July 03, 2021

ಗ್ರಾ.ಪಂ. ಪರವಾನಿಗೆ ಪಡೆಯದೇ ಕಾರ್ಯ ನಿರ್ವಹಿಸುತ್ತಿದ್ದ ಪೆಟ್ರೋಲ್ ಬಂಕ್

 

ಗ್ರಾ.ಪಂ. ಪರವಾನಿಗೆ ಪಡೆಯದೇ ಕಾರ್ಯ ನಿರ್ವಹಿಸುತ್ತಿದ್ದ ಪೆಟ್ರೋಲ್ ಬಂಕ್ :

  ಶಿವಕೋಟೆ ಗ್ರಾಮ ಪಂಚಾಯಿತಿ ಸದಸ್ಯರ ಪ್ರತಿಭಟನೆ

{ಹೆಸರಘಟ್ಟ ಹೋಬಳಿ ಶಿವಕೋಟೆ ಗ್ರಾಮ ಪಂಚಾಯಿತಿ ಸದಸ್ಯರು ಗ್ರಾಮ ಪಂಚಾಯಿತಿಯ ಪರವಾನಿಗೆ ಪಡೆಯದೇ ಕಾರ್ಯ ನಿರ್ವಹಿಸುತ್ತಿದ್ದ ಪೆಟ್ರೋಲ್ ಬಂಕ್‍ನ ಕ್ರಮವನ್ನು ಖಂಡಿಸಿ ಪ್ರತಿಭಟನೆ ನಡೆಸಿದರು. ಈ ಕುರಿತು ವರದಿ ಇಲ್ಲಿದೆ.}


ಗ್ರಾಮ ಪಂಚಾಯಿತಿಯಿಂದ ಪರವಾನಿಗೆ ಪಡೆಯದೇ ಕಾರ್ಯ ನಿರ್ವಹಿಸುತ್ತಿದ್ದ ಪೆಟ್ರೋಲ್ ಬಂಕ್ನ್ನು ಶಿವಕೋಟೆ ಗ್ರಾಮ ಪಂಚಾಯಿತಿ ಸದಸ್ಯರು ಮಾಲೀಕರನ್ನು ತರಾಟೆಗೆ ತೆಗೆದುಕೊಂಡು ಬಂಕ್ ಮುಚ್ಚಿಸಿದರು.

ಹೆಸರಘಟ್ಟ:-ಗ್ರಾಮ ಪಂಚಾಯಿತಿಯಿಂದ ಪರವಾನಿಗೆ ಪಡೆಯದೇ ಕಾರ್ಯ ನಿರ್ವಹಿಸುತ್ತಿದ್ದ ಶ್ರೀ ಸಾಯಿ ಆಂಜನೇಯ ಪೆಟ್ರೋಲ್ ಬಂಕ್‍ನ ಕ್ರಮವನ್ನು ಖಂಡಿಸಿ ಶಿವಕೋಟೆ ಗ್ರಾಮ ಪಂಚಾಯಿತಿ ಸದಸ್ಯರು ಪ್ರತಿಭಟನೆ ನಡೆಸಿದರು. ಪೆಟ್ರೋಲ್ ಬಂಕ್ ಗ್ರಾಮ ಪಂಚಾಯಿತಿಯಿಂದ ಪರವಾನಿಗೆ ಪಡೆಯುವ ತನಕ ಕೆಲಸ ನಿರ್ವಹಿಸಬಾರದು ಎಂದು ಶಿವಕೋಟೆ ಗ್ರಾಮಸ್ಥರು ಪಟ್ಟು ಹಿಡಿದಾಗ ಪೊಲೀಸರು ಬಂಕ್‍ನ್ನು ಮುಚ್ಚಿಸಿದರು.

" ಶಿವಕೋಟೆ ಗ್ರಾಮದಿಂದ ಹೆಸರಘಟ್ಟ ಗ್ರಾಮಕ್ಕೆ ಹೋಗುವ ಮಾರ್ಗಮಧ್ಯೆ ಶ್ರೀಸಾಯಿ ಆಂಜನೇಯ ಪೆಟ್ರೋಲ್ ಬಂಕ್ ಪಂಚಾಯಿತಿಯಲ್ಲಿ ಯಾವುದೇ ಪರವಾನಿಗೆಯನ್ನು ಪಡೆಯದೇ  ಕೆಲಸ ನಿರ್ವಹಿಸುತ್ತಿದೆ.  ರಿಜಿಸ್ಟ್ರರ್ ಅಂಚೆ ಮೂಲಕ ನೋಟಿಸ್ ನೀಡಿದರೂ ಯಾವುದೇ ಉತ್ತರವನ್ನು ಕೊಟ್ಟಿಲ್ಲ. ಪಂಚಾಯಿತಿ ರಾಜ್ ಅಧಿನಿಯಮ 66ರಿಂದ 70ರ ನಿಯಮದ ಪ್ರಕಾರ ಪಂಚಾಯಿತಿಯಲ್ಲಿ ಎನ್.ಓ.ಸಿ. ಮತ್ತು ಪರವಾನಿಗೆ ಪಡೆಯಬೇಕು. ಇದು ಯಾವುದನ್ನು ಪಡೆಯದೇ ಪೆಟ್ರೋಲ್ ಬಂಕ್ ನಡೆಸುತ್ತಿದ್ದಾರೆ. ಹಣವಿದ್ದರೆ ಯಾವ ನಿಯಮ ಬೇಡ ಎನ್ನುವ ಮಾಲೀಕರ ಧೋರಣೆ ಖಂಡನೀಯ"ಎಂದು ಪ್ರತಿಭಟನೆ ನಿರತರಾದ ಮಾವಳಿಪುರ ಗ್ರಾಮ ಪಂಚಾಯಿತಿ ಸದಸ್ಯ ಕೆಂಪಣ್ಣ ಆಕ್ರೋಶ ವ್ಯಕ್ತಪಡಿಸಿದರು.

"ಸುಮಾರು ನಾಲ್ಕು ಕುಂಟೆ ಕೆರೆ ಜಾಗವನ್ನು ಒತ್ತುವರಿ ಮಾಡಿಕೊಂಡು ಬಂಕ್ ಗೆ ರಸ್ತೆಯನ್ನು ನಿರ್ಮಿಸಲಾಗಿದೆ.ಕೆರೆ ಜಾಗ ಒತ್ತುವರಿ ಮಾಡಿಕೊಂಡಿರುವುದನ್ನು ಕಣ್ಣಾರೆ ಕಂಡ ಅಧಿಕಾರಿಗಳು ಯಾವುದೇ ಕ್ರಮವನ್ನು ಇಲ್ಲಿಯತನಕ ತೆಗೆದು ಕೊಂಡಿಲ್ಲ. ಬಂಡವಾಳ ಶಾಹಿಗಳ ತಾಳಕ್ಕೆ ಕುಣಿಯುತ್ತಿದ್ದಾರೆ" ಎಂದು ಮತ್ಕೂರು ಗ್ರಾಮ ಪಂಚಾಯಿತಿ ಸದಸ್ಯ ಸಂಜೀವಪ್ಪ ಬೇಸಾರ ವ್ಯಕ್ತಪಡಿಸಿದರು.

"ವರ್ಷದಿಂದ ಪಂಚಾಯಿತಿಗೆ ಕಟ್ಟುವ ತೆರಿಗೆಯನ್ನು ಕಟ್ಟಿಲ್ಲ. ಜಾಗ ನೀಡಿರುವ  ಮಾಲೀಕರಿಗೆ ಇ ಖಾತೆಯಾಗಿಲ್ಲ. ಇಷ್ಟೆಲ್ಲ ನ್ಯೂನತೆಗಳು ಇದ್ದರೂ ದಬ್ಬಾಳಿಕೆಯಿಂದ ಪೆಟೋಲ್ ಬಂಕ್ ನಡೆಸುತ್ತಿದ್ದಾರೆ."ಎಂದು ಶಿವಕೋಟೆ ಗ್ರಾಮ ಪಂಚಾಯಿತಿ ಸದಸ್ಯ ಮುನಿರಾಜು ಅಸಮಾಧಾನ ತೊಡಿಕೊಂಡರು.


 

 

No comments:

Post a Comment

ಬೂತ್ ಮಟ್ಟದಲ್ಲಿ ಸಂಘಟನೆಗೆ ಕಾಂಗ್ರೇಸ್ ಗಾಂಧಿ ನಡೆ

ಸೋಲದೇವನಹಳ್ಳಿ ಗ್ರಾಮದಲ್ಲಿ ನಡೆದ ಗಾಂಧಿ ನಡೆ ಕಾರ್ಯಗಾರದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೇಸ್ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಮಾತನಾಡಿದರು. ಹಿರಿಯ ಮುಖಂಡರಾದ ವೀರಪ್ಪಮೊ...