August 13, 2021

ಅಲೆಮನೆ ತೋಪಿನ ಅಕ್ರಮ ಕಟ್ಟಡ ತೆರವಿಗೆ ಗ್ರಾಮಸ್ಥರ ಒತ್ತಾಯ

ಹೆಸರಘಟ್ಟ ಗ್ರಾಮ ಪಂಚಾಯಿತಿಯ 2021ರ ಮೊದಲ ಸುತ್ತಿನ ಗ್ರಾಮಸಭೆಯು ನಡೆಯಿತ್ತು. ಈ ಕುರಿತು ವರದಿ ಇಲ್ಲಿದೆ.


ಗ್ರಾಮಸಭೆಯು ಪಂಚಾಯಿತ್ ರಾಜ್ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ್ ಮೇಟಿ ಅವರ ಮಾರ್ಗದರ್ಶನದಲ್ಲಿ ನಡೆಯಿತ್ತು.ಪಂಚಾಯಿತಿ ಅಧ್ಯಕ್ಷರಾದ ಶಿವನಾಂದ,ಸದಸ್ಯರಾದ ರಾಜಣ್ಣ,ವಸಂತಲಕ್ಷ್ಮೀ ಇದ್ದರು

ಹೆಸರಘಟ್ಟ:-ಸರ್ಕಾರಿ ಅಲೆಮನೆ ತೋಪಿನಲ್ಲಿ  ಅಕ್ರಮವಾಗಿ ನಿರ್ಮಿಸಿರುವ  ವಾಣಿಜ್ಯ ಕಟ್ಟಡಗಳನ್ನು ತೆರೆವುಗೊಳಿಸಿ ಎಂದು ಹೆಸರಘಟ್ಟ ಗ್ರಾಮ ಪಂಚಾಯಿತಿಯ ಮೊದಲ ಸುತ್ತಿನ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಅಧಿಕಾರಿಗಳನ್ನು ಒತ್ತಾಯಿಸಿದರು.

"ಸರ್ವೆ ನಂ51 ರಲ್ಲಿ ಒಂಭತ್ತು ಕುಂಟೆ ಅಲೆಮನೆ ತೋಪಿನ ಜಾಗವಿದೆ. ಇದರಲ್ಲಿ ಐದಾರು ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸಿಕೊಂಡು ಪ್ರಭಾವಿಯೊಬ್ಬರು ಬಾಡಿಗೆ ಪಡೆಯುತ್ತಿದ್ದಾರೆ. ಅಲೆಮನೆ ತೋಪಿನ ಜಾಗವನ್ನು ಆಳತೆ ಮಾಡಿ ಹದ್ದುಬಸ್ತು ಮಾಡಿ ಎಂದು ಅಧಿಕಾರಿಗಳಿಗೆ ಮನವಿ ಕೊಟ್ಟು ಸಾಕಾಗಿದೆ. ಪಂಚಾಯಿತಿ ಗಮನಕ್ಕೆ ತಂದರೂ ಯಾವ ಪ್ರಯೋಜನವು ಆಗಿಲ್ಲ

.ಈ ಕೂಡಲೇ ಅಲೆಮನೆ ತೋಪಿನ ಜಾಗವನ್ನು ಅಳತೆ ಮಾಡಿ ಒತ್ತುವರಿಯನ್ನು ತೆರವುಗೊಳಿಸಿ”ಎಂದು ಗ್ರಾಮದ ಹಿರಿಯ ನಿವಾಸಿ ನಾರಾಯಣ ಸ್ವಾಮಿ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡರು.

"ರಾಗಿ ಬಿತ್ತನೆ ಮಾಡಲು ಈಗ ಒಳ್ಳೆಯ ಸಮಯ.  ಬಿತ್ತನೆ ಮಾಡಲು ರಾಗಿ ಬೀಜ ನೀಡಿದ್ದೀರ. ಅದರೆ ಗೊಬ್ಬರ ನೀಡಿಲ್ಲ.ಬಿತ್ತನೆ ಕಾಲ ಮುಗಿದ ಮೇಲೆ ಗೊಬ್ಬರ ನೀಡುತ್ತೀರ?"ಎಂದು ರೈತರೊಬ್ಬರು ಪ್ರಶ್ನಿಸಿದರು.

ರೈತರ ಬೇಡಿಕೆಗೆ ಸ್ಪಂದಿಸಿದ ಕೃಷಿ ಅಧಿಕಾರಿ ಈ ಕೂಡಲೇ ಗೊಬ್ಬರವನ್ನು ರೈತರಿಗೆ ನೀಡುವ ವ್ಯವಸ್ಥೆ ಮಾಡುತ್ತೀನಿ ಎಂದರು.

"ಬಿಳಿಜಾಜಿ ರಸ್ತೆಯಲ್ಲಿ ಹೆರಿಗೆ ಆಸ್ಪತ್ರೆಯ ಕಟ್ಟಡವಿದೆ. ಹೆರಿಗೆ  ಆಸ್ಪತ್ರೆಯ  ಕಟ್ಟಡದ ಒಳಗೆ ಅಂಗನವಾಡಿಯನ್ನು ಕಟ್ಟಲಾಗಿದೆ. ಹತ್ತು ವರ್ಷಗಳಿಂದ ಹೆರಿಗೆ ಆಸ್ಪತ್ರೆಗೆ ವೈದ್ಯರನ್ನು ನೇಮಿಸಿಲ್ಲ. ಹೆರಿಗೆ ಆಸ್ಪತ್ರೆ ಕಾರ್ಯನಿರ್ವಹಿಸಲು ಆರೋಗ್ಯ ಇಲಾಖೆಯು ಕ್ರಮ ಕೈಗೊಳ್ಳಬೇಕು" ಎಂದು ಗ್ರಾಮಸ್ಥರು ಒತ್ತಾಯಿಸಿದರು.

ಗ್ರಾಮಸಭೆಯು ಪಂಚಾಯಿತ್ ರಾಜ್ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ್ ಮೇಟಿ ಅವರ ಮಾರ್ಗದರ್ಶನದಲ್ಲಿ ನಡೆಯಿತ್ತು.ಪಂಚಾಯಿತಿ ಅಧ್ಯಕ್ಷರಾದ ಶಿವನಾಂದ,ಸದಸ್ಯರಾದ ರಾಜಣ್ಣ,ವಸಂತಲಕ್ಷ್ಮೀ ಇದ್ದರು


No comments:

Post a Comment

ಬೂತ್ ಮಟ್ಟದಲ್ಲಿ ಸಂಘಟನೆಗೆ ಕಾಂಗ್ರೇಸ್ ಗಾಂಧಿ ನಡೆ

ಸೋಲದೇವನಹಳ್ಳಿ ಗ್ರಾಮದಲ್ಲಿ ನಡೆದ ಗಾಂಧಿ ನಡೆ ಕಾರ್ಯಗಾರದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೇಸ್ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಮಾತನಾಡಿದರು. ಹಿರಿಯ ಮುಖಂಡರಾದ ವೀರಪ್ಪಮೊ...