June 20, 2021

ತೋಟಗೆರೆ:ಪತ್ರಿಕಾ ವಿತರಕರಿಗೆ ಆಹಾರದ ಕಿಟ್ ವಿತರಣೆ

 ತೋಟಗೆರೆ:ಪತ್ರಿಕಾ ವಿತರಕರಿಗೆ ಆಹಾರದ ಕಿಟ್ ವಿತರಣೆ

{ಹೆಸರಘಟ್ಟ ಸಮೀಪ ದಾಸನಪುರ ಹೋಬಳಿಯ ತೋಟಗೆರೆ ಗ್ರಾಮದಲ್ಲಿ ಪತ್ರಿಕೆ ವಿತರಕರಿಗೆ ದಿನಸಿ ಸಾಮಾಗ್ರಿಗಳ ಕಿಟ್ ನ್ನು ವಿತರಿಸಲಾಯಿತ್ತು ಈ ಕುರಿತು ವರದಿ ಇಲ್ಲಿದೆ. }

ಗೋಪಾಲಪುರ ಗ್ರಾಮದಲ್ಲಿರುವ ವಾತ್ಸಲ್ಯ ಮಹಿಳಾ ಸೇವಾ ಸಂಸ್ಥೆಯು ತೋಟಗೆರೆ ಗ್ರಾಮದಲ್ಲಿ ಪತ್ರಿಕ ವಿತರಕರಿಗೆ ಆಹಾರ ಸಾಮಾಗ್ರಿಗಳ ಕಿಟ್‍ನ್ನು ವಿತರಿಸಿತ್ತು. ಸಂಸ್ಥೆಯ ಅಧ್ಯಕ್ಷರಾದ ವೀಣಾ ರಮೇಶ್, ವೈದ್ಯರಾದ ಡಾ.ವಿನಯ್ ಕುಮಾರ್,ಸಿದ್ದಗಂಗಾ ಪ್ರೌಢಶಾಲೆ ಮುಖ್ಯ ಶಿಕ್ಷಕರಾದ ಸಂಗಪ್ಪ ಇದ್ದರು.

ಹೆಸರಘಟ್ಟ:-ದಾಸನಪುರ ಹೋಬಳಿ ಗೋಪಾಲಪುರ ಗ್ರಾಮದಲ್ಲಿರುವ ವಾತ್ಸಲ್ಯ ಮಹಿಳಾ ಸೇವಾ ಸಂಸ್ಥೆಯು ತೋಟಗೆರೆ ಗ್ರಾಮದಲ್ಲಿ ಪತ್ರಿಕೆ ವಿತರಕರಿಗೆ ದಿನಸಿ ಕಿಟ್ ಗಳನ್ನು ಭಾನುವಾರ ವಿತರಿಸಿತ್ತು.

 "ಲಾಕ್ ಡೌನ್ ಅವಧಿಯಲ್ಲಿ ಯೋಧರಂತೆ ಪತ್ರಿಕೆಗಳನ್ನು ಮನೆ ಮನೆಗಳಿಗೆ ತಲುಪಿಸಿದ ಯುವಕರ ಕಾಯಕ ಶ್ಲಾಘನೀಯ. ಪ್ರತಿದಿನ ರಾಜ್ಯ ಮತ್ತು ಅಂತರರಾಷ್ಟ್ರೀಯ ಸುದ್ದಿಗಳನ್ನು ಮನೆ ಬಾಗಿಲಿಗೆ ತಲುಪಿಸಿದ ಯಶಸ್ಸು ಅವರದ್ದು. ಎಲ್ಲರೂ ಮನೆಯೊಳಗೆ ಇದ್ದಾಗ ಪತ್ರಿಕೆ ಹಂಚುವ ಯುವಕರು ಹೊರಗೆ ಬಂದು ಜನರ ಸೇವೆಯನ್ನು ಮಾಡಿದ್ದಾರೆ" ಎಂದು  ವಾತ್ಸಲ್ಯ ಮಹಿಳಾ ಸೇವಾ ಸಂಸ್ಥೆಯ ಅಧ್ಯಕ್ಷರಾದ ವೀಣಾ ರಮೇಶ್ ಪತ್ರಿಕೆ ವಿತರಣಾ ಕೆಲಸವನ್ನು ಶ್ಲಾಘಿಸಿದರು.

"ಪತ್ರಿಕೆ ಹಂಚುವ ಯುವಕರಿಗೆ ಸರ್ಕಾರದ ಕೆಲವೊಂದು ಸೌಲಭ್ಯವನ್ನು ನೀಡಿದರೆ ಒಳಿತಾಗುತ್ತದೆ. ಅವರ ಕೆಲಸವನ್ನು ಅವರ ಶ್ರಮವನ್ನು ಈ ಸಮಾಜ ಗಮನಿಸಬೇಕಾಗಿದೆ" ಎಂದರು.

"ಕೋವಿಡ್ ಮಧ್ಯೆಯು ಮಾಧ್ಯಮಗಳು ನಿರ್ವಹಿಸುತ್ತಿರುವ ಕೆಲಸ ಅದ್ವಿತೀಯವಾಗಿದೆ. ಜನರನ್ನು ಎಚ್ಚರಿಸುವ ಮೂಲಕ ಮಾಧ್ಯಮಗಳು ಈ ಸಮಾಜಕ್ಕೆ ಉತ್ತಮ ಕೊಡುಗೆಯನ್ನು ನೀಡುತ್ತಿದೆ. ಇಂಥ ಮಾಧ್ಯಮಗಳಲ್ಲಿ ಶ್ರಮವಹಿಸುವ ಕೆಲಸಗಾರಿಗೆ ಆಹಾರದ ಕಿಟ್ ವಿತರಿಸಿರುವುದು ಶ್ಲಾಘನೀಯ ಕೆಲಸ. ಅದಷ್ಟು ಮುಂಜ್ರಾಗತೆ ಕ್ರಮವನ್ನು ಅನುಸರಿಸಿ. ಮೂರನೇ ಅಲೆಯ ಬಗ್ಗೆ ಎಚ್ಚರ ಅಗತ್ಯ" ಎಂದು ವೈದ್ಯ ಡಾ.ವಿನಯ್ ಕುಮಾರ್  ಕಿವಿ ಮಾತು ಹೇಳಿದರು.

ಹಿರಿಯ ಬಿ.ಜೆ.ಪಿ. ಮುಖಂಡ ಬಸವೇಗೌಡ,ಸಿದ್ದಗಂಗಾ ಪ್ರೌಢಶಾಲೆ ಮುಖ್ಯ ಶಿಕ್ಷಕರಾದ ಸಂಗಪ್ಪ ಉಪಸ್ಥಿತರಿದ್ದರು.   




No comments:

Post a Comment

ಬೂತ್ ಮಟ್ಟದಲ್ಲಿ ಸಂಘಟನೆಗೆ ಕಾಂಗ್ರೇಸ್ ಗಾಂಧಿ ನಡೆ

ಸೋಲದೇವನಹಳ್ಳಿ ಗ್ರಾಮದಲ್ಲಿ ನಡೆದ ಗಾಂಧಿ ನಡೆ ಕಾರ್ಯಗಾರದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೇಸ್ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಮಾತನಾಡಿದರು. ಹಿರಿಯ ಮುಖಂಡರಾದ ವೀರಪ್ಪಮೊ...