June 30, 2021

ನನ್ನೂರು. com

 



{ಬದುಕು ಅನೇಕ ಮಗ್ಗಲನ್ನು ಕಾಣುತ್ತಿದೆ. ಬಾಲ್ಯದಲ್ಲಿ ಕಂಡ ಮರ,ಅಜ್ಜಿ ಮತ್ತು ಸುತ್ತಲ ಪ್ರಪಂಚವು ಹಾಗೆ ಇದೆ. ಅದರೆ ಕ್ರಿಯಾಶೀಲತೆಯು ಬೇರೆ ಮಗ್ಗಲನ್ನು ಕಂಡಿದೆ. ಈ ಕುರಿತು ಒಂದು ಪದ್ಯ ಇಲ್ಲಿದೆ.}


ನನ್ನೂರು. com

ನನ್ನೂರಿನಲ್ಲಿ 

ಬೆಳಗಿತ್ತು ಹಕ್ಕಿಗಳ ಚಿಲಿಪಿಲಿ ಇಲ್ಲ

ಮರವಿತ್ತು ನೆರಳಿಲ್ಲ

ಅಜ್ಜಿ ಇದ್ದಳು 

ಕತೆ ಕೇಳುವರಿಲ್ಲ


ನನ್ನೂರಿನಲ್ಲಿ

ಅಂಗಳವಿತ್ತು

ರಚುಕ್ಕಿಯಿಟ್ಟ ರಂಗೋಲಿ ಇಲ್ಲ

ತಂಬೂರಿ ಇತ್ತು

ಮೀಟುವ ಕೈ ಇಲ್ಲ

ಕೊರವಂಜಿ ಇದ್ದಳು

ಕಣಿ ಹೇಳುತ್ತಿರಲಿಲ್ಲ


ನನ್ನೂರಿನಲ್ಲಿ 

ಸಾರಾಯಿ ಇತ್ತು

ಹನಿ ನೀರಿಲ್ಲ

ತಬ್ಬಲಿಗಳ ನೋವಿತ್ತು

ಆಲಿಸುವ ಕಿವಿ ಇಲ್ಲ

ಓದಿದವರ ಪಡೆ ಇತ್ತು

ಊರು ಕಟ್ಟುವ ಮನಸ್ಸಿಲ್ಲ


ನನ್ನೂರು ಬೀದಿ ದೀಪಗಳಿಂದ ಝಗಮಗಿಸಿತ್ತು

ಇದ್ದ ಎಲ್ಲ ಮನೆಗಳಲ್ಲಿ ಬೆಳಕು ಬೆಳಗಿತ್ತು

ಆದರೆ ಮನದ ಕತ್ತಲು ಹಾಗೇ ಉಳಿದಿತ್ತು.




 


No comments:

Post a Comment

ಬೂತ್ ಮಟ್ಟದಲ್ಲಿ ಸಂಘಟನೆಗೆ ಕಾಂಗ್ರೇಸ್ ಗಾಂಧಿ ನಡೆ

ಸೋಲದೇವನಹಳ್ಳಿ ಗ್ರಾಮದಲ್ಲಿ ನಡೆದ ಗಾಂಧಿ ನಡೆ ಕಾರ್ಯಗಾರದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೇಸ್ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಮಾತನಾಡಿದರು. ಹಿರಿಯ ಮುಖಂಡರಾದ ವೀರಪ್ಪಮೊ...