June 10, 2021

ಚಿ.ಶಿ.ನಿ.ನ್ಯೂಸ್

 

ರಾಜಾನುಕುಂಟೆ:ಬಿ.ಪಿ.ಎಲ್. ಕುಟುಂಬಗಳಿಗೆ ಹತ್ತು ಸಾವಿರ ನೆರವಿಗೆ ಅಗ್ರಹ

ಹೆಸರಘಟ್ಟ ಹೋಬಳಿ ರಾಜಾನುಕುಂಟೆ ಗ್ರಾಮದಲ್ಲಿ  ಕಾಂಗ್ರೇಸ್ ಹಿರಿಯ ಮುಖಂಡ ಕೃಷ್ಣಬೈರೇಗೌಡ ಅವರು ಉಚಿತ ಆಹಾರ ಸಾಮಾಗ್ರಿಗಳ ಕಿಟ್‍ನ್ನು  ವಿತರಿಸಿದರು. ಈ ಕುರಿತು ವರದಿ ಇಲ್ಲಿದೆ.



ಹೆಸರಘಟ್ಟ ಹೋಬಳಿ ರಾಜಾನುಕುಂಟೆ ಗ್ರಾಮದಲ್ಲಿ  ಕಾಂಗ್ರೇಸ್ ಹಿರಿಯ ಮುಖಂಡ ಕೃಷ್ಣಬೈರೇಗೌಡ ಅವರು ಉಚಿತ ಆಹಾರ ಸಾಮಾಗ್ರಿಗಳ ಕಿಟ್‍ನ್ನು  ವಿತರಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯರಾದ ಲಾವಣ್ಯ,ಚೊಕ್ಕನಹಳ್ಳಿ ವೆಂಕಟೇಶ್,ಗ್ರಾಮ ಪಂಚಾಯಿತಿ ಸದಸ್ಯರಾದ ಎಸ್.ಜಿ.ನರಸಿಂಹಮೂರ್ತಿ,ಕಾಂಗ್ರೇಸ್ ಮುಖಂಡರಾದ ಕೇಶವ ರಾಜಣ್ಣ ಇದ್ದರು.

 ಹೆಸರಘಟ್ಟ:-"ಬಿ.ಪಿ.ಎಲ್. ಕುಟುಂಬಗಳಿಗೆ ತಲಾ ಹತ್ತು ಸಾವಿರ ಹಣವನ್ನು ಸರ್ಕಾರ ಸಂದಾಯ ಮಾಡಲಿ. ಮಕ್ಕಳ ವಿದ್ಯಾಭ್ಯಾಸ ಹೊಟ್ಟೆ ಬಟ್ಟೆಗೆ ಪೇಚಾಡುತ್ತಿರುವ ಕುಟುಂಬಗಳ ನೆರವಿಗೆ ಕೂಡಲೇ ಸರ್ಕಾರ ಧಾವಿಸಬೇಕು" ಎಂದು ಕಾಂಗ್ರೇಸ್ ಮುಖಂಡ ಕೃಷ್ಣಬೈರೇಗೌಡ ಅವರು ಒತ್ತಾಯಿಸಿದ್ದಾರೆ.

ಅವರು ರಾಜಾನುಕುಂಟೆ ಗ್ರಾಮದಲ್ಲಿ ಯಲಹಂಕ ಕಾಂಗ್ರೇಸ್ ಮುಖಂಡರು ಆಯೋಜಿಸಿದ್ದ ಆಟೋ ಚಾಲಕರು,ಆಶಾ ಕಾರ್ಯಕರ್ತರು,ಮತ್ತು ದಿನಗೂಲಿ ಕಾರ್ಮಿಕರಿಗೆ ಆಹಾರದ ಕಿಟ್‍ಗಳ  ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ

ಮಾತನಾಡಿದರು.

"ಬೆಲೆ ಏರಿಕೆಯಿಂದ ಜನರು ತತ್ತರಿಸಿ ಹೋಗಿದ್ದಾರೆ. ಡಿಸೇಲ್ ಮತ್ತು ಪೆಟ್ರೋಲ್ ಬೆಲೆ ಗಗನಕ್ಕೇರಿದೆ. ಈಗ ವಿದ್ಯುತ್ ದರವನ್ನು ಏರಿಕೆ ಮಾಡುವುದರ ಮೂಲಕ ಜನರಿಗೆ ಮತ್ತೊಂದು ಹೊರೆಯನ್ನು ಸರ್ಕಾರ ಹಾಕಿದೆ.  ಕೊರೊನಾದಿಂದ ಜನರು ನುಲುಗಿ ಹೋದರೆ ಸರ್ಕಾರ ಬೆಲೆಯನ್ನು ಏರಿಕೆ ಮಾಡಿ ಜನ ಸಾಮಾನ್ಯರ ಬದುಕನ್ನು ನಜ್ಜುಗುಜ್ಜಾಗಿಸಿದೆ" ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

"ಬಿ.ಜೆ.ಪಿ. ಸರ್ಕಾರ ಸುಲಿಗೆಗೆ ನಿಂತಿದೆ. ಇಂಥ ಹೊತ್ತಿನಲ್ಲಿ ನೀವುಗಳು ಮಾತನಾಡಬೇಕು. ಇಲ್ಲದಿದ್ದರೆ ಸರ್ಕಾರ ಜನ ಒಪ್ಪಿಕೊಂಡಿದ್ದಾರೆ ಎಂದು ಮನಸ್ಸಿಗೆ ಬಂದಂತೆ ಎಲ್ಲವನ್ನು ಏರಿಕೆ ಮಾಡುತ್ತದೆ. ಹೋರಾಟಗಳ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಬೇಕು" ಎಂದು ಅವರು ಕಿವಿ ಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಲಾವಣ್ಯ,ಚೊಕ್ಕನಹಳ್ಳಿ ವೆಂಕಟೇಶ್,ಗ್ರಾಮ ಪಂಚಾಯಿತಿ ಸದಸ್ಯರಾದ ಎಸ್.ಜಿ.ನರಸಿಂಹಮೂರ್ತಿ,ಕಾಂಗ್ರೇಸ್ ಮುಖಂಡರಾದ ಕೇಶವ ರಾಜಣ್ಣ. ಉಪಸ್ಥಿತರಿದ್ದರು.

ಶುಭ ಹಾರೈಕೆಗಳೊಂದಿಗೆ,,,,




 

No comments:

Post a Comment

ಬೂತ್ ಮಟ್ಟದಲ್ಲಿ ಸಂಘಟನೆಗೆ ಕಾಂಗ್ರೇಸ್ ಗಾಂಧಿ ನಡೆ

ಸೋಲದೇವನಹಳ್ಳಿ ಗ್ರಾಮದಲ್ಲಿ ನಡೆದ ಗಾಂಧಿ ನಡೆ ಕಾರ್ಯಗಾರದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೇಸ್ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಮಾತನಾಡಿದರು. ಹಿರಿಯ ಮುಖಂಡರಾದ ವೀರಪ್ಪಮೊ...