June 15, 2021

ಅಡುಗೆ ಅನಿಲ ತಲೆ ಮೇಲೆ ಹೊತ್ತು ಪ್ರತಿಭಟನೆ

 

        ಅಡುಗೆ ಅನಿಲ ತಲೆ ಮೇಲೆ ಹೊತ್ತು ಪ್ರತಿಭಟನೆ

{ಹೆಸರಘಟ್ಟ ಹೋಬಳಿ ರಾಜಾನುಕುಂಟೆ ಗ್ರಾಮದಲ್ಲಿ ಯಲಹಂಕ ಮುಖ್ಯರಸ್ತೆಯಲ್ಲಿರುವ ಪೆಟ್ರೋಲ್ ಬಂಕ್ ಬಳಿ ಕಾಂಗ್ರೇಸ್ ಕಾರ್ಯಕರ್ತರು ಅಡುಗೆ ಅನಿಲವನ್ನು ತಲೆ ಹೊತ್ತು ವಿನೂತನವಾಗಿ ಪ್ರತಿಭಟನೆ ನಡೆಸಿದರು. ಈ ಕುರಿತು ವರದಿ ಇಲ್ಲಿದೆ}


 ಬೆಲೆ ಏರಿಕೆಯನ್ನು ಖಂಡಿಸಿ ರಾಜಾನುಕುಂಟೆ ಗ್ರಾಮದಲ್ಲಿ ಕಾಂಗ್ರೇಸ್ ಮುಖಂಡರು ಅಡುಗೆ ಅನಿಲವನ್ನು ತಲೆ ಮೇಲೆ ಹೊತ್ತು ಪ್ರತಿಭಟನೆ ನಡೆಸಿದರು. ಹಿರಿಯ ಕಾಂಗ್ರೇಸ್ ಮುಖಂಡ ಚೊಕ್ಕನಹಳ್ಳಿ ವೆಂಕಟೇಶ್,ಲಾವಣ್ಯ,ಗ್ರಾಮ ಪಂಚಾಯಿತಿ ಸದಸ್ಯರಾದ ನರಸಿಂಹಮೂರ್ತಿ ಹಾಗೂ ಹೆಸರಘಟ್ಟ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ನಾರಾಯಣ್ಣಪ್ಪ ಇದ್ದರು.

ಹೆಸರಘಟ್ಟ:-ರಾಜಾನುಕುಂಟೆ ಕಾಂಗ್ರೇಸ್ ಮುಖಂಡರು ಅಡುಗೆ ಅನಿಲವನ್ನು ತಲೆಯ ಮೇಲೆ ಹೊತ್ತು ಬೆಲೆ ಏರಿಕೆಯನ್ನು ಖಂಡಿಸಿ ವಿನೂತನವಾಗಿ ಪ್ರತಿಭಟನೆ ನಡೆಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಚೊಕ್ಕನಹಳ್ಳಿ ವೆಂಕಟೇಶ್ ಅವರು ಮಾತನಾಡಿ "ಕೇಂದ್ರ ಸರ್ಕಾರ ಮಧ್ಯಮ ವರ್ಗದವರ ಬಾಳನ್ನು ಹಾಳುಗೆಡವುತ್ತಿದೆ. ಕೋವಿಡ್ ನಿಂದ ಕೆಲಸವಿಲ್ಲದೇ ಜನರು ಪೇಚಾಡುತ್ತಿದ್ದಾರೆ. ಇಂಥ ಹೊತ್ತಿನಲ್ಲಿ ಬೆಲೆ ಏರಿಕೆ ಮಾಡಿ ಕೇಂದ್ರ ಸರ್ಕಾರ ಜನರ ನೆಮ್ಮದಿಯನ್ನು ಕಸಿಯುತ್ತಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.

"2013ರಲ್ಲಿ ಮನಮೋಹನ್ ಸಿಂಗ್ ಸರ್ಕಾರವಿದ್ದಾಗ ಪೆಟ್ರೋಲ್ ಬೆಲೆ ಕೇವಲ 67 ರೂಪಾಯಿ ಇತ್ತು. ಅಡುಗೆ ಅನಿಲ 322 ರೂ. ಈಗ ಪೆಟೋಲ್ ಬೆಲೆ ನೂರು ರೂಪಾಯಿಗಳ ಗಡಿ ದಾಟುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಜನ ಸಾಮಾನ್ಯರ ಬದುಕನ್ನು ಬೆಲೆ ಏರಿಕೆ ಮೂಲಕ ಉಸಿರುಗಟ್ಟಿಸುತ್ತಿದ್ದಾರೆ" ಎಂದು ಅವರು ತಿಳಿಸಿದರು.

ಸಿಂಗನಾಯಕನಹಳ್ಳಿ ಜಿಲ್ಲಾ ಪಂಚಾಯಿತಿ ಸದಸ್ಯೆ ಲಾವಣ್ಯ ಅವರು "ಬಿ.ಜೆ.ಪಿ. ಸರ್ಕಾರ ತೊಲಗದಿದ್ದರೆ ಜನ ಸಾಮಾನ್ಯರ ಬದುಕು ಬೀದಿಗೆ ಬೀಳುತ್ತದೆ. ಮೋದಿ ಪಠಿಸುತ್ತಿದ್ದ ಅಚ್ಚಾ ದಿನ್ ಇದೆನಾ? ಪ್ರಧಾನಿ ಮೋದಿ ಅವರು ಜನರಿಗೆ ನೀಡಿದ ಯಾವ ಭರವಸೆಗಳನ್ನು ಈಡೇರಿಸಿಲ್ಲ. ಬಿ.ಜೆ.ಪಿ. ನಡೆಸುತ್ತಿರುವ ದರ್ಬಾರು ರಾಜಕಾರಣವನ್ನು ಜನರು ಸೂಕ್ಷ್ಮವಾಗಿ ಗಮನಿಸುತ್ತಿದ್ದು ತಕ್ಕ ಉತ್ತರ ನೀಡಲಿದ್ದಾರೆ  ಎಂದು ಅವರು ಹೇಳಿದರು.

ಹೆಸರಘಟ್ಟ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ನಾರಾಯಣಪ್ಪ,ಗ್ರಾಮ ಪಂಚಾಯಿತಿ ಸದಸ್ಯರಾದ ನರಸಿಂಹಮೂರ್ತಿ ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.


No comments:

Post a Comment

ಬೂತ್ ಮಟ್ಟದಲ್ಲಿ ಸಂಘಟನೆಗೆ ಕಾಂಗ್ರೇಸ್ ಗಾಂಧಿ ನಡೆ

ಸೋಲದೇವನಹಳ್ಳಿ ಗ್ರಾಮದಲ್ಲಿ ನಡೆದ ಗಾಂಧಿ ನಡೆ ಕಾರ್ಯಗಾರದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೇಸ್ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಮಾತನಾಡಿದರು. ಹಿರಿಯ ಮುಖಂಡರಾದ ವೀರಪ್ಪಮೊ...