August 10, 2021

ವಿದ್ಯಾರ್ಥಿಗಳಿಗೆ ಮೇಷ್ಟ್ರರಾದ ಸರ್ಕಲ್ ಇನ್‍ಸ್ಪೆಕ್ಟರ್

ಮಾವಳಿಪುರ ಗ್ರಾಮದಲ್ಲಿ ಸಾವಿರ ಸಸಿ ನೆಡುವ ಕಾರ್ಯಕ್ರಮ ನಡೆಯಿತ್ತು. ಈ ಕುರಿತು ವರದಿ ಇಲ್ಲಿದೆ.





ವಿದ್ಯಾರ್ಥಿಗಳೊಂದಿಗೆ ರಾಜಾನುಕುಂಟೆ ಸರ್ಕಲ್ ಇನ್ ಸ್ಪೆಕ್ಟರ್ ನವೀನ್ ಕುಮಾರ್ ಸಂವಾದ ಮಾಡಿದರು.ಮಾವಳಿಪುರ ಶ್ರೀನಿವಾಸ್,ಕೆಂಪಣ್ಣ,ಟಿ.ರಮೇಶ್, ಅಮ್ಮು ಕೇರ್ ಸಂಸ್ಥೆಯ ನಿರ್ಮಲ ನಾಯಕ್,ಸುರೇಶ್ ಇದ್ದರು.  

ಹೆಸರಘಟ್ಟ:-"ಮರಗಳನ್ನು ನಾವು ಯ್ಯಾಕೆ ನೆಡಬೇಕು? ಹಣ್ಣಿನ ಗಿಡಗಳನ್ನು ನೆಡುವುದರಿಂದ ಏನು ಪ್ರಯೋಜನ? ಗಿಡ ನೆಡಲು ಮಾವಳಿಪುರ ಗ್ರಾಮವನ್ನೇ ಏಕೆ ಆಯ್ಕೆ ಮಾಡಿ ಕೊಂಡಿರಿ?" ಹೀಗೆ ಪುಟಾಣಿ ಪ್ರಶ್ನೆಗಳನ್ನು ರಾಜಾನುಕುಂಟೆ ಸರ್ಕಲ್ ಇನ್‍ಸ್ಪೆಕ್ಟರ್ ನವೀನ್ ಕುಮಾರ್  ವಿದ್ಯಾರ್ಥಿಗಳಿಗೆ ಕೇಳಿ ಉತ್ತರಗಳನ್ನು ಪಡೆದರು.

ಅಮ್ಮು ಕೇರ್ ಸಂಸ್ಥೆಯು ಮಾವಳಿಪುರ ಗ್ರಾಮದಲ್ಲಿ ಆಯೋಜಿಸಿದ್ದ ಸಾವಿರ ಸಸಿ ನೆಡುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಅವರು ಕೆಲಹೊತ್ತು  ವಿದ್ಯಾರ್ಥಿಗಳಿಗೆ ಮೇಷ್ಟ್ರರಾಗಿ ಉಪನ್ಯಾಸ ನೀಡಿದರು.  

“ನಿಜವಾದ ಸ್ವರ್ಗವನ್ನು ನಾವು ಪಡೆಯಬೇಕೆಂದರೆ ಮರಗಳನ್ನು ನಾವು ನೆಡಬೇಕು. ಮರಗಳನ್ನು ಬೆಳೆಸಿದರೆ ಅದು ಮುಂದಿನ ತಲೆಮಾರಿಗೆ ನಾವು ಕೊಡುವ ಅತ್ಯಂತ ಬೆಲೆ ಬಾಳುವ ಉಡುಗೊರೆ. ಹಿಂದಿನವರು ನಮಗೆ ಎಷ್ಟೆಲ್ಲ ಉಡುಗೊರೆಯನ್ನು ಕೊಟ್ಟು ಹೋಗಿದ್ದಾರೆ. ಆ ಉಡುಗೊರೆಗಳನ್ನು ನಾವು ಜೋಪಾನ ಮಾಡಿಕೊಳ್ಳಬೇಕು. ಇಲ್ಲದ್ದರೆ ನಾವು ಈ ಭೂಮಿ ಮೇಲೆ ಬದುಕುವುದು ಕಷ್ಟವಾಗುತ್ತದೆ" ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

"ಮರಗಳು ಜಾತಿ,ಧರ್ಮವನ್ನು ಮೀರಿ ಬೆಳೆಯುತ್ತವೆ.  ಮನುಷ್ಯ ಕುಲಂ ತಾನೊಂದು ವಲಂ ಎನ್ನುವಂತೆ ತಮ್ಮ ಸೇವೆಯನ್ನು ಎಲ್ಲರಿಗೂ ನೀಡುತ್ತವೆ.ಶಿಕ್ಷಣ ಪಡೆಯುವ ಈ ಸಮಯದಲ್ಲಿ ನಾವು ನಮ್ಮ ಸುತ್ತಲ ಪರಿಸರದಿಂದ ಇಂತಹ ಗುಣವನ್ನು ನಾವು ಕಲಿಯಬೇಕು. ನಮ್ಮ ಶಿಕ್ಷಣದ ಮಾರ್ಗ ಇದಾಗಬೇಕು"ಎಂದರು.

"ಕುವೆಂಪು,ಬೇಂದ್ರೆ,ಕಾರಂತ ಅಂತಹ ಮೇಧಾವಿಗಳು ಬಹಳ ದೊಡ್ಡ ಬದುಕನ್ನು ನಮಗೆ ಬಿಟ್ಟು ಹೋಗಿದ್ದಾರೆ. ಅವರನ್ನು ಓದುವುದರ ಮೂಲಕ ನಮ್ಮನ್ನು ನಾವು ಅರಿತು ಕೊಂಡು ಬಾಳಬಹುದು. ಪುಸ್ತಕಗಳು ಬದುಕಿನ ಒಳ್ಳೆಯ ಮಿತ್ರ" ಎಂದು ಅವರು ತಿಳಿಸಿದರು. ಕಾರ್ಯಕ್ರಮದಲ್ಲಿ ಮಾವಳಿಪುರ ಶ್ರೀನಿವಾಸ್,ಗ್ರಾಮ ಪಂಚಾಯಿತಿ ಸದಸ್ಯರಾದ ವಿಜಯ್ ಕುಮಾರ್,ಟಿ.ರಮೇಶ್,ಅಮ್ಮು ಕೇರ್ ಸಂಸ್ಥೆಯ ನಿರ್ಮಲ ನಾಯಕ್,ಸುರೇಶ್ ಭಾಗವಹಿಸಿದ್ದರು.



No comments:

Post a Comment

ಬೂತ್ ಮಟ್ಟದಲ್ಲಿ ಸಂಘಟನೆಗೆ ಕಾಂಗ್ರೇಸ್ ಗಾಂಧಿ ನಡೆ

ಸೋಲದೇವನಹಳ್ಳಿ ಗ್ರಾಮದಲ್ಲಿ ನಡೆದ ಗಾಂಧಿ ನಡೆ ಕಾರ್ಯಗಾರದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೇಸ್ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಮಾತನಾಡಿದರು. ಹಿರಿಯ ಮುಖಂಡರಾದ ವೀರಪ್ಪಮೊ...