June 06, 2021

 ಶೀಘ್ರದಲ್ಲಿ ಫೆರಿಫರಿಲ್ ರಿಂಗ್ ರಸ್ತೆ ಕಾಮಗಾರಿ ಟೆಂಡರ್

ಹೆಸರಘಟ್ಟ ಸಮೀಪ ಮಾದನಾಯಕಹಳ್ಳಿ ಗ್ರಾಮದಲ್ಲಿ ಯಲಹಂಕ ಶಾಸಕ ಎಸ್.ಅರ್.ವಿಶ್ವನಾಥ್ ಸುದ್ದಿಗೋಷ್ಠಿ ನಡೆಸಿ ಫೆರಿಫೆರಲ್ ರಿಂಗ್ ರಸ್ತೆ ಕಾಮಗಾರಿ ಟೆಂಡರ್ ನಿಗದಿ ಪಡಿಸುವ ಬಗ್ಗೆ ಮಾಹಿತಿ ನೀಡಿದರು. ಈ ಕುರಿತು ವರದಿ ಇಲ್ಲಿದೆ.


ಸುದ್ದಿಗೋಷ್ಠಿಯಲ್ಲಿ ಯಲಹಂಕ ಶಾಸಕ ಬಿ.ಡಿ.ಎ. ಅಧ್ಯಕ್ಷರಾದ ಎಸ್.ಅರ್.ವಿಶ್ವನಾಥ್ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಸದಸ್ಯರಾದ ಡಾ.ಉದ್ದಂಡಯ್ಯ ಮತ್ತು ಯಲಹಂಕ ಗ್ರಾಮಾಂತರ ಮಂಡಲ ಮಾಧ್ಯಮ ಸಂಚಾಲಕರಾದ ಅಭಿನಾಶ್ ಗಣೇಶ್, ಜಿಲ್ಲಾ ಸಹ ವಕ್ತಾರರಾದ ಅರುಣ್ ಕುಮಾರ್ ಇದ್ದರು.

ಹೆಸರಘಟ್ಟ:-"73 ಕಿ.ಮೀ.ಉದ್ದದ ಫೆರಿಫೆರಲ್ ರಿಂಗ್ ರಸ್ತೆಯ ಕಾಮಗಾರಿಗೆ ಟೆಂಡರ್ ಕರೆಯುವ ಪ್ರಕ್ರಿಯೆ ನಡೆಯುತ್ತಿದ್ದು,ಶೀಘ್ರದಲ್ಲಿಯೇ ಕಾಮಗಾರಿ ಪ್ರಾರಂಭಗೊಳ್ಳಲಿದೆ' ಎಂದು ಬಿ.ಡಿ.ಎ.ಆಧ್ಯಕ್ಷರಾದ ಎಸ್.ಅರ್.ವಿಶ್ವನಾಥ್ ಅವರು ತಿಳಿಸಿದರು.

ಮಾದನಾಯಕನಹಳ್ಳಿ ನಗರಸಭೆ ವ್ಯಾಪ್ತಿಯ ಆಶಾ ಕಾರ್ಯಕರ್ತರಿಗೆ ಮತ್ತು ಬಡವರಿಗೆ ಆಹಾರದ ಕಿಟ್ ಗಳನ್ನು ವಿತರಿಸಿ  ಸುದ್ದಿ ಗೋಷ್ಠಿಯಲ್ಲಿ ಅವರು ಮಾತನಾಡಿದರು. 

"ತುಮಕೂರು ರಸ್ತೆಯ ಮಾಕಳಿ ಗ್ರಾಮದಿಂದ ಹಾಗೂ ಮಾದಾವರ ಬಳಿಯ ನೈಸ್ ರಸ್ತೆ ,ಎರಡು ಕಡೆಯಿಂದ ಫೆರಿಫೆರಲ್ ರಿಂಗ್ ರಸ್ತೆ ಪ್ರಾರಂಭವಾಗಿ ತಮ್ಮೇನಹಳ್ಳಿ ಗ್ರಾಮದಲ್ಲಿ ಕೂಡಿ ಕೊಳ್ಳುತ್ತದೆ. ಎರಡು ಕಡೆಯೂ ಒಟ್ಟಿಗೆ ಕಾಮಗಾರಿ ಆರಂಭಗೊಳ್ಳುತ್ತದೆ. ಭೂ ಮಾಲೀಕರಿಗೆ ಟೆಂಡರ್ ಮುಗಿದ ಕೂಡಲೇ ಗುತ್ತಿಗೆದಾರನಿಂದ ಹಣ ಪಡೆದು ಪರಿಹಾರವನ್ನು ವಿತರಿಸಲಾಗುವುದು" ಎಂದು ಅವರು ಹೇಳಿದರು. 

"ಯಲಹಂಕ ಕ್ಷೇತ್ರದ ಲಕ್ಷ್ಮೀಪುರ ಗ್ರಾಮದ ಬಳಿ ಮೂರು ಎಕರೆ ಜಾಗದಲ್ಲಿ ಇಪ್ಪತ್ತು ಕೋಟಿ ವೆಚ್ಚದಲ್ಲಿ ಐವತ್ತು ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆಯನ್ನು ನಿರ್ಮಾಣ ಮಾಡಲಾಗುವುದು. ಅಲ್ಲದೇ ಹೆಸರಘಟ್ಟ ಮತ್ತು ಮಾಕಳಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಲಾಗುವುದು.ಮಾದನಾಯಕನಹಳ್ಳಿ ನಗರಸಭೆಗೆ ಕಾವೇರಿ ಕುಡಿಯುವ ನೀರಿನ ಸೌಲಭ್ಯವನ್ನು ಕಲ್ಪಿಸಿ ಕೊಡಲಾಗುವುದು ಅಲ್ಲದೇ ಒಳಚರಂಡಿ ಯೋಜನೆಯನ್ನು ಅನುಷ್ಠಾನ ಮಾಡಲಾಗುವುದು"ಎಂದರು

"ಯಲಹಂಕ ಕ್ಷೇತ್ರದಲ್ಲಿ ಮೂವತ್ತು ಸಾವಿರ ಮನೆಗಳನ್ನು ನಿರ್ಮಿಸಲಾಗುತ್ತಿದೆ. ಈ ವರ್ಷ ಕಾಮಗಾರಿ ಮುಗಿಸಿ ಬಡವರಿಗೆ ಹಂಚಲಾಗುವುದು."ಎಂದು ಅವರು ತಿಳಿಸಿದರು. 

"ಯಲಹಂಕ ಕ್ಷೇತ್ರದಲ್ಲಿ ಕೊರೊನಾ ನಿಯಂತ್ರಿಸುವಲ್ಲಿ ಸಂಪೂರ್ಣವಾಗಿ ನಾವು ಯಶಸ್ವಿಯಾಗಿದ್ದೀವಿ. ಪ್ರತಿ ದಿನ ತಪಾಸಣೆ ಮಾಡುತ್ತಿದ್ದು ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದೆ. ಜನರು ಮುನ್ನೇಚ್ಚರಿಕೆ ಕ್ರಮಗಳನ್ನು ಅನುಸರಿಸುತ್ತಿದ್ದಾರೆ" ಎಂದು ಅವರು ಸಂತಸ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯರಾದ ಡಾ.ಉದ್ದಂಡಯ್ಯ,ಯಲಹಂಕ ಗ್ರಾಮಾಂತರ ಮಂಡಲ ಮಾಧ್ಯಮ ಸಂಚಾಲಕರಾದ ಅಭಿನಾಶ್ ಗಣೇಶ್, ಜಿಲ್ಲಾ ಸಹ ವಕ್ತಾರರಾದ ಅರುಣ್ ಕುಮಾರ್ ಉಪಸ್ಥಿತರಿದ್ದರು.




No comments:

Post a Comment

ಬೂತ್ ಮಟ್ಟದಲ್ಲಿ ಸಂಘಟನೆಗೆ ಕಾಂಗ್ರೇಸ್ ಗಾಂಧಿ ನಡೆ

ಸೋಲದೇವನಹಳ್ಳಿ ಗ್ರಾಮದಲ್ಲಿ ನಡೆದ ಗಾಂಧಿ ನಡೆ ಕಾರ್ಯಗಾರದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೇಸ್ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಮಾತನಾಡಿದರು. ಹಿರಿಯ ಮುಖಂಡರಾದ ವೀರಪ್ಪಮೊ...