯಿತ್ತು ಈ ಕುರಿತು ವರದಿ ಇಲ್ಲಿದೆ. }

June 15, 2021

ನಿಧನ

 

                                ಬಿ.ಹೆಚ್.ಬೈರೇಗೌಡ

ಹೆಸರಘಟ್ಟ:-ಹಿರಿಯ ಕಾಂಗ್ರೇಸ್ ಮುಖಂಡ ಬ್ಯಾತ ಗ್ರಾಮದ ನಿವಾಸಿಯಾದ ಬಿ.ಹೆಚ್.ಬೈರೇಗೌಡ (89) ಅವರು ವಯೋಸಹಜ ಕಾಯಿಲೆಗಳಿಂದ ಮೃತಪಟ್ಟಿದ್ದಾರೆ.ಅವರು ಒಬ್ಬರು ಪತ್ನಿ, ನಾಲ್ಕು ಗಂಡು ಮಕ್ಕಳು ಮತ್ತು ಎರಡು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

ಬ್ಯಾತ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿದ್ದ ಅವರು ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘ,ಪಶು ವೈದ್ಯಕೀಯ ಮತ್ತು ಆಯುರ್ವೇದ ಚಿಕಿತ್ಸಾಲಯಗಳನ್ನು ಸ್ಥಾಪನೆ ಮಾಡಲು ಶ್ರಮಿಸಿದ್ದರು. ಮೃತರ ಅಂತ್ಯ ಕ್ರಿಯೆಯು ಬ್ಯಾತ ಗ್ರಾಮದಲ್ಲಿ ಮಂಗಳವಾರ ಮಧ್ಯಾಹ್ನ ನೇರವೇರಿತ್ತು. 

 

ಅಡುಗೆ ಅನಿಲ ತಲೆ ಮೇಲೆ ಹೊತ್ತು ಪ್ರತಿಭಟನೆ

 

        ಅಡುಗೆ ಅನಿಲ ತಲೆ ಮೇಲೆ ಹೊತ್ತು ಪ್ರತಿಭಟನೆ

{ಹೆಸರಘಟ್ಟ ಹೋಬಳಿ ರಾಜಾನುಕುಂಟೆ ಗ್ರಾಮದಲ್ಲಿ ಯಲಹಂಕ ಮುಖ್ಯರಸ್ತೆಯಲ್ಲಿರುವ ಪೆಟ್ರೋಲ್ ಬಂಕ್ ಬಳಿ ಕಾಂಗ್ರೇಸ್ ಕಾರ್ಯಕರ್ತರು ಅಡುಗೆ ಅನಿಲವನ್ನು ತಲೆ ಹೊತ್ತು ವಿನೂತನವಾಗಿ ಪ್ರತಿಭಟನೆ ನಡೆಸಿದರು. ಈ ಕುರಿತು ವರದಿ ಇಲ್ಲಿದೆ}


 ಬೆಲೆ ಏರಿಕೆಯನ್ನು ಖಂಡಿಸಿ ರಾಜಾನುಕುಂಟೆ ಗ್ರಾಮದಲ್ಲಿ ಕಾಂಗ್ರೇಸ್ ಮುಖಂಡರು ಅಡುಗೆ ಅನಿಲವನ್ನು ತಲೆ ಮೇಲೆ ಹೊತ್ತು ಪ್ರತಿಭಟನೆ ನಡೆಸಿದರು. ಹಿರಿಯ ಕಾಂಗ್ರೇಸ್ ಮುಖಂಡ ಚೊಕ್ಕನಹಳ್ಳಿ ವೆಂಕಟೇಶ್,ಲಾವಣ್ಯ,ಗ್ರಾಮ ಪಂಚಾಯಿತಿ ಸದಸ್ಯರಾದ ನರಸಿಂಹಮೂರ್ತಿ ಹಾಗೂ ಹೆಸರಘಟ್ಟ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ನಾರಾಯಣ್ಣಪ್ಪ ಇದ್ದರು.

ಹೆಸರಘಟ್ಟ:-ರಾಜಾನುಕುಂಟೆ ಕಾಂಗ್ರೇಸ್ ಮುಖಂಡರು ಅಡುಗೆ ಅನಿಲವನ್ನು ತಲೆಯ ಮೇಲೆ ಹೊತ್ತು ಬೆಲೆ ಏರಿಕೆಯನ್ನು ಖಂಡಿಸಿ ವಿನೂತನವಾಗಿ ಪ್ರತಿಭಟನೆ ನಡೆಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಚೊಕ್ಕನಹಳ್ಳಿ ವೆಂಕಟೇಶ್ ಅವರು ಮಾತನಾಡಿ "ಕೇಂದ್ರ ಸರ್ಕಾರ ಮಧ್ಯಮ ವರ್ಗದವರ ಬಾಳನ್ನು ಹಾಳುಗೆಡವುತ್ತಿದೆ. ಕೋವಿಡ್ ನಿಂದ ಕೆಲಸವಿಲ್ಲದೇ ಜನರು ಪೇಚಾಡುತ್ತಿದ್ದಾರೆ. ಇಂಥ ಹೊತ್ತಿನಲ್ಲಿ ಬೆಲೆ ಏರಿಕೆ ಮಾಡಿ ಕೇಂದ್ರ ಸರ್ಕಾರ ಜನರ ನೆಮ್ಮದಿಯನ್ನು ಕಸಿಯುತ್ತಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.

"2013ರಲ್ಲಿ ಮನಮೋಹನ್ ಸಿಂಗ್ ಸರ್ಕಾರವಿದ್ದಾಗ ಪೆಟ್ರೋಲ್ ಬೆಲೆ ಕೇವಲ 67 ರೂಪಾಯಿ ಇತ್ತು. ಅಡುಗೆ ಅನಿಲ 322 ರೂ. ಈಗ ಪೆಟೋಲ್ ಬೆಲೆ ನೂರು ರೂಪಾಯಿಗಳ ಗಡಿ ದಾಟುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಜನ ಸಾಮಾನ್ಯರ ಬದುಕನ್ನು ಬೆಲೆ ಏರಿಕೆ ಮೂಲಕ ಉಸಿರುಗಟ್ಟಿಸುತ್ತಿದ್ದಾರೆ" ಎಂದು ಅವರು ತಿಳಿಸಿದರು.

ಸಿಂಗನಾಯಕನಹಳ್ಳಿ ಜಿಲ್ಲಾ ಪಂಚಾಯಿತಿ ಸದಸ್ಯೆ ಲಾವಣ್ಯ ಅವರು "ಬಿ.ಜೆ.ಪಿ. ಸರ್ಕಾರ ತೊಲಗದಿದ್ದರೆ ಜನ ಸಾಮಾನ್ಯರ ಬದುಕು ಬೀದಿಗೆ ಬೀಳುತ್ತದೆ. ಮೋದಿ ಪಠಿಸುತ್ತಿದ್ದ ಅಚ್ಚಾ ದಿನ್ ಇದೆನಾ? ಪ್ರಧಾನಿ ಮೋದಿ ಅವರು ಜನರಿಗೆ ನೀಡಿದ ಯಾವ ಭರವಸೆಗಳನ್ನು ಈಡೇರಿಸಿಲ್ಲ. ಬಿ.ಜೆ.ಪಿ. ನಡೆಸುತ್ತಿರುವ ದರ್ಬಾರು ರಾಜಕಾರಣವನ್ನು ಜನರು ಸೂಕ್ಷ್ಮವಾಗಿ ಗಮನಿಸುತ್ತಿದ್ದು ತಕ್ಕ ಉತ್ತರ ನೀಡಲಿದ್ದಾರೆ  ಎಂದು ಅವರು ಹೇಳಿದರು.

ಹೆಸರಘಟ್ಟ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ನಾರಾಯಣಪ್ಪ,ಗ್ರಾಮ ಪಂಚಾಯಿತಿ ಸದಸ್ಯರಾದ ನರಸಿಂಹಮೂರ್ತಿ ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.


June 14, 2021

ಅಬ್ಬಾ ಇಂಥ ಕರುಣೆ ಇರೋದು ಆಕೆಯಲ್ಲಿ ಮಾತ್ರ


         ಅಬ್ಬಾ ಇಂಥ ಕರುಣೆ ಇರೋದು ಆಕೆಯಲ್ಲಿ ಮಾತ್ರ

{ತಾಯಿ ಹೃದಯದಲ್ಲಿರುವ ಅಕ್ಕರೆ,ವಾತ್ಸಲ್ಯ,ಮಮತೆ,ಅನುರಾಗ ಕರುಣೆಗೆ, ಹೃದಯ ವೈಶಾಲತೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಬಹುಶಃ ನೀವೊಬ್ಬ  ಕೊಲೆಗಾರನಾದರೂ ನಿಮ್ಮನ್ನು ಒಪ್ಪುಕೊಳ್ಳುವ ಒಂದು ಮನಸ್ಸು ಇದೆ ಅಂದರೆ ಅದು ತಾಯಿ. ಇಂಥ ತಾಯಿಯ ಹೃದಯ ವಿಶಾಲತೆ ಬಗ್ಗೆ ಇರುವ ಸಣ್ಣ ಕಥೆ ಇದು. ಓದಿ ತಪ್ಪದೇ ಅಭಿಪ್ರಾಯ ಶೇರ್ ಮಾಡಿ}

ಆಕೆಯದು ನಳ ನಳಿಸುವ ಚೆಲುವು. ಚೆಂದದ ಮೊಗ,ನೀಳವಾದ ಕೇಶ,ಮಿಂಚಿನ ಕಣ್ಣುಗಳು,ಒಮ್ಮೆ ನಕ್ಕರೆ ದಾಳಿಂಬೆ ಹಣ್ಣಿನಂತೆ ಹೊಳೆಯುವ ಹಲ್ಲುಗಳು,ಎಲ್ಲವು ಬ್ಯೂಟಿಪುಲ್.ಸೃಷ್ಠಕರ್ತ ಬ್ರಹ್ಮನಿಗೆ ಬಿಡುವಿನ ಸಮಯವಿದ್ದರಿಂದ ಇವಳನ್ನು ಅಚ್ಚುಕಟ್ಟಾಗಿ ಕೆತ್ತಿ ಇಳೆಗೆ ಕಳುಹಿಸಿದ್ದೀನಿ.    

 ನಿಜ ಸುಮ ಅಂತಹ ಅಪರೂಪದ ಚೆಲುವಿನ ಗಣಿ.ಅವಳ ನಗು,ನೋಟ ಮಾತುಗಳಿಗೆ ರವಿ ಸೋತು ಹೋಗಿದ್ದ. ಹೆಸರಿಗೆ ರವಿಯಾದರೂ ಸುಮಳ ಸೌಂದರ್ಯಕ್ಕೆ ಕರಗಿದ,ಕನಸುಗಳಿಗೆ ಕಾವು ಕೊಟ್ಟು ಕನವರಿಸಲು ತೊಡಗಿದ.ಒಂದೊತ್ತಿನ ನಿದ್ರೆಗೂ ರಜೆ ಹಾಕಿ ಸುಮಳ ಧ್ಯಾನಿಸುತ್ತಿದ್ದ. ಕಲರ್ ಕಲರ್ ಡ್ರೀಮ್ ಗಳನ್ನು ಹೊಸೆಯುತ್ತಿದ್ದ. ಅವಳು ಸಿಕ್ಕರೆ ತಾನೆಷ್ಟು ಲಕ್ಕಿಫೆಲೋ ಅಂದು ಕೊಳ್ಳುತ್ತಿದ್ದ. 

ಅವತ್ತು ಸುಮ ದಾರಿಯಲ್ಲಿ ಒಬ್ಬಳೇ ನಡೆದುಕೊಂಡು ಬರುತ್ತಿದ್ದಳು. ರವಿಗೆ ಅವಳ ನೋಡಿದ ಕೂಡಲೇ ಸಂಭ್ರಮ ಪುಟಿದು ಬಂತು.ತನ್ನಲ್ಲಿ ಉದಯವಾಗಿರುವ ಪ್ರೀತಿಯನ್ನು ಪ್ರೇಮವನ್ನು ಕರೆದಿಟ್ಟ ಒಲವವನ್ನು ಹೊರಗೆ ಅಭಿವ್ಯಕ್ತ ಮಾಡುವ ಮಿಡಿತ ಹೊರ ಹೊಮ್ಮಿತ್ತು. ಸೀದಾ ಸುಮಳ ಬಳಿ ಹೋಗಿ ನಿಂತ. ಅವಳನ್ನು ದಿಟ್ಟಿಸಿ ನೋಡಿದ. ಸುಮ ತುಸು ಗಾಬರಿಯಾದರೂ ಏನೋ ಎಂಬಂತೆ ಅವನನ್ನು ನೋಡಿದಳು. ರವಿ ಅಕೆಯನ್ನು ನೋಡ್ತಾ "ನಾನು ನಿನ್ನ ಪ್ರೀತಿಸುತ್ತಿದ್ದೀನಿ. ನಿನಗಾಗಿ ನಿನ್ನ ಪ್ರೀತಿಗಾಗಿ ಯಾವ ತ್ಯಾಗವಾದರೂ ಸರಿ ಮಾಡ್ತಾನಿ. ಪ್ಲೀಸ್ ನನ್ನ ಪ್ರೀತಿಸು" ಎಂದು ಒಂದೇ ಉಸಿರಿಗೆ ಹೃದಯದ ಮಾತುಗಳನ್ನು ಬಸಿದ.   

 ಸುಮ ಅವನನ್ನು ನೋಡಿ ನಕ್ಕು, "ನನಗಾಗಿ ನೀನು ಏನು ಬೇಕಾದರೂ ಮಾಡುತ್ತೀಯ" ಅಂದ್ಲು. ಇವನಿಗೆ ಅಂಗೈಯಲ್ಲಿ ಆಕಾಶವೇ ತುಂಬಿ ಹೋದ ಅನುಭವವಾಯಿತ್ತು. ಅದೇನೋ ಹುಮ್ಮಸ್ಸು ದೇಹದಲ್ಲಿ ತುಂಬಿ ಬಂತು. "ಹುಂ ನಿನಗಾಗಿ ನಿನ್ನ ಪ್ರೀತಿಗಾಗಿ ಏನು ಬೇಕಾದರೂ ಮಾಡುತ್ತೀನಿ"ಅಂದ. ಸುಮ ಅವನನ್ನು ಅಡಿಯಿಂದ ಮುಡಿಯ ತನಕ ನೋಡಿದಳು. ಮತ್ತೆಗೆ ಹೇಳಿದಳು "ನನಗಾಗಿ ಏನು ಬೇಕಾದರೂ ಮಾಡ್ತೀಯ. ಏನು ಮಾಡೋದು ಬೇಡ. ನಿನ್ನ ತಾಯಿ ಹೃದಯ ತಂದು ಕೊಡುತ್ತೀಯ" ಎಂದಳು. ರವಿ ಹಿಂದೂ ಮುಂದೂ ಯೋಚನೆ ಮಾಡಿದೆ "ಓ ಐದೇ ನಿಮಿಷ ಇರು ತಂದು ಬಿಡುತ್ತೀನಿ" ಎಂದು ಅವಳ ಉತ್ತರಕ್ಕೆ ಕಾಯದೇ ಓಡಿದ. 

ರವಿ ಹಿಂದೂ ಮುಂದೂ ಯೋಚನೆ ಮಾಡಿದೆ "ಓ ಐದೇ ನಿಮಿಷ ಇರು ತಂದು ಬಿಡುತ್ತೀನಿ" ಎಂದು ಅವಳ ಉತ್ತರಕ್ಕೆ ಕಾಯದೇ ಓಡಿದ. ಮನೆಗೆ ಬಂದ. ತಾಯಿ ಮಲಗಿದ್ದಳು. ಚಾಕಿವಿನಿಂದ ತಾಯಿಯ ಹೃದಯವನ್ನು ಬಗೆದೆ. ಬೊಗಸೆಯಲ್ಲಿ ರಕ್ತ ತುಂಬಿದ ಹೃದಯವನ್ನು ಹಿಡಿದು ಕೊಂಡು ಸುಮಳ ಬಳಿ ಓಡಿ ಬರುತ್ತಿದ್ದ. ಓಡುವ ರಭಸಕ್ಕೆ ಎಡವಿ ದುಪ್ಪನೆ ಬಿದ್ದ. ಬೊಗಸೆಯಲ್ಲಿದ್ದ ತಾಯಿ ಹೃದಯ ಕೇಳಿತ್ತು" ಮಗನೇ ಬಿದ್ದೆಯಲ್ಲ ನೋವಾಯಿತ್ತ"ಎಂದ. ರವಿಗೆ ಆ ತಾಯಿಯ ಹೃದಯದ ಮಾತು ಕೇಳಿಸಲಿಲ್ಲ. ಸುಮ ಅಲ್ಲಿ ಇರಲಿಲ್ಲ. ತಾಯಿಯ ಹೃದಯದ ಬಡಿತ ನಿಂತಿತ್ತು.ರವಿಯ ಕಣ್ಣು ಕತ್ತಲೆಗೆ ಜಾರಿತ್ತು. 

                           *

. ಸ್ನೇಹಿತರೇ ಇದೊಂದು ಪುಟಾಣಿ ಕಥೆ. ಆದರೆ ಇಲ್ಲಿ ನೀವು ಗಮನಿಸಬಹುದು ತನ್ನನ್ನು ಕೊಂದು ಬಂದ ಮಗ ಕಾಲು ಎಡವಿ ಬಿದ್ದಾಗ "ಮಗನೇ ನೋವಾಯಿತ್ತ" ಎಂದು ಕೇಳುವಷ್ಟು ಈ ಜಗತ್ತಿನಲ್ಲಿ ಹೃದಯ ವೈಶಾಲತೆ ಇದ್ದರೆ ಅದು ತಾಯಿಗೆ ಮಾತ್ರ.ಅಲ್ಲವೇ? ನಿಮ್ಮ ಅಭಿಪ್ರಾಯ ತಿಳಿಸಿ  




June 13, 2021

ಕನ್ನಡ ಚಿತ್ರರಂಗದ ನಿರ್ಮಾಪಕ ಕೆ.ಸಿ.ಎನ್. ಚಂದ್ರಶೇಖರ್ ಇನ್ನಿಲ್ಲ

 ಕನ್ನಡ ಚಿತ್ರರಂಗದ ನಿರ್ಮಾಪಕ ಕೆ.ಸಿ.ಎನ್. ಚಂದ್ರಶೇಖರ್ ಇನ್ನಿಲ್ಲ



{ಹುಲಿಹಾಲಿನ ಮೇವು ಚಿತ್ರವನ್ನು ನಿರ್ಮಿಸಿದ್ದ,ಬೆಂಗಳೂರಿನ ನವರಂಗ್,ಊರ್ವಶಿ,ದೊಡ್ಡಬಳ್ಳಾಪುರದ ರಾಜ್ ಕಮಲ್ ಚಿತ್ರ ಮಂದಿರಗಳ ಮಾಲೀಕರಾದ ಕೆ.ಸಿ.ಎನ್. ಚಂದ್ರಶೇಖರ್ ಸೋಮವಾರ ನಿಧನರಾಗಿದ್ದಾರೆ. ಈ ಕುರಿತು ವರದಿ ಇಲ್ಲಿದೆ.}

ಬೆಂಗಳೂರು ಜೂನ್ 14:-ಕನ್ನಡ ಚಿತ್ರರಂಗದ ನಿರ್ಮಾಪಕ ಕೆ.ಸಿ.ಎನ್.ಚಂದ್ರಶೇಖರ್ (69) ಸೋಮವಾರ ನಿಧನವಾಗಿದ್ದಾರೆ. ಕನ್ನಡ,ತೆಲಗು,ತಮಿಳು,ಬಂಗಾಲಿ ಭಾಷೆಗಳಲ್ಲಿ  ಸಿನಿಮಾಗಳನ್ನು ಅವರು ನಿರ್ಮಿಸಿದ್ದರು. ಕೆಲ ದಿನಗಳಿಂದ ಅವರು ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು.

1979ರಲ್ಲಿ ಡಾ.ರಾಜ್ ಕುಮಾರ್ ಅವರಿಗೆ  ಹುಲಿಯ ಹಾಲಿನ ಮೇವು ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಶಂಕರ್ ಗುರು ಸಿನಿಮಾಕ್ಕೆ ಸಹ ನಿರ್ಮಾಪಕರಾಗಿದ್ದರು. (1981ರಲ್ಲಿ) ನಾನೊಬ್ಬ ಕಳ್ಳ ಚಿತ್ರದಲ್ಲಿ ಅಭಿನಯವನ್ನು ಮಾಡಿದ್ದರು. ಭಕ್ತ ಜ್ಞಾನದೇವ,ಧರ್ಮಯುದ್ದ,ತಾಯಿ ಸೇರಿದ್ದಂತೆ ಸುಮಾರು 50 ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಾಣ ಮಾಡಿದ್ದರು. 

ಎರಡು ಬಾರಿ ಕರ್ನಾಟಕ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿ,ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿಯೂ ತಮ್ಮ ಸೇವೆಯನ್ನು ಸಲ್ಲಿಸಿದ್ದರು. ಭಾರತೀಯ ಚಲನಚಿತ್ರ ಒಕ್ಕೂಟದ ಅಧ್ಯಕ್ಷರಾಗಿ ಮೂರು ಬಾರಿ ಆಯ್ಕೆಯಾಗಿದ್ದರು. 

ಕೆ.ಸಿ.ಎನ್. ಚಂದ್ರಶೇಖರ್ ಅವರ ನಿಧನಕ್ಕೆ ಕನ್ನಡ ಚಿತ್ರರಂಗದ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. 

June 12, 2021

ಚಿ.ಶಿ.ನಿ.ನ್ಯೂಸ್ ಪಂಚಭೂತಗಳಲ್ಲಿ ಲೀನವಾದ ಸಿದ್ದಲಿಂಗಯ್ಯ

 ಪಂಚಭೂತಗಳಲ್ಲಿ ಲೀನವಾದ ಸಿದ್ದಲಿಂಗಯ್ಯ



ಬೆಂಗಳೂರು ಜೂನ್ 12:-ದಲಿತ ಪ್ರತಿಭಾನ್ವಿತ ಕವಿ,ಚಿಂತಕ ಸಿದ್ದಲಿಂಗಯ್ಯ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಕಲಾಗ್ರಾಮದಲ್ಲಿ ಇಂದು ಜರುಗಿತ್ತು. ಬೌದ್ದ ಧರ್ಮದ ವಿಧಿ ವಿಧಾನಗಳ ಮೂಲಕ ಅಂತಿಮ ಸಂಸ್ಕಾರವನ್ನು ನೇರವೇರಿಸಲಾಯಿತ್ತು. ಮಗ ಗೌತಮ್ ಅವರು ತಂದೆಯ ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಪತ್ನಿ ರಮಾ,ಮಗಳು ಮಾನಸ,ಅಳಿಯ ಗಿರಿ ಇದ್ದರು. ಸರ್ಕಾರಿದ ಪರವಾಗಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಾಣ ಅಂತಿಮ ಗೌರವನ್ನು ಸಲ್ಲಿಸಿದರು.

ಅಂತಿಮ ದರ್ಶನದಲ್ಲಿ ನೆನಪುಗಳ ಮೆರವಣಿಗೆ

ಅಭಿಮಾನಿಗಳಿಗೆ ಅಂತಿಮ ದರ್ಶನ ಪಡೆಯುವ ಅವಕಾಶವನ್ನು ಮಾಡಿ ಕೊಡಲಾಗಿತ್ತು. ಅಂತಿಮ ದರ್ಶನಕ್ಕೆ ಪಡೆದ ವಿದ್ಯಾರ್ಥಿಗಳ ವೃಂದ,ಸಾಹಿತಿಗಳು,ಚಿಂತಕರು,ಅಗಲಿದ ಕವಿ ಜೊತೆಗಿನ ನೆನಪುಗಳನ್ನು ಮೆಲಕು ಹಾಕಿದರು. ನೆನಪುಗಳ ಮೆರವಣಿಗೆ ಅಲ್ಲಿ ನಡೆಯಿತ್ತು

June 11, 2021

ಸಿದ್ದಲಿಂಗಯ್ಯ ನಿಧನ

                  ದಲಿತ ಕವಿ ಸಿದ್ದಲಿಂಗಯ್ಯ ನಿಧನ

                          ಕನ್ನಡ ಸಾಹಿತ್ಯದ ಹಿರಿಯ ಕವಿ ಸಿದ್ದಲಿಂಗಯ್ಯ ಇಂದು ನಿಧನರಾಗಿದ್ದಾರೆ.  

ಬೆಂಗಳೂರು ಜೂನ್ 11:-ಕನ್ನಡದ ಹಿರಿಯ ಬರಹಗಾರ ಕವಿ ಸಿದ್ದಲಿಂಗಯ್ಯ ಅವರು ಕೊರೊನಾ ಸೋಂಕಿನಿಂದ ಶುಕ್ರವಾರ ನಿಧನವಾಗಿದ್ದಾರೆ. ಕೋವಿಡ್ ಸೋಂಕು ತಗಲಿ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಅವರು ದೈವದೀನರಾಗಿದ್ದಾರೆ. ಅವರಿಗೆ ಎರಡು ಜನ ಮಕ್ಕಳು ಇದ್ದರು. ಮಗಳು ಮಾನಸಿ ಮತ್ತು ಮಗ ಗೌತಮ್.

  ದಲಿತ ಭಾಷೆಯನ್ನು ಅದರ ಸೊಗಡನ್ನು ದಲಿತರ ಬದುಕಿನ ಮಗ್ಗಲನ್ನು ಅತ್ಯಂತ ಶಕ್ತಿಶಾಲಿಯಾಗಿ ಬರಹಕ್ಕೆ ಇಳಿಸಿದ ಪ್ರತಿಭಾವಂತ ಸಾಹಿತಿ ಅವರು. ಕವಿ,ವಿಚಾರವಂತರಾಗಿದ್ದ ಅವರು ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿದ್ದರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ ಕೆಲಸ ನಿರ್ವಹಿಸಿದ್ದರು. ಅಗಲಿದ ಕವಿಗೆ ಹಿರಿಯ ಸಾಹಿತಿಗಳು ಕಂಬನಿ ಮಿಡಿದಿದ್ದಾರೆ.



                                             ಸಿದ್ದಲಿಂಗಯ್ಯ ಅವರು ತುಂಬು ಕುಟುಂಬ

                                       ಪತ್ನಿ ರಮಾಕುಮಾರಿ,ಮಗಳು ಮಾನಸಿ,ಮಗ ಗೌತಮ್ ಜೊತೆ



ಚಿ.ಶಿ.ನಿ.ನ್ಯೂಸ್ --ಗೋಪಾಲಪುರ

 ವಿಕಲಚೇತನರಿಗೆ ಲಸಿಕೆ ಅಭಿಯಾನ

ಬೆಂಗಳೂರು ನಗರ ಜಿಲ್ಲೆ ದಾಸನಪುರ ಹೋಬಳಿ ಗೋಪಾಲಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿಕಲಚೇತನರಿಗೆ ಲಸಿಕೆ ಹಾಕುವ ಅಭಿಯಾನ ಕಾರ್ಯಕ್ರಮ ನಡೆಯಿತ್ತು. ಈ ಕುರಿತು ವರದಿ ಇಲ್ಲಿದೆ.


{ಬೆಂಗಳೂರು ಉತ್ತರ ತಾಲ್ಲೂಕಿನ ದಾಸನಪುರ ಹೋಬಳಿ ಗೋಪಾಲಪುರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿಕಲಚೇತನರಿಗೆ ಲಸಿಕೆ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ರವಿಕುಮಾರ್,ವಾತ್ಸಲ್ಯ ಮಹಿಳಾ ಸೇವಾ ಸಂಸ್ಥೆಯ ಅಧ್ಯಕ್ಷರಾದ ವೀಣಾ ರಮೇಶ್,ಗೋಪಾಲಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕಮಲಮ್ಮ ಉಪಸ್ಥಿತರಿದ್ದರು.}

ಬೆಂಗಳೂರು:-ದಾಸನಪುರ ಹೋಬಳಿ ಗೋಪಾಲಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿಕಲಚೇತನರಿಗೆ ಲಸಿಕೆ ಹಾಕುವ ಅಭಿಯಾನಕ್ಕೆ ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ನದೀಮ್ ವಿಕಲಚೇತನರೊಬ್ಬರಿಗೆ ಲಸಿಕೆ ಹಾಕುವ ಮೂಲಕ ಚಾಲನೆ ನೀಡಿದರು.

ನಾಲ್ಕು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಮಾರು 60 ವಿಕಲಚೇತನರಿಗೆ ಲಸಿಕೆಯನ್ನು ನೀಡಲಾಯಿತ್ತು. ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರವಿಕುಮಾರ್ ಅವರು ಮಾತನಾಡಿ "ವಿಕಲಚೇತನರಿಗೆ ಮನೆ ಮನೆಗಳ ಬಳಿ ಹೋಗಿ ಲಸಿಕೆ ಹಾಕುವ ಕಾರ್ಯಕ್ರಮವನ್ನು ಸರ್ಕಾರ ಹಮ್ಮಿಕೊಳ್ಳಬೇಕು. ಅವರ ಆರೋಗ್ಯದ ಬಗ್ಗೆ ಕಾಳಜಿಯನ್ನು ತೋರಬೇಕು. ಲಸಿಕೆಯು ಎಲ್ಲರಿಗೂ ತಲುಪಬೇಕಾಗಿದೆ" ಎಂದು ತಿಳಿಸಿದರು.

ಗೋಪಾಲಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕಮಲಮ್ಮ,ರೆಡ್ ಕ್ರಾಸ್ ಬೆಂಗಳೂರು ನಗರ ಘಟಕದ ಜಂಟಿ ಕಾರ್ಯದರ್ಶಿ ಎಚ್,ಅರ್,ರವೀಶ್ ಹಾಗೂ ವಾತ್ಸಲ್ಯ ಮಹಿಳಾ ಸೇವಾ ಸಂಸ್ಥೆಯ ಅಧ್ಯಕ್ಷರಾದ ವೀಣಾ ರಮೇಶ್ , ವಿಕಲಚೇತನದ ಸ್ಥಳೀಯ ಸಮಾಜ ಸೇವಕ ಅರುಣ್ ಕುಮಾರ್ ವೈದ್ಯಾಧಿಕಾರಿ ಜ್ಞಾನ ಪ್ರಕಾಶ್ ಉಪಸ್ಥಿತರಿದ್ದರು.  ಲಸಿಕೆ ಪಡೆದ ವಿಕಲಚೇತನರಿಗೆ ಮಹಾಲಕ್ಷ್ಮೀ ಲೇಔಟ್‍ನ ವಾಯ್ಸ ಆಫ್ ನೀಡ್ ಫೌಂಡೇಶನ್ ಉಚಿತ ಆಹಾರದ ಕಿಟ್‍ಗಳನ್ನು ವಿತರಿಸಿತ್ತು.

ಕಾರ್ಯಕ್ರಮವನ್ನು ಬೆಂಗಳೂರು ರೆಡ್ ಕ್ರಾಸ್ ಸಂಸ್ಥೆ ಮತ್ತು ಗೋಪಾಲಪುರ ಗ್ರಾಮ ಪಂಚಾಯಿತಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಆಯೋಜಿಸಲಾಗಿತ್ತು. 


ಲಸಿಕೆ ಪಡೆದ ವಿಕಲಚೇತನರಿಗೆ ಮಹಾಲಕ್ಷ್ಮೀ ಲೇಔಟ್‍ನ ವಾಯ್ಸ ಆಫ್ ನೀಡ್ ಫೌಂಡೇಶನ್ ಉಚಿತ ಆಹಾರದ ಕಿಟ್‍ಗಳನ್ನು ವಿತರಿಸಿತ್ತು.

June 10, 2021

ಚಿ.ಶಿ.ನಿ.ನ್ಯೂಸ್

 

ರಾಜಾನುಕುಂಟೆ:ಬಿ.ಪಿ.ಎಲ್. ಕುಟುಂಬಗಳಿಗೆ ಹತ್ತು ಸಾವಿರ ನೆರವಿಗೆ ಅಗ್ರಹ

ಹೆಸರಘಟ್ಟ ಹೋಬಳಿ ರಾಜಾನುಕುಂಟೆ ಗ್ರಾಮದಲ್ಲಿ  ಕಾಂಗ್ರೇಸ್ ಹಿರಿಯ ಮುಖಂಡ ಕೃಷ್ಣಬೈರೇಗೌಡ ಅವರು ಉಚಿತ ಆಹಾರ ಸಾಮಾಗ್ರಿಗಳ ಕಿಟ್‍ನ್ನು  ವಿತರಿಸಿದರು. ಈ ಕುರಿತು ವರದಿ ಇಲ್ಲಿದೆ.



ಹೆಸರಘಟ್ಟ ಹೋಬಳಿ ರಾಜಾನುಕುಂಟೆ ಗ್ರಾಮದಲ್ಲಿ  ಕಾಂಗ್ರೇಸ್ ಹಿರಿಯ ಮುಖಂಡ ಕೃಷ್ಣಬೈರೇಗೌಡ ಅವರು ಉಚಿತ ಆಹಾರ ಸಾಮಾಗ್ರಿಗಳ ಕಿಟ್‍ನ್ನು  ವಿತರಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯರಾದ ಲಾವಣ್ಯ,ಚೊಕ್ಕನಹಳ್ಳಿ ವೆಂಕಟೇಶ್,ಗ್ರಾಮ ಪಂಚಾಯಿತಿ ಸದಸ್ಯರಾದ ಎಸ್.ಜಿ.ನರಸಿಂಹಮೂರ್ತಿ,ಕಾಂಗ್ರೇಸ್ ಮುಖಂಡರಾದ ಕೇಶವ ರಾಜಣ್ಣ ಇದ್ದರು.

 ಹೆಸರಘಟ್ಟ:-"ಬಿ.ಪಿ.ಎಲ್. ಕುಟುಂಬಗಳಿಗೆ ತಲಾ ಹತ್ತು ಸಾವಿರ ಹಣವನ್ನು ಸರ್ಕಾರ ಸಂದಾಯ ಮಾಡಲಿ. ಮಕ್ಕಳ ವಿದ್ಯಾಭ್ಯಾಸ ಹೊಟ್ಟೆ ಬಟ್ಟೆಗೆ ಪೇಚಾಡುತ್ತಿರುವ ಕುಟುಂಬಗಳ ನೆರವಿಗೆ ಕೂಡಲೇ ಸರ್ಕಾರ ಧಾವಿಸಬೇಕು" ಎಂದು ಕಾಂಗ್ರೇಸ್ ಮುಖಂಡ ಕೃಷ್ಣಬೈರೇಗೌಡ ಅವರು ಒತ್ತಾಯಿಸಿದ್ದಾರೆ.

ಅವರು ರಾಜಾನುಕುಂಟೆ ಗ್ರಾಮದಲ್ಲಿ ಯಲಹಂಕ ಕಾಂಗ್ರೇಸ್ ಮುಖಂಡರು ಆಯೋಜಿಸಿದ್ದ ಆಟೋ ಚಾಲಕರು,ಆಶಾ ಕಾರ್ಯಕರ್ತರು,ಮತ್ತು ದಿನಗೂಲಿ ಕಾರ್ಮಿಕರಿಗೆ ಆಹಾರದ ಕಿಟ್‍ಗಳ  ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ

ಮಾತನಾಡಿದರು.

"ಬೆಲೆ ಏರಿಕೆಯಿಂದ ಜನರು ತತ್ತರಿಸಿ ಹೋಗಿದ್ದಾರೆ. ಡಿಸೇಲ್ ಮತ್ತು ಪೆಟ್ರೋಲ್ ಬೆಲೆ ಗಗನಕ್ಕೇರಿದೆ. ಈಗ ವಿದ್ಯುತ್ ದರವನ್ನು ಏರಿಕೆ ಮಾಡುವುದರ ಮೂಲಕ ಜನರಿಗೆ ಮತ್ತೊಂದು ಹೊರೆಯನ್ನು ಸರ್ಕಾರ ಹಾಕಿದೆ.  ಕೊರೊನಾದಿಂದ ಜನರು ನುಲುಗಿ ಹೋದರೆ ಸರ್ಕಾರ ಬೆಲೆಯನ್ನು ಏರಿಕೆ ಮಾಡಿ ಜನ ಸಾಮಾನ್ಯರ ಬದುಕನ್ನು ನಜ್ಜುಗುಜ್ಜಾಗಿಸಿದೆ" ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

"ಬಿ.ಜೆ.ಪಿ. ಸರ್ಕಾರ ಸುಲಿಗೆಗೆ ನಿಂತಿದೆ. ಇಂಥ ಹೊತ್ತಿನಲ್ಲಿ ನೀವುಗಳು ಮಾತನಾಡಬೇಕು. ಇಲ್ಲದಿದ್ದರೆ ಸರ್ಕಾರ ಜನ ಒಪ್ಪಿಕೊಂಡಿದ್ದಾರೆ ಎಂದು ಮನಸ್ಸಿಗೆ ಬಂದಂತೆ ಎಲ್ಲವನ್ನು ಏರಿಕೆ ಮಾಡುತ್ತದೆ. ಹೋರಾಟಗಳ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಬೇಕು" ಎಂದು ಅವರು ಕಿವಿ ಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಲಾವಣ್ಯ,ಚೊಕ್ಕನಹಳ್ಳಿ ವೆಂಕಟೇಶ್,ಗ್ರಾಮ ಪಂಚಾಯಿತಿ ಸದಸ್ಯರಾದ ಎಸ್.ಜಿ.ನರಸಿಂಹಮೂರ್ತಿ,ಕಾಂಗ್ರೇಸ್ ಮುಖಂಡರಾದ ಕೇಶವ ರಾಜಣ್ಣ. ಉಪಸ್ಥಿತರಿದ್ದರು.

ಶುಭ ಹಾರೈಕೆಗಳೊಂದಿಗೆ,,,,




 

June 06, 2021

 ಶೀಘ್ರದಲ್ಲಿ ಫೆರಿಫರಿಲ್ ರಿಂಗ್ ರಸ್ತೆ ಕಾಮಗಾರಿ ಟೆಂಡರ್

ಹೆಸರಘಟ್ಟ ಸಮೀಪ ಮಾದನಾಯಕಹಳ್ಳಿ ಗ್ರಾಮದಲ್ಲಿ ಯಲಹಂಕ ಶಾಸಕ ಎಸ್.ಅರ್.ವಿಶ್ವನಾಥ್ ಸುದ್ದಿಗೋಷ್ಠಿ ನಡೆಸಿ ಫೆರಿಫೆರಲ್ ರಿಂಗ್ ರಸ್ತೆ ಕಾಮಗಾರಿ ಟೆಂಡರ್ ನಿಗದಿ ಪಡಿಸುವ ಬಗ್ಗೆ ಮಾಹಿತಿ ನೀಡಿದರು. ಈ ಕುರಿತು ವರದಿ ಇಲ್ಲಿದೆ.


ಸುದ್ದಿಗೋಷ್ಠಿಯಲ್ಲಿ ಯಲಹಂಕ ಶಾಸಕ ಬಿ.ಡಿ.ಎ. ಅಧ್ಯಕ್ಷರಾದ ಎಸ್.ಅರ್.ವಿಶ್ವನಾಥ್ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಸದಸ್ಯರಾದ ಡಾ.ಉದ್ದಂಡಯ್ಯ ಮತ್ತು ಯಲಹಂಕ ಗ್ರಾಮಾಂತರ ಮಂಡಲ ಮಾಧ್ಯಮ ಸಂಚಾಲಕರಾದ ಅಭಿನಾಶ್ ಗಣೇಶ್, ಜಿಲ್ಲಾ ಸಹ ವಕ್ತಾರರಾದ ಅರುಣ್ ಕುಮಾರ್ ಇದ್ದರು.

ಹೆಸರಘಟ್ಟ:-"73 ಕಿ.ಮೀ.ಉದ್ದದ ಫೆರಿಫೆರಲ್ ರಿಂಗ್ ರಸ್ತೆಯ ಕಾಮಗಾರಿಗೆ ಟೆಂಡರ್ ಕರೆಯುವ ಪ್ರಕ್ರಿಯೆ ನಡೆಯುತ್ತಿದ್ದು,ಶೀಘ್ರದಲ್ಲಿಯೇ ಕಾಮಗಾರಿ ಪ್ರಾರಂಭಗೊಳ್ಳಲಿದೆ' ಎಂದು ಬಿ.ಡಿ.ಎ.ಆಧ್ಯಕ್ಷರಾದ ಎಸ್.ಅರ್.ವಿಶ್ವನಾಥ್ ಅವರು ತಿಳಿಸಿದರು.

ಮಾದನಾಯಕನಹಳ್ಳಿ ನಗರಸಭೆ ವ್ಯಾಪ್ತಿಯ ಆಶಾ ಕಾರ್ಯಕರ್ತರಿಗೆ ಮತ್ತು ಬಡವರಿಗೆ ಆಹಾರದ ಕಿಟ್ ಗಳನ್ನು ವಿತರಿಸಿ  ಸುದ್ದಿ ಗೋಷ್ಠಿಯಲ್ಲಿ ಅವರು ಮಾತನಾಡಿದರು. 

"ತುಮಕೂರು ರಸ್ತೆಯ ಮಾಕಳಿ ಗ್ರಾಮದಿಂದ ಹಾಗೂ ಮಾದಾವರ ಬಳಿಯ ನೈಸ್ ರಸ್ತೆ ,ಎರಡು ಕಡೆಯಿಂದ ಫೆರಿಫೆರಲ್ ರಿಂಗ್ ರಸ್ತೆ ಪ್ರಾರಂಭವಾಗಿ ತಮ್ಮೇನಹಳ್ಳಿ ಗ್ರಾಮದಲ್ಲಿ ಕೂಡಿ ಕೊಳ್ಳುತ್ತದೆ. ಎರಡು ಕಡೆಯೂ ಒಟ್ಟಿಗೆ ಕಾಮಗಾರಿ ಆರಂಭಗೊಳ್ಳುತ್ತದೆ. ಭೂ ಮಾಲೀಕರಿಗೆ ಟೆಂಡರ್ ಮುಗಿದ ಕೂಡಲೇ ಗುತ್ತಿಗೆದಾರನಿಂದ ಹಣ ಪಡೆದು ಪರಿಹಾರವನ್ನು ವಿತರಿಸಲಾಗುವುದು" ಎಂದು ಅವರು ಹೇಳಿದರು. 

"ಯಲಹಂಕ ಕ್ಷೇತ್ರದ ಲಕ್ಷ್ಮೀಪುರ ಗ್ರಾಮದ ಬಳಿ ಮೂರು ಎಕರೆ ಜಾಗದಲ್ಲಿ ಇಪ್ಪತ್ತು ಕೋಟಿ ವೆಚ್ಚದಲ್ಲಿ ಐವತ್ತು ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆಯನ್ನು ನಿರ್ಮಾಣ ಮಾಡಲಾಗುವುದು. ಅಲ್ಲದೇ ಹೆಸರಘಟ್ಟ ಮತ್ತು ಮಾಕಳಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಲಾಗುವುದು.ಮಾದನಾಯಕನಹಳ್ಳಿ ನಗರಸಭೆಗೆ ಕಾವೇರಿ ಕುಡಿಯುವ ನೀರಿನ ಸೌಲಭ್ಯವನ್ನು ಕಲ್ಪಿಸಿ ಕೊಡಲಾಗುವುದು ಅಲ್ಲದೇ ಒಳಚರಂಡಿ ಯೋಜನೆಯನ್ನು ಅನುಷ್ಠಾನ ಮಾಡಲಾಗುವುದು"ಎಂದರು

"ಯಲಹಂಕ ಕ್ಷೇತ್ರದಲ್ಲಿ ಮೂವತ್ತು ಸಾವಿರ ಮನೆಗಳನ್ನು ನಿರ್ಮಿಸಲಾಗುತ್ತಿದೆ. ಈ ವರ್ಷ ಕಾಮಗಾರಿ ಮುಗಿಸಿ ಬಡವರಿಗೆ ಹಂಚಲಾಗುವುದು."ಎಂದು ಅವರು ತಿಳಿಸಿದರು. 

"ಯಲಹಂಕ ಕ್ಷೇತ್ರದಲ್ಲಿ ಕೊರೊನಾ ನಿಯಂತ್ರಿಸುವಲ್ಲಿ ಸಂಪೂರ್ಣವಾಗಿ ನಾವು ಯಶಸ್ವಿಯಾಗಿದ್ದೀವಿ. ಪ್ರತಿ ದಿನ ತಪಾಸಣೆ ಮಾಡುತ್ತಿದ್ದು ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದೆ. ಜನರು ಮುನ್ನೇಚ್ಚರಿಕೆ ಕ್ರಮಗಳನ್ನು ಅನುಸರಿಸುತ್ತಿದ್ದಾರೆ" ಎಂದು ಅವರು ಸಂತಸ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯರಾದ ಡಾ.ಉದ್ದಂಡಯ್ಯ,ಯಲಹಂಕ ಗ್ರಾಮಾಂತರ ಮಂಡಲ ಮಾಧ್ಯಮ ಸಂಚಾಲಕರಾದ ಅಭಿನಾಶ್ ಗಣೇಶ್, ಜಿಲ್ಲಾ ಸಹ ವಕ್ತಾರರಾದ ಅರುಣ್ ಕುಮಾರ್ ಉಪಸ್ಥಿತರಿದ್ದರು.

June 05, 2021

 ಅದೊಂದು ಪದಕ್ಕೆ ಅವನು....? 

ನಲ್ಲೆಯ ತುಟಿ 

ತುಂಬಾ ಜೇನು

ಅದರೇನು ಮಾಡಲಿ

ಅವಳ ತಲೆ ತುಂಬಾ ಹೇನು {ಕೃಪೆ:ತರಂಗ}

ಒಮ್ಮೆ ನಕ್ಕು ಬಿಡಿ.

 ಮನಸ್ಸು ನಗುವುದರಿಂದ ಹಗುರವಾಗುತ್ತೆ,ಹೂವಿನ ತರ ಮೃದವಾಗುತ್ತೆ,ಅರಳುತ್ತೆ,ತಾಜಾತನವಾಗಿರುತ್ತೆ,ಆಹ್ಲಾದಕರವಾಗಿರುತ್ತೆ,ತಿಳಿಯಾಗಿರುತ್ತೆ. ನಗುವುದರಿಂದ ಮನಸ್ಸು ಉಲ್ಲಾಸವಾಗುತ್ತೆ, ಬಾಳಿನಲ್ಲಿ ಸಂಭ್ರಮ ಮೂಡುತ್ತೆ. 

ನಗುವುದರಿಂದ ಇಷ್ಟೇಲ್ಲ ಉಪಯುಕ್ತತೆ ಇದೆ. ಆಯ್ಯೋ ನಗುವುದಕ್ಕೆ ಏನು ಬೇಕು ಹೇಳಿ. ಬರಗೂರು ರಾಮಚಂದ್ರಪ್ಪ ಅವರು ಒಂದು ಕಡೆ ಹೇಳ್ತಾರೆ "ನಗುವುದಕ್ಕೆ ಹಲ್ಲುಗಳೆರಡೆ ಸಾಕು|ಅಳುವುದಕ್ಕೆ ಒಳ ಕರಳು ಬೇಕು|" ಅಂತ. ಅಳೋದು ಇದ್ದೆ ಇರುತ್ತೆ ಬಿಡಿ.  ನಾವು ನಗುವುದನ್ನು ಕಲಿಯೋಣ ಮನ ತುಂಬಿ,ಹೃದಯ ತುಂಬಿ.

ಅಯ್ಯೋ ಬೊಗಸೆಯಲ್ಲಿ ಮನಸ್ಸು ಇದ್ದಿದ್ದರೆ  ನಾವು  ನಗ್ತಾ ಇದ್ದೀವಿ ಅನ್ನುತ್ತಿರಲ್ಲ ಅಲ್ವಾ? ಇರ್ಲಿ ಬಿಡಿ. ಸದಾ ನಗ್ತಾ ಇರಿ ಅಂತಾನೆ ನಾನು ಹೇಳೋದು.

ಇರ್ಲಿ ವಿಷಯಕ್ಕೆ ಬರೋಣ. ನಾನು ಪ್ರಥಮ ಪಿ.ಯು.ಸಿ. ಓದ್ತಾ ಇದ್ದ ಸಮಯ. ಯಪ್ಪ ಅವತ್ತಿನ ನನ್ನ ಫೋಟೋ ನೋಡಿದ್ದರೆ ಹಿಶಿ ಅನ್ನಿಸುತ್ತೆ. ಮುಖದ ತುಂಬಾ ಯೌವನದ ಒಡವೆಗಳು{ಮೊಡವೆಗಳು}ಅವಕ್ಕೆ ಸೂರ್ಯನ ಕಿರಣಕ್ಕೆ ಫಳಫಳ ಹೊಳೆಯುವಂತೆ ಕಾಣುವ ದಪ್ಪ ದಪ್ಪ ಕೀವು ತುಂಬಿದ ಗುಳ್ಳೆಗಳು. ಯಪ್ಪಾ ನನ್ನ ಮುಖ ನೋಡಿ ಕನ್ನಡಿನೂ ಮುಖ ತಿರುಗಿಸಿರಬೇಕು {ನನಗೆ ಕಾಣಿಸದ್ದಂತೆ}.

ಅಸಲೀ ವಿಷ್ಯ ಅಂದರೆ ಈ ಹಾಳು ಮುಖಕ್ಕೆ ಚೆಂದದ ಗೆಳೆತಿಯರು ಇದ್ದರು. ಗುಲಾಬಿ,ಕನಕ,ಮಲ್ಲಿಗೆ,,ಅಯ್ಯೋ ಇದೆಲ್ಲ ಹುಡುಗಿಯರ ಹೆಸರು ಅಲ್ಲ ಸ್ವಾಮಿ. ಆ ತರದ ಹೂವಿನಂತೆ ಇದ್ದರು. ಅವರೆಲ್ಲ ನನ್ನ ಈ ಮುಸುಡಿ ನೋಡಿ ಮಾತನಾಡಿಸುತ್ತಿದ್ದರು. ಅವರ ಸಾಹಸ  ಮೆಚ್ಚುವಂತಹದು!

ಎಸ್.ಎಸ್.ಎಲ್.ಸಿ. ಧಾಟಿದ ಕೂಡಲೇ ಸಾಗರದ ಜ್ಯೂನೀಯರ್ ಕಾಲೇಜಿಗೆ ನಾನು ಸೇರಿದೆ. ಎಸ್.ಎಸ್.ಎಲ್.ಸಿ. ಪಾಸ್ ಮಾಡಿದ ಕೊಂಬು ತಲೆಯಲ್ಲಿ ಚನ್ನಾಗಿಯೇ ಬೆಳೆದಿತ್ತು. ದೇಹ ಸಣ್ಣದಾದರೂ ಮಣ ಗಾತ್ರದ ಅಹಂಕಾರ ನನ್ನೋಳಗೆ ಇತ್ತು. ಮೀಸೆ ಇಲ್ಲದಿದ್ದರೂ ಮೀಸೆಯ ಗರ್ವ. ಮೂಗಿನ ಮೇಲೆ ಒಂದು ಟ್ಯಾಕ್ಟರ್‍ನಷ್ಟು ಮೊಡವೆಗಳು ಇದ್ದರೂ ಮೂಗಿನ ಮೇಲೆ ಸಿಟ್ಟು. ಇಂತಿಪ್ಪ ಸಿದ್ದ ಕಾಲೇಜಿಗೆ ಸೇರಿದ ಕೂಡಲೇ ಯಾವುದು ಗರಿ ಗರಿಯಾಗಿ ಅರಳಬಾರದೋ ಅವೆಲ್ಲ ಅರಳಿ ಬಿಟ್ಟವು.

ಕಾಲೇಜಿಗೆ ಬಂದ ಹುರುಪು. ಹೊಸ ಗೆಳೆಯರ ಸಂಗತ್ಯ. ಮನಸ್ಸಿಗೆ ಭ್ರಮೆಯ ಸಂಭ್ರಮ. 

 ನನ್ನ ಗೆಳೆಯರ ಪೈಕಿ ನನಗೆ ಈಗಲೂ ತುಂಬಾ ಅಪ್ತನಾಗುವ ಗೆಳೆಯ ಗುಂಡ. ಅಯ್ಯೋ ಇದು ಯಾವ ಕಾಲದ ಹೆಸರು ಅಂತ ಕೇಳುತ್ತಿರ? ಅತನ ಮೂಲ ಹೆಸರು ಸುಲೇಮಾನ್. ನಾವೆಲ್ಲ ಅವನನ್ನು ಗುಂಡ ಗುಂಡ ಅಂತ ಕರೆಯುತ್ತಿದ್ದೀವಿ. ನೋಡಲು ಗುಂಡು ಗುಂಡಾಗಿ ಎಲ್ಲರೂ ಇಷ್ಟಪಡುವ ಸೊಗಸಾದ ಮುಖ ಅವನದ್ದು. ಆತ ಮುಸ್ಲಿಂ ಅನ್ನುವ ಕೊಳಕು ವಿಚಾರ ನÀನಗೆ ಇರಲಿಲ್ಲ. ಈಗಲೂ ಇಲ್ಲ ಬಿಡಿ.ಯ್ಯಾಕೆಂದರೆ ಗೆಳೆತನದಲ್ಲಿ ಆತ ಬೆರೆತು ಹೋಗಿದ್ದ.

 ಗುಂಡ ತುಂಬಾ ಘಾಟು ಘಾಟು ವ್ಯಕ್ತಿ. ಯಾರಾದರೂ ಏನಾದರೂ ಅಂದ್ರೆ ಸಾಕು ರಪ್ಪ ರಪ್ಪ ಅಂತ ಹೊಡೆದು ಹಾಕು ಬಿಡುತ್ತಿದ್ದ. ಗಡಸು ಕೋಪ ಅಬ್ಬಾ ಪುಡಿ ರೌಡಿ ನಮ್ಗೆ ಆ ಕಾಲದಲ್ಲಿ. 

ಅದರೆ ಅವನ ಮನಸ್ಸು ಹೂವಿನ ಪಳಕೆ ತರ ಮೃದು. ಒಂದ್ಸಾರಿ ಗುಂಡ ನನ್ನ ಹತ್ತಿರ ಲವ್ ಲೇಟರ್ ಬರೆಸಿದ. ಅವನಿಗಾಗಿ ಅಲ್ಲ. ಮತ್ತೆ ಯಾರಿಗೆ ?ಇಲ್ಲೇ ಇರೋದು ಸಾರಸ್ಯಕರ. ಅದನ್ನೇ ನಾನು ನಿಮ್ಗೆ ಇವತ್ತು ಹೇಳ್ತಾ ಇದ್ದೀನಿ. 

ನಮ್ಮ ಗುಂಪಿನ ಗೆಳೆಯರ ಪೈಕಿ ಹರೀಶ್ {ಹೆಸರು ಬದಲಾಯಿಸಿದ್ದೀನಿ}ಎನ್ನುವನು ಪಲ್ಲವಿ ಎನ್ನುವ ಹುಡುಗಿಯನ್ನು ತುಂಬಾ ಇಷ್ಟ ಪಡುತ್ತಿದ್ದ. ಅಕೆಯೇಂದರೆ ಅವನಿಗೆ ಅಚ್ಚುಮೆಚ್ಚು. ದಿನಕ್ಕೆ ನೂರು ಬಾರಿ ಅವಳು ನನ್ನ ಕಡೆ ನೋಡಿದಳು, ಮಿಂಚಿನಂತೆ ನಕ್ಕಳು, ಪುಲ್ ಲವ್ ಕಾಣೋ,, ಹೀಗೆ ಪುಖಾಂನು ಪುಖಾವಾಗಿ ಅಕೆಯ ಬಗ್ಗೆ ಹೇಳ್ತಾ ಇದ್ದೆ. ಅವತ್ತು  ಪ್ರೆಂಡ್ಸ್ ಅಂದರೆ ಜೀವ ಕೊಡ್ಬೇಕು ಕಾಣೋ ಅಂತ ಹೇಳಿದ. ಗುಂಡ ನೀನು ಕೊಡುತ್ತೀಯ ಅಂತ ಕೇಳಿದ.ಅಬ್ಬಾ ಎಂಥ ಉಮೇದು ಗೊತ್ತ ಯಸ್ ನನಗೆ ಗೆಳೆಯರ ಮುಂದೆ ಎಲ್ಲವೂ ತೃಣಕ್ಕೆ ಸಮಾನ ಅಂತ ಡೈಲಾಗ್ ಬಿಟ್ಟ. ನೋಡಿ ನಮ್ಮ ಗುಂಡ ಇವ್ನನಿಗೆ ಕೊಡೋಣ ಒಂದು ಝಳಕ್ ಅಂತ್ಹೇಳಿ. ಲೇ ಸಿದ್ದ ಪಲ್ಲವಿ ಬರೆದ ತರ ಲವ್ ಲೇಟರ್ ಬರೆಯೋ ಅಂದ. ಅದರಲ್ಲಿ ಗುಂಡನ ಜೊತೆ ಸಿದ್ದಯ್ಯ,ದಯಾನಂದ,ಅನಿಲ್ ಜೊತೆ ಸೇರ್ಬೇಡ. ನಿನ್ನ ಫಸ್ಟ್ ಬೇಂಚ್‍ನಲ್ಲಿ ನೋಡುವ ಅಸೆ ನನಗೆ ಅಂತ ಬರೆಯೋ ಅಂದ. 

ಇಷ್ಟು ಸಿಕ್ಕರೆ ಸಾಕು ನಂಗೆ ವರ್ಣಿಸಿ ವರ್ಣಿಸಿ ಬರೆದು ಗುಂಡನ ಕೈಗೆ ಇಟ್ಟೆ. 

ಮುಂದಿನ ಪಿರೀಯಡ್ ರಾಜ್ಯಶಾಸ್ತ್ರ. ಗುಂಡ  ನಾನು ಬರೆದ ಲವ್ ಲೇಟರ್ ನ ಪಲ್ಲವಿ ಕೊಟ್ಟಳು ಅಂತ ಯಾರೋ ಹುಡುಗಿ ಕೈಯಲ್ಲಿ ಕೊಡಿಸಿ ಬಿಟ್ಟದ್ದ.ರಾಜ್ಯಶಾಸ್ತ್ರ ಪಿರೀಯಡ್‍ಗೆ ನೋಡುತ್ತೀವಿ ಹರೀಶ್ ಲಾಸ್ಟ್ ಬೆಂಚ್ ನಿಂದ ಫಸ್ಟ್ ಬೆಂಚ್ ಗೆ ಶಿಫ್ಟ್. ಅಲ್ಲಿಂದಲೇ ಅವಳನ್ನು ನೋಡುವುದು ಏನು,ನಗುವುದು ಏನೋ, ಪುಲ್ ಮೆಂಟಲ್ ಅಗಿ ಬಿಟ್ಟಿದ್ದ. ಗುಂಡ ನಾನು ಎಲ್ಲರೂ ಅವನನ್ನು ನೋಡಿ ನೋಡಿ ನಕ್ಕಿದ್ದೆ. ನಕ್ಕಿದ್ದು. 

ಗೆಳೆಯರಿಗೆ ಜೀವ ಕೊಡುತ್ತೀನಿ ಗೆಳೆಯರು ಎಂದರೆ ಅತ್ಮ ಅಂತೆಲ್ಲ ಕೊಚ್ಚಿಕೊಂಡಿದ್ದ ಹರೀಶ್‍ನಿಗೆ ಪ್ರೀತಿಯ ನಶೆ ಏರಿ ಬಿಟ್ಟಿತ್ತು. ಬಹುಶಃ ಮೂರು ನಾಲ್ಕು ದಿನ ಅವನು ಫಸ್ಟ್ ಬೆಂಚ್ ನಲ್ಲಿಯೇ ಕುಳಿತು ಪಾಠ ಕೇಳಿದ. ಅಮೇಲೆ ಸತ್ಯ ಹೇಳಿದ್ದೀವಿ. ಸೋಲು ಒಪ್ಪಿ ಕೊಳ್ಳದ ಹರೀಶ್ ನನಗೆ ಗೊತ್ತಿತ್ತು. ನಿಮ್ಮದ್ದೇ ಕೆಲ್ಸ ಅಂತ. ನಾನು ನಾಟಕ ಮಾಡಿದೆ ಅಂದ. ಅದರೆ ಒಂದ್ಸಾರಿ ಲೇ ಸಿದ್ದ "ನಿನ್ನ ನಾನು ಇಷ್ಟಪಡುತ್ತೀನಿ. ತಾಯಿಯಾಗಿ ಇರುತ್ತೀನಿ,ಹೆಂಡತಿಯಾಗಿ ಕಾಯುತ್ತೀನಿ" ಅಂತ ಬರೆದಿದ್ದಯಲ್ಲ ಆ ಪದಕ್ಕೆ ಸೋತು ಹೋದೆ ಕಾಣೆ. ಇಡೀ ರಾತ್ರಿ ಪಲ್ಲವಿ ಬಗ್ಗೆ ಯೋಚಿಸಿದ್ದೆ. ನಿದ್ರೆನೇ ಬರುತ್ತಿರಲಿಲ್ಲ ಗೊತ್ತ?ಪ್ಲೀಸ್ ಯಾರು ಭಾವನೆಗಳ ಜೊತೆ ಆಟವಾಡ್ಬೇಡ ಅಂದ. ನಾನು ಅವಕ್ಕಾದೆ. ಅದರೆ ಹುಡುಕಾಟದ ಬುದ್ದಿ ನೋಡಿ ಮತ್ತೆ ಐದು ಜನಕ್ಕೆ ಹೀಗೆ ಲವ್ ಲೇಟರ್ ಬರೆದು ಆಟವಾಡಿಸಿದ್ದೀವಿ. 

ನನಗೆ ಈಗಲೂ ಗುಂಡ ಅಂದ ತಕ್ಷಣ ಇಂತಹ ಅವಿಸ್ಮರಣೀಯ ನೆನಪುಗಳು ನೆಲೆ ನಿಲ್ಲುತ್ತವೆ. ಅವನಲ್ಲಿ ಎಷ್ಟು ಪಾಸಿಟಿವ್ ಇತ್ತು ಅಂದರೆ ರೈಲ್ವೆ ಎಂಜಿನ್ ತರ ಪೆಟ್ಟಿ  ಅಂಗಡಿ ಹಿಂದೆ ನಿಂತು ಧಮ್ ಎಳೆದು ಹೊಗೆ ಬಿಡುತ್ತಿದ್ದ. ಕೆಲವು ಸಾರಿ ಗಣೇಶ್ ಬೀಡಿ ಸೇದುತ್ತಿದ್ದ. ಆದರೆ ಒಂದು ದಿನವು ತನ್ನ ಜೊತೆ ಇದ್ದ ಗೆಳೆಯರಿಗೆ ಲೇ ಸಿಗೇರೇಟ್ ಸೇದೋ ಅಂತ ಹೇಳಲಿಲ್ಲ. ಅದೇ ಅವನ ಸ್ಪಷಲ್ ಸ್ವಭಾವ. ಜೀವನದಲ್ಲಿ ಇಂತಹ ಗೆಳೆಯರು ಎಲ್ಲರಿಗೂ ಸಿಗಲ್ಲ ಅಲ್ವಾ?

ಚಿ,ಶಿ.ನಿ. 



ಗೋಪಾಲಪುರ: ಚಿಣ್ಣರಿಗೆ ನಿಸರ್ಗ ಪಾಠ


ಗೋಪಾಲಪುರ ಗ್ರಾಮದಲ್ಲಿರುವ ವಾತ್ಸಲ್ಯ ಮಹಿಳಾ ಸೇವಾ ಸಂಸ್ಥೆಯು ಚಿಣ್ಣರಿಗೆ ಸಸಿಗಳನ್ನು ವಿತರಿಸಿ ಪ್ರಕೃತಿಯ ಬಗ್ಗೆ ಜಾಗೃತಿ ಮೂಡಿಸಿತ್ತು. ಸಂಸ್ಥೆಯ ಅಧ್ಯಕ್ಷರಾದ ವೀಣಾ ರಮೇಶ್,ಗೋಪಾಲಪುರ ಗ್ರಾಮ ಪಂಚಾಯಿತಿ ಸದಸ್ಯರಾದ ಲತಾ, ಮತ್ತು ಕೃಷ್ಣಪ್ಪಇದ್ದರು .


ಹೆಸರಘಟ್ಟ:-ಗೋಪಾಲಪುರ ಗ್ರಾಮದ ವಾತ್ಸಲ್ಯ ಮಹಿಳಾ ಸೇವಾ ಸಂಸ್ಥೆಯು ಚಿಣ್ಣರಿಗೆ ಸಸಿಗಳನ್ನು ವಿತರಿಸಿ ಪರಿಸರದ ಬಗ್ಗೆ ಅರಿವು ಮೂಡಿಸಿ ವಿಶ್ವ ಪರಿಸರ ದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸಿತ್ತು. 

"ಪರಿಸರದ ಬಗ್ಗೆ ಮುಂದಿನ ತಲೆಮಾರಿಗೆ ಜಾಗೃತಿ ಮತ್ತು ಅರಿವು ಎರಡನ್ನು ನೀಡಿ ಪ್ರಕೃತಿಯನ್ನು ಉಳಿಸಿ ಕೊಳ್ಳುವ ಮಹತ್ವದ ಜವಾಬ್ದಾರಿ ನಮ್ಮ ಮೇಲಿದೆ. ಪ್ರಕೃತಿಯ ಒಡಲಲ್ಲಿ ಅನೇಕ ಜೀವ ಸಂಕುಲಗಳು ನೆಲೆಸಿವೆ.ಅದೆಷ್ಟು ಜೀವಗಳ ಸಂಕುಲವನ್ನು ಮನುಷ್ಯ ಪ್ರತಿ ದಿನ ತನ್ನ ಸ್ವಾರ್ಥಕ್ಕಾಗಿ ನಾಶ ಮಾಡುತ್ತಿದ್ದೀನಿ. ನಿಸರ್ಗವನ್ನು ಉಳಿಸಿಕೊಂಡೆ ಮನುಷ್ಯ ಬದುಕುಬೇಕು"ಎಂದು ವಾತ್ಸಲ್ಯ ಮಹಿಳಾ ಸೇವಾ ಸಂಸ್ಥೆಯ ಮೇಲೆ ಅಧ್ಯಕ್ಷರಾದ ವೀಣಾ ರಮೇಶ್ ಅಭಿಪ್ರಾಯ ಪಟ್ಟರು.

" ಅನೇಕ ಪಗಂಡಗಳಲ್ಲಿ ಮದುವೆಯ ದಿನ ಒಂದು ಗಿಡವನ್ನು ನೆಡುವ ಸಂಪ್ರದಾಯವಿತ್ತು.ಗಿಡ ಬೆಳೆದ್ದಂತೆ ಮನೆಯು ಬೆಳೆಯುತ್ತದೆ ಎಂಬ ನಂಬಿಕೆ ಇತ್ತು. ಬಹುಶಃ ಹಿಂದಿನವರಿಗೆ ಪ್ರಕೃತಿಯ ಮಹತ್ವದ ಅರಿವು ಇದ್ದಿದ್ದರಿಂದ ಈ ತರದ ಆಚರಣೆಗಳನ್ನು ತಂದಿರಬೇಕು. ಇಂದು ಅನೇಕ ಆಚರಣೆಗಳನ್ನು ಬಿಟ್ಟು ಅಪಾಯಗಳನ್ನು ಮೈ ಮೇಲೆ ಹಾಕಿಕೊಂಡಿದ್ದೀವಿ."ಎಂದು ಅವರು  ವಿಷಾದ ವ್ಯಕ್ತಪಡಿಸಿದರು. 

"ಕೊರೊನಾ ಸೋಂಕಿನ ತಗಲಿದ ಹೆಚ್ಚಿನ ಜನರು ಅಮ್ಲಜನಕದ ಕೊರತೆಯಿಂದ ಸಾವುನ್ನಪ್ಪುತ್ತಿದ್ದಾರೆ. ಪ್ರಕೃತಿ ಹೀಗೆ ನಾಶವಾದರೆ ಬಹುಶಃ ಮುಂದಿನ ದಿನದಲ್ಲಿ ಮನುಷ್ಯ ಕುಲವು ಅಮ್ಲಜನಕದ ಕೊರತೆಯಿಂದ ನಾಶವಾಗಬಹುದು. ಹಾಗಾಗಿ ಇಂದಿನ ಚಿಣ್ಣರಿಗೆ ಮರವನ್ನು ಬೆಳೆಸುವ,ಮರಗಳ ಮಹತ್ವವನ್ನು ತಿಳಿಸುವ ಕೆಲಸವಾಗಬೇಕಾಗಿದೆ. ಈ ಹಿನ್ನೆಲೆಯಲ್ಲಿ ಚಿಣ್ಣರಿಗೆ ಸಸಿ ನೆಡಿಸಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತ್ತು" ಎಂದು ಅವರು ತಿಳಿಸಿದರು.


ಬೂತ್ ಮಟ್ಟದಲ್ಲಿ ಸಂಘಟನೆಗೆ ಕಾಂಗ್ರೇಸ್ ಗಾಂಧಿ ನಡೆ

ಸೋಲದೇವನಹಳ್ಳಿ ಗ್ರಾಮದಲ್ಲಿ ನಡೆದ ಗಾಂಧಿ ನಡೆ ಕಾರ್ಯಗಾರದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೇಸ್ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಮಾತನಾಡಿದರು. ಹಿರಿಯ ಮುಖಂಡರಾದ ವೀರಪ್ಪಮೊ...