June 14, 2021

ಅಬ್ಬಾ ಇಂಥ ಕರುಣೆ ಇರೋದು ಆಕೆಯಲ್ಲಿ ಮಾತ್ರ


         ಅಬ್ಬಾ ಇಂಥ ಕರುಣೆ ಇರೋದು ಆಕೆಯಲ್ಲಿ ಮಾತ್ರ

{ತಾಯಿ ಹೃದಯದಲ್ಲಿರುವ ಅಕ್ಕರೆ,ವಾತ್ಸಲ್ಯ,ಮಮತೆ,ಅನುರಾಗ ಕರುಣೆಗೆ, ಹೃದಯ ವೈಶಾಲತೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಬಹುಶಃ ನೀವೊಬ್ಬ  ಕೊಲೆಗಾರನಾದರೂ ನಿಮ್ಮನ್ನು ಒಪ್ಪುಕೊಳ್ಳುವ ಒಂದು ಮನಸ್ಸು ಇದೆ ಅಂದರೆ ಅದು ತಾಯಿ. ಇಂಥ ತಾಯಿಯ ಹೃದಯ ವಿಶಾಲತೆ ಬಗ್ಗೆ ಇರುವ ಸಣ್ಣ ಕಥೆ ಇದು. ಓದಿ ತಪ್ಪದೇ ಅಭಿಪ್ರಾಯ ಶೇರ್ ಮಾಡಿ}

ಆಕೆಯದು ನಳ ನಳಿಸುವ ಚೆಲುವು. ಚೆಂದದ ಮೊಗ,ನೀಳವಾದ ಕೇಶ,ಮಿಂಚಿನ ಕಣ್ಣುಗಳು,ಒಮ್ಮೆ ನಕ್ಕರೆ ದಾಳಿಂಬೆ ಹಣ್ಣಿನಂತೆ ಹೊಳೆಯುವ ಹಲ್ಲುಗಳು,ಎಲ್ಲವು ಬ್ಯೂಟಿಪುಲ್.ಸೃಷ್ಠಕರ್ತ ಬ್ರಹ್ಮನಿಗೆ ಬಿಡುವಿನ ಸಮಯವಿದ್ದರಿಂದ ಇವಳನ್ನು ಅಚ್ಚುಕಟ್ಟಾಗಿ ಕೆತ್ತಿ ಇಳೆಗೆ ಕಳುಹಿಸಿದ್ದೀನಿ.    

 ನಿಜ ಸುಮ ಅಂತಹ ಅಪರೂಪದ ಚೆಲುವಿನ ಗಣಿ.ಅವಳ ನಗು,ನೋಟ ಮಾತುಗಳಿಗೆ ರವಿ ಸೋತು ಹೋಗಿದ್ದ. ಹೆಸರಿಗೆ ರವಿಯಾದರೂ ಸುಮಳ ಸೌಂದರ್ಯಕ್ಕೆ ಕರಗಿದ,ಕನಸುಗಳಿಗೆ ಕಾವು ಕೊಟ್ಟು ಕನವರಿಸಲು ತೊಡಗಿದ.ಒಂದೊತ್ತಿನ ನಿದ್ರೆಗೂ ರಜೆ ಹಾಕಿ ಸುಮಳ ಧ್ಯಾನಿಸುತ್ತಿದ್ದ. ಕಲರ್ ಕಲರ್ ಡ್ರೀಮ್ ಗಳನ್ನು ಹೊಸೆಯುತ್ತಿದ್ದ. ಅವಳು ಸಿಕ್ಕರೆ ತಾನೆಷ್ಟು ಲಕ್ಕಿಫೆಲೋ ಅಂದು ಕೊಳ್ಳುತ್ತಿದ್ದ. 

ಅವತ್ತು ಸುಮ ದಾರಿಯಲ್ಲಿ ಒಬ್ಬಳೇ ನಡೆದುಕೊಂಡು ಬರುತ್ತಿದ್ದಳು. ರವಿಗೆ ಅವಳ ನೋಡಿದ ಕೂಡಲೇ ಸಂಭ್ರಮ ಪುಟಿದು ಬಂತು.ತನ್ನಲ್ಲಿ ಉದಯವಾಗಿರುವ ಪ್ರೀತಿಯನ್ನು ಪ್ರೇಮವನ್ನು ಕರೆದಿಟ್ಟ ಒಲವವನ್ನು ಹೊರಗೆ ಅಭಿವ್ಯಕ್ತ ಮಾಡುವ ಮಿಡಿತ ಹೊರ ಹೊಮ್ಮಿತ್ತು. ಸೀದಾ ಸುಮಳ ಬಳಿ ಹೋಗಿ ನಿಂತ. ಅವಳನ್ನು ದಿಟ್ಟಿಸಿ ನೋಡಿದ. ಸುಮ ತುಸು ಗಾಬರಿಯಾದರೂ ಏನೋ ಎಂಬಂತೆ ಅವನನ್ನು ನೋಡಿದಳು. ರವಿ ಅಕೆಯನ್ನು ನೋಡ್ತಾ "ನಾನು ನಿನ್ನ ಪ್ರೀತಿಸುತ್ತಿದ್ದೀನಿ. ನಿನಗಾಗಿ ನಿನ್ನ ಪ್ರೀತಿಗಾಗಿ ಯಾವ ತ್ಯಾಗವಾದರೂ ಸರಿ ಮಾಡ್ತಾನಿ. ಪ್ಲೀಸ್ ನನ್ನ ಪ್ರೀತಿಸು" ಎಂದು ಒಂದೇ ಉಸಿರಿಗೆ ಹೃದಯದ ಮಾತುಗಳನ್ನು ಬಸಿದ.   

 ಸುಮ ಅವನನ್ನು ನೋಡಿ ನಕ್ಕು, "ನನಗಾಗಿ ನೀನು ಏನು ಬೇಕಾದರೂ ಮಾಡುತ್ತೀಯ" ಅಂದ್ಲು. ಇವನಿಗೆ ಅಂಗೈಯಲ್ಲಿ ಆಕಾಶವೇ ತುಂಬಿ ಹೋದ ಅನುಭವವಾಯಿತ್ತು. ಅದೇನೋ ಹುಮ್ಮಸ್ಸು ದೇಹದಲ್ಲಿ ತುಂಬಿ ಬಂತು. "ಹುಂ ನಿನಗಾಗಿ ನಿನ್ನ ಪ್ರೀತಿಗಾಗಿ ಏನು ಬೇಕಾದರೂ ಮಾಡುತ್ತೀನಿ"ಅಂದ. ಸುಮ ಅವನನ್ನು ಅಡಿಯಿಂದ ಮುಡಿಯ ತನಕ ನೋಡಿದಳು. ಮತ್ತೆಗೆ ಹೇಳಿದಳು "ನನಗಾಗಿ ಏನು ಬೇಕಾದರೂ ಮಾಡ್ತೀಯ. ಏನು ಮಾಡೋದು ಬೇಡ. ನಿನ್ನ ತಾಯಿ ಹೃದಯ ತಂದು ಕೊಡುತ್ತೀಯ" ಎಂದಳು. ರವಿ ಹಿಂದೂ ಮುಂದೂ ಯೋಚನೆ ಮಾಡಿದೆ "ಓ ಐದೇ ನಿಮಿಷ ಇರು ತಂದು ಬಿಡುತ್ತೀನಿ" ಎಂದು ಅವಳ ಉತ್ತರಕ್ಕೆ ಕಾಯದೇ ಓಡಿದ. 

ರವಿ ಹಿಂದೂ ಮುಂದೂ ಯೋಚನೆ ಮಾಡಿದೆ "ಓ ಐದೇ ನಿಮಿಷ ಇರು ತಂದು ಬಿಡುತ್ತೀನಿ" ಎಂದು ಅವಳ ಉತ್ತರಕ್ಕೆ ಕಾಯದೇ ಓಡಿದ. ಮನೆಗೆ ಬಂದ. ತಾಯಿ ಮಲಗಿದ್ದಳು. ಚಾಕಿವಿನಿಂದ ತಾಯಿಯ ಹೃದಯವನ್ನು ಬಗೆದೆ. ಬೊಗಸೆಯಲ್ಲಿ ರಕ್ತ ತುಂಬಿದ ಹೃದಯವನ್ನು ಹಿಡಿದು ಕೊಂಡು ಸುಮಳ ಬಳಿ ಓಡಿ ಬರುತ್ತಿದ್ದ. ಓಡುವ ರಭಸಕ್ಕೆ ಎಡವಿ ದುಪ್ಪನೆ ಬಿದ್ದ. ಬೊಗಸೆಯಲ್ಲಿದ್ದ ತಾಯಿ ಹೃದಯ ಕೇಳಿತ್ತು" ಮಗನೇ ಬಿದ್ದೆಯಲ್ಲ ನೋವಾಯಿತ್ತ"ಎಂದ. ರವಿಗೆ ಆ ತಾಯಿಯ ಹೃದಯದ ಮಾತು ಕೇಳಿಸಲಿಲ್ಲ. ಸುಮ ಅಲ್ಲಿ ಇರಲಿಲ್ಲ. ತಾಯಿಯ ಹೃದಯದ ಬಡಿತ ನಿಂತಿತ್ತು.ರವಿಯ ಕಣ್ಣು ಕತ್ತಲೆಗೆ ಜಾರಿತ್ತು. 

                           *

. ಸ್ನೇಹಿತರೇ ಇದೊಂದು ಪುಟಾಣಿ ಕಥೆ. ಆದರೆ ಇಲ್ಲಿ ನೀವು ಗಮನಿಸಬಹುದು ತನ್ನನ್ನು ಕೊಂದು ಬಂದ ಮಗ ಕಾಲು ಎಡವಿ ಬಿದ್ದಾಗ "ಮಗನೇ ನೋವಾಯಿತ್ತ" ಎಂದು ಕೇಳುವಷ್ಟು ಈ ಜಗತ್ತಿನಲ್ಲಿ ಹೃದಯ ವೈಶಾಲತೆ ಇದ್ದರೆ ಅದು ತಾಯಿಗೆ ಮಾತ್ರ.ಅಲ್ಲವೇ? ನಿಮ್ಮ ಅಭಿಪ್ರಾಯ ತಿಳಿಸಿ  




1 comment:

ಬೂತ್ ಮಟ್ಟದಲ್ಲಿ ಸಂಘಟನೆಗೆ ಕಾಂಗ್ರೇಸ್ ಗಾಂಧಿ ನಡೆ

ಸೋಲದೇವನಹಳ್ಳಿ ಗ್ರಾಮದಲ್ಲಿ ನಡೆದ ಗಾಂಧಿ ನಡೆ ಕಾರ್ಯಗಾರದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೇಸ್ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಮಾತನಾಡಿದರು. ಹಿರಿಯ ಮುಖಂಡರಾದ ವೀರಪ್ಪಮೊ...