June 05, 2021

 ಅದೊಂದು ಪದಕ್ಕೆ ಅವನು....? 

ನಲ್ಲೆಯ ತುಟಿ 

ತುಂಬಾ ಜೇನು

ಅದರೇನು ಮಾಡಲಿ

ಅವಳ ತಲೆ ತುಂಬಾ ಹೇನು {ಕೃಪೆ:ತರಂಗ}

ಒಮ್ಮೆ ನಕ್ಕು ಬಿಡಿ.

 ಮನಸ್ಸು ನಗುವುದರಿಂದ ಹಗುರವಾಗುತ್ತೆ,ಹೂವಿನ ತರ ಮೃದವಾಗುತ್ತೆ,ಅರಳುತ್ತೆ,ತಾಜಾತನವಾಗಿರುತ್ತೆ,ಆಹ್ಲಾದಕರವಾಗಿರುತ್ತೆ,ತಿಳಿಯಾಗಿರುತ್ತೆ. ನಗುವುದರಿಂದ ಮನಸ್ಸು ಉಲ್ಲಾಸವಾಗುತ್ತೆ, ಬಾಳಿನಲ್ಲಿ ಸಂಭ್ರಮ ಮೂಡುತ್ತೆ. 

ನಗುವುದರಿಂದ ಇಷ್ಟೇಲ್ಲ ಉಪಯುಕ್ತತೆ ಇದೆ. ಆಯ್ಯೋ ನಗುವುದಕ್ಕೆ ಏನು ಬೇಕು ಹೇಳಿ. ಬರಗೂರು ರಾಮಚಂದ್ರಪ್ಪ ಅವರು ಒಂದು ಕಡೆ ಹೇಳ್ತಾರೆ "ನಗುವುದಕ್ಕೆ ಹಲ್ಲುಗಳೆರಡೆ ಸಾಕು|ಅಳುವುದಕ್ಕೆ ಒಳ ಕರಳು ಬೇಕು|" ಅಂತ. ಅಳೋದು ಇದ್ದೆ ಇರುತ್ತೆ ಬಿಡಿ.  ನಾವು ನಗುವುದನ್ನು ಕಲಿಯೋಣ ಮನ ತುಂಬಿ,ಹೃದಯ ತುಂಬಿ.

ಅಯ್ಯೋ ಬೊಗಸೆಯಲ್ಲಿ ಮನಸ್ಸು ಇದ್ದಿದ್ದರೆ  ನಾವು  ನಗ್ತಾ ಇದ್ದೀವಿ ಅನ್ನುತ್ತಿರಲ್ಲ ಅಲ್ವಾ? ಇರ್ಲಿ ಬಿಡಿ. ಸದಾ ನಗ್ತಾ ಇರಿ ಅಂತಾನೆ ನಾನು ಹೇಳೋದು.

ಇರ್ಲಿ ವಿಷಯಕ್ಕೆ ಬರೋಣ. ನಾನು ಪ್ರಥಮ ಪಿ.ಯು.ಸಿ. ಓದ್ತಾ ಇದ್ದ ಸಮಯ. ಯಪ್ಪ ಅವತ್ತಿನ ನನ್ನ ಫೋಟೋ ನೋಡಿದ್ದರೆ ಹಿಶಿ ಅನ್ನಿಸುತ್ತೆ. ಮುಖದ ತುಂಬಾ ಯೌವನದ ಒಡವೆಗಳು{ಮೊಡವೆಗಳು}ಅವಕ್ಕೆ ಸೂರ್ಯನ ಕಿರಣಕ್ಕೆ ಫಳಫಳ ಹೊಳೆಯುವಂತೆ ಕಾಣುವ ದಪ್ಪ ದಪ್ಪ ಕೀವು ತುಂಬಿದ ಗುಳ್ಳೆಗಳು. ಯಪ್ಪಾ ನನ್ನ ಮುಖ ನೋಡಿ ಕನ್ನಡಿನೂ ಮುಖ ತಿರುಗಿಸಿರಬೇಕು {ನನಗೆ ಕಾಣಿಸದ್ದಂತೆ}.

ಅಸಲೀ ವಿಷ್ಯ ಅಂದರೆ ಈ ಹಾಳು ಮುಖಕ್ಕೆ ಚೆಂದದ ಗೆಳೆತಿಯರು ಇದ್ದರು. ಗುಲಾಬಿ,ಕನಕ,ಮಲ್ಲಿಗೆ,,ಅಯ್ಯೋ ಇದೆಲ್ಲ ಹುಡುಗಿಯರ ಹೆಸರು ಅಲ್ಲ ಸ್ವಾಮಿ. ಆ ತರದ ಹೂವಿನಂತೆ ಇದ್ದರು. ಅವರೆಲ್ಲ ನನ್ನ ಈ ಮುಸುಡಿ ನೋಡಿ ಮಾತನಾಡಿಸುತ್ತಿದ್ದರು. ಅವರ ಸಾಹಸ  ಮೆಚ್ಚುವಂತಹದು!

ಎಸ್.ಎಸ್.ಎಲ್.ಸಿ. ಧಾಟಿದ ಕೂಡಲೇ ಸಾಗರದ ಜ್ಯೂನೀಯರ್ ಕಾಲೇಜಿಗೆ ನಾನು ಸೇರಿದೆ. ಎಸ್.ಎಸ್.ಎಲ್.ಸಿ. ಪಾಸ್ ಮಾಡಿದ ಕೊಂಬು ತಲೆಯಲ್ಲಿ ಚನ್ನಾಗಿಯೇ ಬೆಳೆದಿತ್ತು. ದೇಹ ಸಣ್ಣದಾದರೂ ಮಣ ಗಾತ್ರದ ಅಹಂಕಾರ ನನ್ನೋಳಗೆ ಇತ್ತು. ಮೀಸೆ ಇಲ್ಲದಿದ್ದರೂ ಮೀಸೆಯ ಗರ್ವ. ಮೂಗಿನ ಮೇಲೆ ಒಂದು ಟ್ಯಾಕ್ಟರ್‍ನಷ್ಟು ಮೊಡವೆಗಳು ಇದ್ದರೂ ಮೂಗಿನ ಮೇಲೆ ಸಿಟ್ಟು. ಇಂತಿಪ್ಪ ಸಿದ್ದ ಕಾಲೇಜಿಗೆ ಸೇರಿದ ಕೂಡಲೇ ಯಾವುದು ಗರಿ ಗರಿಯಾಗಿ ಅರಳಬಾರದೋ ಅವೆಲ್ಲ ಅರಳಿ ಬಿಟ್ಟವು.

ಕಾಲೇಜಿಗೆ ಬಂದ ಹುರುಪು. ಹೊಸ ಗೆಳೆಯರ ಸಂಗತ್ಯ. ಮನಸ್ಸಿಗೆ ಭ್ರಮೆಯ ಸಂಭ್ರಮ. 

 ನನ್ನ ಗೆಳೆಯರ ಪೈಕಿ ನನಗೆ ಈಗಲೂ ತುಂಬಾ ಅಪ್ತನಾಗುವ ಗೆಳೆಯ ಗುಂಡ. ಅಯ್ಯೋ ಇದು ಯಾವ ಕಾಲದ ಹೆಸರು ಅಂತ ಕೇಳುತ್ತಿರ? ಅತನ ಮೂಲ ಹೆಸರು ಸುಲೇಮಾನ್. ನಾವೆಲ್ಲ ಅವನನ್ನು ಗುಂಡ ಗುಂಡ ಅಂತ ಕರೆಯುತ್ತಿದ್ದೀವಿ. ನೋಡಲು ಗುಂಡು ಗುಂಡಾಗಿ ಎಲ್ಲರೂ ಇಷ್ಟಪಡುವ ಸೊಗಸಾದ ಮುಖ ಅವನದ್ದು. ಆತ ಮುಸ್ಲಿಂ ಅನ್ನುವ ಕೊಳಕು ವಿಚಾರ ನÀನಗೆ ಇರಲಿಲ್ಲ. ಈಗಲೂ ಇಲ್ಲ ಬಿಡಿ.ಯ್ಯಾಕೆಂದರೆ ಗೆಳೆತನದಲ್ಲಿ ಆತ ಬೆರೆತು ಹೋಗಿದ್ದ.

 ಗುಂಡ ತುಂಬಾ ಘಾಟು ಘಾಟು ವ್ಯಕ್ತಿ. ಯಾರಾದರೂ ಏನಾದರೂ ಅಂದ್ರೆ ಸಾಕು ರಪ್ಪ ರಪ್ಪ ಅಂತ ಹೊಡೆದು ಹಾಕು ಬಿಡುತ್ತಿದ್ದ. ಗಡಸು ಕೋಪ ಅಬ್ಬಾ ಪುಡಿ ರೌಡಿ ನಮ್ಗೆ ಆ ಕಾಲದಲ್ಲಿ. 

ಅದರೆ ಅವನ ಮನಸ್ಸು ಹೂವಿನ ಪಳಕೆ ತರ ಮೃದು. ಒಂದ್ಸಾರಿ ಗುಂಡ ನನ್ನ ಹತ್ತಿರ ಲವ್ ಲೇಟರ್ ಬರೆಸಿದ. ಅವನಿಗಾಗಿ ಅಲ್ಲ. ಮತ್ತೆ ಯಾರಿಗೆ ?ಇಲ್ಲೇ ಇರೋದು ಸಾರಸ್ಯಕರ. ಅದನ್ನೇ ನಾನು ನಿಮ್ಗೆ ಇವತ್ತು ಹೇಳ್ತಾ ಇದ್ದೀನಿ. 

ನಮ್ಮ ಗುಂಪಿನ ಗೆಳೆಯರ ಪೈಕಿ ಹರೀಶ್ {ಹೆಸರು ಬದಲಾಯಿಸಿದ್ದೀನಿ}ಎನ್ನುವನು ಪಲ್ಲವಿ ಎನ್ನುವ ಹುಡುಗಿಯನ್ನು ತುಂಬಾ ಇಷ್ಟ ಪಡುತ್ತಿದ್ದ. ಅಕೆಯೇಂದರೆ ಅವನಿಗೆ ಅಚ್ಚುಮೆಚ್ಚು. ದಿನಕ್ಕೆ ನೂರು ಬಾರಿ ಅವಳು ನನ್ನ ಕಡೆ ನೋಡಿದಳು, ಮಿಂಚಿನಂತೆ ನಕ್ಕಳು, ಪುಲ್ ಲವ್ ಕಾಣೋ,, ಹೀಗೆ ಪುಖಾಂನು ಪುಖಾವಾಗಿ ಅಕೆಯ ಬಗ್ಗೆ ಹೇಳ್ತಾ ಇದ್ದೆ. ಅವತ್ತು  ಪ್ರೆಂಡ್ಸ್ ಅಂದರೆ ಜೀವ ಕೊಡ್ಬೇಕು ಕಾಣೋ ಅಂತ ಹೇಳಿದ. ಗುಂಡ ನೀನು ಕೊಡುತ್ತೀಯ ಅಂತ ಕೇಳಿದ.ಅಬ್ಬಾ ಎಂಥ ಉಮೇದು ಗೊತ್ತ ಯಸ್ ನನಗೆ ಗೆಳೆಯರ ಮುಂದೆ ಎಲ್ಲವೂ ತೃಣಕ್ಕೆ ಸಮಾನ ಅಂತ ಡೈಲಾಗ್ ಬಿಟ್ಟ. ನೋಡಿ ನಮ್ಮ ಗುಂಡ ಇವ್ನನಿಗೆ ಕೊಡೋಣ ಒಂದು ಝಳಕ್ ಅಂತ್ಹೇಳಿ. ಲೇ ಸಿದ್ದ ಪಲ್ಲವಿ ಬರೆದ ತರ ಲವ್ ಲೇಟರ್ ಬರೆಯೋ ಅಂದ. ಅದರಲ್ಲಿ ಗುಂಡನ ಜೊತೆ ಸಿದ್ದಯ್ಯ,ದಯಾನಂದ,ಅನಿಲ್ ಜೊತೆ ಸೇರ್ಬೇಡ. ನಿನ್ನ ಫಸ್ಟ್ ಬೇಂಚ್‍ನಲ್ಲಿ ನೋಡುವ ಅಸೆ ನನಗೆ ಅಂತ ಬರೆಯೋ ಅಂದ. 

ಇಷ್ಟು ಸಿಕ್ಕರೆ ಸಾಕು ನಂಗೆ ವರ್ಣಿಸಿ ವರ್ಣಿಸಿ ಬರೆದು ಗುಂಡನ ಕೈಗೆ ಇಟ್ಟೆ. 

ಮುಂದಿನ ಪಿರೀಯಡ್ ರಾಜ್ಯಶಾಸ್ತ್ರ. ಗುಂಡ  ನಾನು ಬರೆದ ಲವ್ ಲೇಟರ್ ನ ಪಲ್ಲವಿ ಕೊಟ್ಟಳು ಅಂತ ಯಾರೋ ಹುಡುಗಿ ಕೈಯಲ್ಲಿ ಕೊಡಿಸಿ ಬಿಟ್ಟದ್ದ.ರಾಜ್ಯಶಾಸ್ತ್ರ ಪಿರೀಯಡ್‍ಗೆ ನೋಡುತ್ತೀವಿ ಹರೀಶ್ ಲಾಸ್ಟ್ ಬೆಂಚ್ ನಿಂದ ಫಸ್ಟ್ ಬೆಂಚ್ ಗೆ ಶಿಫ್ಟ್. ಅಲ್ಲಿಂದಲೇ ಅವಳನ್ನು ನೋಡುವುದು ಏನು,ನಗುವುದು ಏನೋ, ಪುಲ್ ಮೆಂಟಲ್ ಅಗಿ ಬಿಟ್ಟಿದ್ದ. ಗುಂಡ ನಾನು ಎಲ್ಲರೂ ಅವನನ್ನು ನೋಡಿ ನೋಡಿ ನಕ್ಕಿದ್ದೆ. ನಕ್ಕಿದ್ದು. 

ಗೆಳೆಯರಿಗೆ ಜೀವ ಕೊಡುತ್ತೀನಿ ಗೆಳೆಯರು ಎಂದರೆ ಅತ್ಮ ಅಂತೆಲ್ಲ ಕೊಚ್ಚಿಕೊಂಡಿದ್ದ ಹರೀಶ್‍ನಿಗೆ ಪ್ರೀತಿಯ ನಶೆ ಏರಿ ಬಿಟ್ಟಿತ್ತು. ಬಹುಶಃ ಮೂರು ನಾಲ್ಕು ದಿನ ಅವನು ಫಸ್ಟ್ ಬೆಂಚ್ ನಲ್ಲಿಯೇ ಕುಳಿತು ಪಾಠ ಕೇಳಿದ. ಅಮೇಲೆ ಸತ್ಯ ಹೇಳಿದ್ದೀವಿ. ಸೋಲು ಒಪ್ಪಿ ಕೊಳ್ಳದ ಹರೀಶ್ ನನಗೆ ಗೊತ್ತಿತ್ತು. ನಿಮ್ಮದ್ದೇ ಕೆಲ್ಸ ಅಂತ. ನಾನು ನಾಟಕ ಮಾಡಿದೆ ಅಂದ. ಅದರೆ ಒಂದ್ಸಾರಿ ಲೇ ಸಿದ್ದ "ನಿನ್ನ ನಾನು ಇಷ್ಟಪಡುತ್ತೀನಿ. ತಾಯಿಯಾಗಿ ಇರುತ್ತೀನಿ,ಹೆಂಡತಿಯಾಗಿ ಕಾಯುತ್ತೀನಿ" ಅಂತ ಬರೆದಿದ್ದಯಲ್ಲ ಆ ಪದಕ್ಕೆ ಸೋತು ಹೋದೆ ಕಾಣೆ. ಇಡೀ ರಾತ್ರಿ ಪಲ್ಲವಿ ಬಗ್ಗೆ ಯೋಚಿಸಿದ್ದೆ. ನಿದ್ರೆನೇ ಬರುತ್ತಿರಲಿಲ್ಲ ಗೊತ್ತ?ಪ್ಲೀಸ್ ಯಾರು ಭಾವನೆಗಳ ಜೊತೆ ಆಟವಾಡ್ಬೇಡ ಅಂದ. ನಾನು ಅವಕ್ಕಾದೆ. ಅದರೆ ಹುಡುಕಾಟದ ಬುದ್ದಿ ನೋಡಿ ಮತ್ತೆ ಐದು ಜನಕ್ಕೆ ಹೀಗೆ ಲವ್ ಲೇಟರ್ ಬರೆದು ಆಟವಾಡಿಸಿದ್ದೀವಿ. 

ನನಗೆ ಈಗಲೂ ಗುಂಡ ಅಂದ ತಕ್ಷಣ ಇಂತಹ ಅವಿಸ್ಮರಣೀಯ ನೆನಪುಗಳು ನೆಲೆ ನಿಲ್ಲುತ್ತವೆ. ಅವನಲ್ಲಿ ಎಷ್ಟು ಪಾಸಿಟಿವ್ ಇತ್ತು ಅಂದರೆ ರೈಲ್ವೆ ಎಂಜಿನ್ ತರ ಪೆಟ್ಟಿ  ಅಂಗಡಿ ಹಿಂದೆ ನಿಂತು ಧಮ್ ಎಳೆದು ಹೊಗೆ ಬಿಡುತ್ತಿದ್ದ. ಕೆಲವು ಸಾರಿ ಗಣೇಶ್ ಬೀಡಿ ಸೇದುತ್ತಿದ್ದ. ಆದರೆ ಒಂದು ದಿನವು ತನ್ನ ಜೊತೆ ಇದ್ದ ಗೆಳೆಯರಿಗೆ ಲೇ ಸಿಗೇರೇಟ್ ಸೇದೋ ಅಂತ ಹೇಳಲಿಲ್ಲ. ಅದೇ ಅವನ ಸ್ಪಷಲ್ ಸ್ವಭಾವ. ಜೀವನದಲ್ಲಿ ಇಂತಹ ಗೆಳೆಯರು ಎಲ್ಲರಿಗೂ ಸಿಗಲ್ಲ ಅಲ್ವಾ?

ಚಿ,ಶಿ.ನಿ. 



3 comments:

  1. ನಿಮ್ಮ ಯೌವನದ ವರ್ಣನೆಗೆ ನೀವು ಬರೆದ ಪದಗಳು ನಾಚಿಕೊಂಡಿರಬೇಕು 😂

    ReplyDelete

ಬೂತ್ ಮಟ್ಟದಲ್ಲಿ ಸಂಘಟನೆಗೆ ಕಾಂಗ್ರೇಸ್ ಗಾಂಧಿ ನಡೆ

ಸೋಲದೇವನಹಳ್ಳಿ ಗ್ರಾಮದಲ್ಲಿ ನಡೆದ ಗಾಂಧಿ ನಡೆ ಕಾರ್ಯಗಾರದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೇಸ್ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಮಾತನಾಡಿದರು. ಹಿರಿಯ ಮುಖಂಡರಾದ ವೀರಪ್ಪಮೊ...