June 30, 2021

ಚಿವಿಟ್ ಚಿವಿಟ್ ಸೂರಕ್ಕಿ

 ಚಿವಿಟ್  ಚಿವಿಟ್  ಸೂರಕ್ಕಿ

ಚಿತ್ರ ಲೇಖನ:ಸಿ.ಎಸ್.ನಿರ್ವಾಣ ಸಿದ್ದಯ್ಯ 

   ಸೂರ್ಯನ ಚಿನ್ನದ ಕಿರಣಗಳು ಇಳೆಯ ಮೇಲೆ ಸಂಭ್ರಮಿಸುತ್ತಿದ್ದವು. ಚಿಲಿಪಿಲಿಗುಟ್ಟುತ್ತಲೇ ಗೂಡಿನಿಂದ ಹೊರ ಬಂದ ಹಕ್ಕಿಗಳು ಸಂತಸದಿಂದ ಮರದಿಂದ ಮರಕ್ಕೆ ಜಿಗಿಯುತ್ತಿದ್ದವು. ಸಕಲ ಜೀವಿಗಳು ಎಚ್ಚರಗೊಳ್ಳುವ ಈ ಸಮಯ ಛಾಯಾಚಿತ್ರಕ್ಕೆ ಹೇಳಿ ಮಾಡಿಸಿದ್ದು. ನಿಸರ್ಗದ ಜೀವಿಗಳನ್ನು ಅವುಗಳ ಚೆಲುವನ್ನು ಅಂದವಾಗಿ ಈ ಹೊತ್ತಿನಲ್ಲಿ ಚಿತ್ರಿಸಬಹುದು. ರೆಕ್ಕೆ ಬಡಿಯುವ ,ಕೊಕ್ಕು ತೀಡಿ ಕೊಳ್ಳುವ,ಮೈ ಮುರಿದು ಅಕಳಿಸುವ ಹೀಗೆ ವಿವಿಧ ಚಟುವಟಿಕೆಗಳನ್ನು ಹಕ್ಕಿಗಳು ಈ ಹೊತ್ತಿನಲ್ಲಿ ನಿರ್ವಹಿಸುತ್ತವೆ.



ಅವತ್ತೂ ಇಂಥ ಹೊತ್ತಿನಲ್ಲಿ ಕ್ಯಾಮಾರವನ್ನು ಹೆಗಲಿಗೆ ಹಾಕ್ಕೊಂಡು ಹೊರಟಾಗ ಪಪ್ಪಾಯಿ ಮರದ ಮೇಲೆ ಕುಳಿತು ಚಿವಿಟ್ ಚಿವಿಟ್ ಎಂದು ಶಬ್ದ ಮಾಡುತ್ತದ್ದ ಅಂಗೈ ಅಗಲದ ಹಕ್ಕಿಯೊಂದು ಕಣ್ಣಿಗೆ ಬಿತ್ತು. ತಕ್ಷಣ ಚುರುಕಾದೆ. ಕ್ಯಾಮಾರ ಹೊರ ತೆಗೆದು ಹತ್ತಾರು ಫೋಟೋಗಳನ್ನು ಸೆರೆ ಹಿಡಿದೆ.

   ಸ್ಟ್ರಾನಂತಹ ಕೊಕ್ಕು,ಎದೆ ಭಾಗದಲ್ಲಿ ಹಾಲಿನಂತಹ ಬಿಳುಪುಹಳದಿ ಹೊಟ್ಟೆ ಮತ್ತು ಬಿಳಿ ಬದಿಗಳನ್ನು ಹೊಂದಿರುವ ದೇಹ,ಹೊಳೆಯುವ ಚಿಕ್ಕ ಚಿಕ್ಕ ಅಕ್ಷಿ ವಾಹ್ ಎಷ್ಟು ಚೆಂದ ಈ ಹಕ್ಕಿ.  ಸೂಕ್ಷ್ಮವಾಗಿ ತೆಗೆದ ಫೋಟೋ ನೋಡಿದೆ. ವಾರ್ಹೆ ವಾಹ್ ಇದು ಸುರ್ ಸುರ್ ಸೂರಕ್ಕಿ. ಹೂವಿನ ಮರಕಂದ್ರ ಹೀರಿ ಬದುಕುವ  ಹಕ್ಕಿ ಇದು.



   ಈ ಪುಟಾಣಿ ಹಕ್ಕಿ ರೆಕ್ಕೆ ಬಿಚ್ಚಿ ಹೂವಿನ ಬುಡಕ್ಕೆ ಉದ್ದನೆಯ ಕೊಳವೆ ನಾಲಿಗೆ ಚಾಚಿ ಮಕರಂದ ಹೀರುತ್ತದೆ. 132 ವಿಧಗಳ ಮಕರಂದ ಸವಿಯುವ ಪುಟಾಣಿ ಹಕ್ಕಿಗಳು ವಿಶ್ವದಲ್ಲಿದೆ. ಕರ್ನಾಟಕದಲ್ಲಿ ಅವುಗಳ 6 ತಳಿಗಳಿವೆ. .ಹಳದಿ  ಸೂರಕ್ಕಿ,ಕೆನ್ನೀಲಿ ಪುಷ್ಠಿದ ಸೂರಕ್ಕಿ (ಪರ್ ಸಲ್ ಸನ್ ಬರ್ಡ)ಸಣ್ಣ ಸೂರಕ್ಕಿ,ಕಪ್ಪು ಸೂರಕ್ಕಿ ಹೆಚ್ಚಾಗಿ ನಮ್ಮ ನಾಡಿನಲ್ಲಿ ಇವೆ.

 ಅಮೇರಿಕಾದ ಹಮ್ಮಿಂಗ್ ಬರ್ಡ್ ಹತ್ತಿರದ ಸಂಬಂಧಿ. ಇಂಗ್ಲೀಷ್‍ನಲ್ಲಿ ಇದನ್ನು ಸನ್ ಬರ್ಡ ಎಂದು ಕರೆಯುತ್ತಾರೆ. ಹೂವಿನ ಬಳಿ ಹೋಗಿ ಸುರ್ ಸುರ್ ಎಂದು ಮಕರಂದ ಹೀರುತ್ತದೆ. ಒಂದು ಹೂವಿನ ಬಳಿ  ಮೂವತ್ತು ಸೆಕೆಂಡ್ ಕಾಲ ಮಾತ್ರ ಇರುತ್ತದೆ. ಚಕ ಚಕ ಹೂವಿನಿಂದ ಹೂವಿಗೆ ಹಾರುತ್ತಲೇ ಇರುತ್ತದೆ. ಸದಾ ಲವಲವಿಕೆಯನ್ನು ಹೊಂದಿರುವ ಹಕ್ಕಿ ಇದು.



 ಕೊಂಬೆಗಳ ತುದಿಗೆ ನೇತಾಡುವಂತೆ ಒಣಗಿದ ಎಲೆ,ನಾರು,ಜೇಡರಬಲೆಗಳಿಂದ  ಹತ್ತು ಸೆ.ಮೀ. ಗಾತ್ರದ  ಗೂಡನ್ನು ಇದು ಕಟ್ಟುತ್ತದೆ. ಸಾಮಾನ್ಯವಾಗಿ ಕ್ರೋಟಾನು,ರತ್ನಗಂಧಿ,ನುಗ್ಗೆಕಾಯಿ ಹೂವುಗಳ ಮಕರಂzವನ್ನು   ಹೆಚ್ಚಾಗಿ ಹೀರಿ ಜೀವಿಸುತ್ತದೆ. ಹಸಿ ನೆಲದ ಮೇಲೆ ಓಡಾಡಿ ಚಿಕ್ಕ ಚಿಕ್ಕ  ಕ್ರೀಮಿಗಳನ್ನು ಹಿಡಿದು ತಿನ್ನುತ್ತದೆ.

   ಮನೆ ಅಂಗಳದಲ್ಲಿ ಬೆಳೆಯುವ ದಾಸವಾಳ,ವಿವಿಧ ತರಕಾರಿ ಹೂವುಗಳ ಮಧ್ಯ ಮಕರಂದ ಹೀರಿ ಚಿವಿಟ್ ಚಿವಿಟ್ ಎಂದು ಶಬ್ದ ಮಾಡುತ್ತ ಓಡುವ ಈ ಸೂರಕ್ಕಿ ನೋಡುವುದೇ ಕಣ್ಣಿಗೆ ಹಬ್ಬ. ಪ್ರಕೃತಿ ಅದೆಷ್ಟು ಜೀವಿಗಳನ್ನು ತನ್ನ ಒಡಲಲ್ಲಿಟ್ಟು ಕೊಂಡು ಸಾಕುತ್ತಿದ್ದಿಯೋ ಗೋತ್ತಿಲ್ಲ. ಅದರೆ ಇಂತಹ ಹಕ್ಕಿಗಳ ಬದುಕನ್ನು ನೋಡುತ್ತ ಕಾಣುತ್ತ ಹೋಗುತ್ತಿದ್ದರೆ ಪ್ರಕೃತಿ ಎಷ್ಟು ವೈವಿಧ್ಯಮವನ್ನು ತನ್ನಲ್ಲಿ ಇರಿಸಿಕೊಂಡಿದೆ  ಎಂದು ಅಚ್ಚರಿಯಾಗುವುದು ಸತ್ಯ ಅಲ್ಲವೇ?

 


1 comment:

  1. ಸೂರಕ್ಕಿಯ ಕುರಿತು ಉಪಯುಕ್ತ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು ಸರ್

    ReplyDelete

ಬೂತ್ ಮಟ್ಟದಲ್ಲಿ ಸಂಘಟನೆಗೆ ಕಾಂಗ್ರೇಸ್ ಗಾಂಧಿ ನಡೆ

ಸೋಲದೇವನಹಳ್ಳಿ ಗ್ರಾಮದಲ್ಲಿ ನಡೆದ ಗಾಂಧಿ ನಡೆ ಕಾರ್ಯಗಾರದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೇಸ್ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಮಾತನಾಡಿದರು. ಹಿರಿಯ ಮುಖಂಡರಾದ ವೀರಪ್ಪಮೊ...