July 25, 2021

ಅಭಿನಯ ಶಾರದೆ ಜಯಂತಿ ಇನ್ನಿಲ್ಲ

     ಅಭಿನಯ ಶಾರದೆ ಜಯಂತಿ  ಇನ್ನಿಲ್ಲ

ಬೆಂಗಳೂರು:-ಕನ್ನಡದ ಹಿರಿಯ ಬಹುಭಾಷೆ ನಟಿ ಜಯಂತಿ ಅವರು ವಿಧಿವಶವಾಗಿದ್ದಾರೆ. 1945ರಲ್ಲಿ ಜನವರಿ 6 ರಂದು ಬಳ್ಳಾರಿಯಲ್ಲಿ ಜಯಂತಿ ಅವರು ಜನಿಸಿದರು. ಮೂಲ ಹೆಸರು ಕಮಲಾ ಕುಮಾರಿ. ಜೇನುಗೂಡು ಚಲನಚಿತ್ರದ ಮೂಲಕ ನಾಯಕನಟಿಯಾಗಿದ್ದ  ಅವರು ವರನಟ ಡಾ.ರಾಜ್ ಕುಮಾರ್ ಅವರ ಜೊತೆ ಸುಮಾರು 45 ಚಿತ್ರಗಳಲ್ಲಿ ನಾಯಕಿಯಾಗಿ ಅಭಿನಯಿಸಿದರು. ಮರಾಠಿ,ಹಿಂದಿ,ತೆಲುಗು,ತೆಮಿಳು ಭಾಷೆಗಳಲ್ಲಿ ಅಭಿನಯಸಿದ್ದ ಅವರು ಎಲ್ಲ ಪ್ರಸಿದ್ದ ನಟರ ಜೊತೆ ಅಭಿಯಿಸಿದ್ದಾರೆ. ಕನ್ನಡದಲ್ಲಿ ವಿಷ್ಣುವರ್ಧನ್,ರಾಜ್ ಕುಮಾರ್,ಉದಯ್ ಕುಮಾರ್ ಮತ್ತು ಕಲ್ಯಾಣ್ ಕುಮಾರ್ ಅವರೊಂದಿಗೆ ಅಭಿಯಿಸಿದ್ದರು. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹಿರಿಯ ಕಲಾವಿದೆಯ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನನ್ನ ನೆಚ್ಚಿನ ನಟ ಜಯಂತಿ. ಅವರು ತಮ್ಮ ಪಾತ್ರಗಳ ಮೂಲಕ ಅಜರಾಮರಾಗಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ

July 21, 2021

ರಾಜಾನುಕುಂಟೆ:ಬೆಲೆ ಏರಿಕೆ ವಿರುದ್ದ ಸೈಕಲ್ ಜಾಥಾ

 ರಾಜಾನುಕುಂಟೆ:ಬೆಲೆ ಏರಿಕೆ ವಿರುದ್ದ ಸೈಕಲ್ ಜಾಥಾ

{ಕೇಂದ್ರ ಸರ್ಕಾರ ಬೆಲೆ ಏರಿಕೆ ಕ್ರಮವನ್ನು ಖಂಡಿಸಿ ಕಾಂಗ್ರೇಸ್ ಸೈಕಲ್ ಜಾಥಾವನ್ನು ಹಮ್ಮಿಕೊಂಡಿತ್ತು. ಈ ಕುರಿತು ವರದಿ ಇಲ್ಲಿದೆ.}



ರಾಜಾನುಕುಂಟೆ ಗ್ರಾಮದಲ್ಲಿ  ಭಾರತೀಯ ರಾಷ್ಟ್ರೀಯ ಮಜ್ದೂರ್ ಕಾಂಗ್ರೇಸ್ ಯುವಘಟಕದ ವತಿಯಿಂದ ಹಮ್ಮಿಕೊಂಡಿದ್ದ ಸೈಕಲ್ ಜಾಥಾದಲ್ಲಿ ಕಾಂಗ್ರೇಸ್ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ,ಕಾಂಗ್ರೇಸ್ ಮುಖಂಡ ಚೊಕ್ಕನಹಳ್ಳಿ ವೆಂಕಟೇಶ್,ಕೇಶವರಾಜಣ್ಣ,ಗ್ರಾಮ ಪಂಚಾಯಿತಿ ಸದಸ್ಯ ಮೂರ್ತಿ ಭಾಗವಹಿಸಿದರು.  

                                                                             *

ಹೆಸರಘಟ್ಟ:-ಬಿ.ಜೆ.ಪಿ. ಸರ್ಕಾರದ ಭಷ್ಟ್ರ ಆಡಳಿತವನ್ನು ಮತ್ತು ಕೇಂದ್ರ ಸರ್ಕಾರ ಪೆಟ್ರೋಲ್ ಬೆಲೆ ಏರಿಸಿರುವುದನ್ನು ಖಂಡಿಸಿ ಭಾರತೀಯ ರಾಷ್ಟ್ರೀಯ ಮಜ್ದೂರ್ ಕಾಂಗ್ರೇಸ್ ಯುವಘಟಕದ ವತಿಯಿಂದ ರಾಜಾನುಕುಂಟೆ ಗ್ರಾಮದಲ್ಲಿ  ಬೃಹತ್ ಸೈಕಲ್ ಜಾಥಾವನ್ನು ಬುಧವಾರ ಹಮ್ಮಿಕೊಂಡಿತ್ತು.  ಸೈಕಲ್ ಏರಿದ ಯುವ ತಂಡವು ಕೇಂದ್ರ ಸರ್ಕಾರದ ವಿರುದ್ದ ಬೆಲೆ ಏರಿಕೆಯನ್ನು ಖಂಡಿಸಿ ಘೋಷಣೆಯನ್ನು ಕೂಗಿತ್ತು. ಸೈಕಲ್ ಜಾಥಾವನ್ನು ಕಾಂಗ್ರೇಸ್ ಪಕ್ಷದ ಕಾರ್ಯಾಧ್ಯಕ್ಷ  ಈಶ್ವರ ಖಂಡ್ರೆ ಚಾಲನೆ ನೀಡಿದರು. 

ಬಳಿಕ ಮಾತನಾಡಿದ ಅವರು "ಬಿ.ಜೆ.ಪಿ. ಸರ್ಕಾರವು ಲಕ್ಷಾಂತರ ಜನರನ್ನು ಆರ್ಥಿಕವಾಗಿ ದಿವಾಳಿ ಮಾಡಿದೆ. ಉದ್ಯೋಗ ಸೃಷ್ಠಿಸುತ್ತೀವಿ ಎಂದು ಯುವಕರಿಗೆ ಭರವಸೆ ನೀಡಿದ್ದು ಬಿಟ್ಟರೆ ಹತ್ತು ವರ್ಷದಲ್ಲಿ ಯಾವುದೇ ಉದ್ಯೋಗ ಸೃಷ್ಠಿಯಾಗಿಲ್ಲ. ಜನರು ಹಸಿವಿನಿಂದ ನರಳುತ್ತಿದ್ದಾರೆ.ಮಾನವೀಯತೆಯನ್ನು ಈ ಸರ್ಕಾರ ಕಳೆದು ಕೊಂಡಿದೆ" ಎಂದು ಸರ್ಕಾರವನ್ನು ಟೀಕಿಸಿದರು. 

ಹಿರಿಯ ಕಾಂಗ್ರೇಸ್ ಮುಖಂಡ ಹೆಚ್.ಎಂ.ರೇವಣ್ಣ ಅವರು ಮಾತನಾಡಿ "ಕರ್ನಾಟಕದಲ್ಲಿ ಆಳ್ವಿಕೆ ಮಾಡಿದ ಪ್ರತಿ ಮುಖ್ಯಮಂತ್ರಿಗಳು ಜನಪರವಾದ ಕೆಲಸಗಳನ್ನು ಮಾಡಿ ಹೆಜ್ಜೆ ಗುರುತು ಮೂಡಿಸಿದರು. ಇಂದಿರಾಗಾಂಧಿ ಅವರು ಹಸಿವಿನಿಂದ ಈ ಸಮಾಜವನ್ನು ಮುಕ್ತಗೊಳಿಸಲು ಗರೀಬ್ ಹಠಾವೋ ಯೋಜನೆಯನ್ನು ಜಾರಿಗೆ ತಂದರು. ಆದರೆ ಬಿ.ಜೆ.ಪಿ. ಸರ್ಕಾರವು ಯಾವ ಜನಪರ ಯೋಜನೆಯನ್ನು ಅನುಷ್ಠಾನ ಮಾಡಲಿಲ್ಲ. ಕುರ್ಚಿಗಾಗಿ ಅವರಲ್ಲೇ ಕಿತ್ತಾಟವಾಗುತ್ತಿದೆ" ಎಂದರು.

"ಯಲಹಂಕ ಕ್ಷೇತ್ರದಲ್ಲಿ ಸಚಿವರಾಗಿದ್ದ ಬಸವಲಿಂಗಪ್ಪ ಅವರು ಜನರಿಗೆ ಸೂರು ಕಲ್ಪಿಸಿ ಕೊಟ್ಟರು. ಜನಹಿತವಾದ ಅನೇಕ ಕೆಲಸಗಳನ್ನು ಅವರು ಮಾಡಿದ್ದಾರೆ. ಕಾಂಗ್ರೇಸ್ ಯಲಹಂಕದಲ್ಲಿ ಇನ್ನೂ ಜೀವಂತವಾಗಿದೆ. ಮತ್ತೆ ಇಲ್ಲಿ ಕಾಂಗ್ರೇಸ್ ಧ್ವಜ ಹಾರುತ್ತದೆ. ಬಡವರ ದೀನ ದಲಿತರ ಬಳಿ ಕಾಂಗ್ರೇಸ್ ಬರಲಿದೆ" ಎಂದು ಯಲಹಂಕ ಕಾಂಗ್ರೇಸ್ ಮುಖಂಡ ಕೇಶವರಾಜಣ್ಣ ತಿಳಿಸಿದರು.

ಕಾರ್ಯಕ್ರಮದಲ್ಲಿ ಕಾಂಗ್ರೇಸ್ ಮುಖಂಡರಾದ ಚೊಕ್ಕನಹಳ್ಳಿ ವೆಂಕಟೇಶ್, ಪಂಚಾಯಿತಿ ಸದಸ್ಯರಾದ ಮೂರ್ತಿ,   ಇಂಟೆಕ್ ಘಟಕದ ರಾಜ್ಯಾಧ್ಯಕ್ಷರಾದ ಪ್ರಕಾಶ್,ಯುವ ಘಟಕದ ರಾಜ್ಯಾಧ್ಯಕ್ಷರಾದ  ವರುಣ್ ಕುಮಾರ್ ಭಾಗವಹಿಸಿದರು.

*



July 15, 2021

ಆಲೂರು:ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ

 ಆಲೂರು:ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ

{ದಾಸನಪುರ ಹೋಬಳಿ ಆಲೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಯು ಇಂದು ನೆಡೆಯಿತ್ತು. ಈ ಕುರಿತು ವರದಿ ಇಲ್ಲಿದೆ.}


 
                                                          ಅಧ್ಯಕ್ಷರಾಗಿ ಹೆಚ್.ಕೆ.ಶೃತಿ

ಹೆಸರಘಟ್ಟ:-ದಾಸನಪುರ ಹೋಬಳಿ ಆಲೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯುಜುಲೈ 15 {ಗುರುವಾರ}ರಂದು ನಡೆಯಿತ್ತು. ಅಧ್ಯಕ್ಷ ಸ್ಥಾನಕ್ಕೆ ಎರಡು ಜನ ಸದಸ್ಯರು ಸ್ಪರ್ಧಿಸಿದ್ದರು. 15 ಸದಸ್ಯರ ಬೆಂಬಲದೊಂದಿಗೆ ಹೆಗ್ಗಡದೇವನಪುರ ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯೆ ಹೆಚ್.ಕೆ.ಶೃತಿ ಆಯ್ಕೆಗೊಂಡರು. ಉಪಾಧ್ಯಕ್ಷರ ಸ್ಥಾನಕ್ಕೆ ಎರಡು ಜನ ಸದಸ್ಯರು ಸ್ಪರ್ಧಿಸಿದ್ದರು. ಕುದುರೆಗೆರೆ ಗ್ರಾಮದ ಪಂಚಾಉಯಿತಿ ಸದಸ್ಯೆ ಅನ್ನಪೂರ್ಣ 15 ಸದಸ್ಯರ ಬೆಂಬಲದೊಂದಿಗೆ ವಿಜೇತರಾದರು.

ಅಧ್ಯಕ್ಷ ಸ್ಥಾನವು ಪರಿಶಿಷ್ಟಜಾತಿ ಮಹಿಳೆ ಮತ್ತು ಉಪಾಧ್ಯಕ್ಷರ ಸ್ಥಾನವು ಸಾಮಾನ್ಯ ವರ್ಗ ಮಹಿಳೆಗೆ ಮೀಸಲಾಗಿತ್ತು. ಚುನಾವಣಾಧಿಕಾರಿಯಾಗಿ ಬೆಂಗಳೂರು ಉತ್ತರ ತಾಲ್ಲೂಕಿನ ಪಶುಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ವೈ.ಹೆಚ್.ಹರೀಶ್ ಕಾರ್ಯನಿರ್ವಹಿಸಿದರು. 


                                                                   ಉಪಾಧ್ಯಕ್ಷ:ಅನ್ನಪೂರ್ಣ



ಆಲೂರು ಗ್ರಾಮ ಪಂಚಾಯಿತಿಗೆ ನೆಡೆದ ಅಧ್ಯಕ್ಷ ಮತ್ತುಉಪಾಧ್ಯಕ್ಷರ ಚುನಾವಣೆಯಲ್ಲಿ ಹೆಚ್.ಕೆ.ಶೃತಿ ಅಧ್ಯಕ್ಷರಾಗಿ ಆಯ್ಕೆಗೊಂಡರು. ಉಪಾಧ್ಯಕ್ಷರಾಗಿ ಅನ್ನಪೂರ್ಣ ವಿಜೇತರಾದರು. ಸದಸ್ಯರು ವಿಜಯದ ಸಂಕೇತವನ್ನು ತೋರಿಸುತ್ತಿರುವುದು





July 10, 2021

ಬಿ.ಜೆ.ಪಿ. ಕಾರ್ಯಕರ್ತರ ಪಾಲಾಯಿತ್ತು ಆಹಾರ ಧಾನ್ಯಗಳ ಕಿಟ್--ಪ್ರತಿಭಟನೆ

 

ಬಿ.ಜೆ.ಪಿ. ಕಾರ್ಯಕರ್ತರ ಪಾಲಾಯಿತ್ತು ಆಹಾರ ಧಾನ್ಯಗಳ ಕಿಟ್--ಪ್ರತಿಭಟನೆ



ಕಾರ್ಮಿಕ ಇಲಾಖೆಯಿಂದ ಬಂದ ಆಹಾರ ಧಾನ್ಯಗಳ ಕಿಟ್ ನ್ನು ಬಿ.ಜೆ.ಪಿ. ಕಾರ್ಯಕರ್ತರು ಮತ್ತು ಮುಖಂಡರಿಗೆ ವಿತರಿಸಲಾಗಿದೆ ಎಂದು ಆರೋಪಿಸಿ ಗ್ರಾಮ ಪಂಚಾಯಿತಿ ಸದಸ್ಯರು ಕಾಂಗ್ರೇಸ್ ಮುಖಂಡ ಕೇಶವರಾಜಣ್ಣ ಅವರ ನೇತೃತ್ವದಲ್ಲಿ ಕಪ್ಪು ಪಟ್ಟಿ ಧರಿಸಿಕೊಂಡು ಪಂಚಾಯಿತಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಗ್ರಾಮ ಪಂಚಾಯಿತಿ ಸದಸ್ಯ ರಾಜಣ್ಣ  ಇದ್ದರು.

ಹೆಸರಘಟ್ಟ:-ಕಾರ್ಮಿಕ ಇಲಾಖೆಯಿಂದ ಸರ್ಕಾರ ಬಡವರಿಗೆ ತಲುಪಿಸಲು ಕಳುಹಿಸಿದ ಆಹಾರ ಧಾನ್ಯಗಳ ಕಿಟ್ ಬಿ.ಜೆ.ಪಿ. ಕಾರ್ಯಕರ್ತರ ಮತ್ತು ಮುಖಂಡರ ಪಾಲಾಗಿದೆ ಎಂದು ಆರೋಪಿಸಿ ಹೆಸರಘಟ್ಟ ಗ್ರಾಮ ಪಂಚಾಯಿತಿ ಸದಸ್ಯರು ಕಪ್ಪು ಪಟ್ಟಿ ಧರಿಸಿ ಕಾಂಗ್ರೇಸ್ ಮುಖಂಡ ಕೇಶವರಾಜಣ್ಣ ಅವರ ನೇತೃತ್ವದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

"5ನೇ ತಾರೀಖು ಕಾರ್ಮಿಕ ಇಲಾಖೆಯಿಂದ ಆಹಾರ ಧಾನ್ಯಗಳ ಕಿಟ್ ಬಂದಿದೆ. ಅದನ್ನು ಬಿ.ಜೆ.ಪಿ. ಕಚೇರಿಯ ಮುಂದೆ ಇಳಿಸಿಕೊಳ್ಳಲಾಗಿದೆ. ನಂತರ ಬಿ.ಜೆ.ಪಿ. ಬೆಂಬಲಿತ ಗ್ರಾಮ ಪಂಚಾಯಿತಿ ಸದಸ್ಯರ ಸಮ್ಮುಖದಲ್ಲಿ ತಮಗೆ ಬೇಕಾದ ಗ್ರಾಮಸ್ಥರಿಗೆ ಮಾತ್ರ ಕಿಟ್‍ಗಳನ್ನು ವಿತರಿಸಲಾಗಿದೆ" ಎಂದು ಗ್ರಾಮ ಪಂಚಾಯಿತಿ ಸದಸ್ಯ ರಾಜಣ್ಣ  ಆರೋಪಿಸಿದರು.

"ಕಾರ್ಮಿಕ ಇಲಾಖೆಯಿಂದ ಬಂದ ಆಹಾರ ಧಾನ್ಯಗಳ ಕಿಟ್‍ನ್ನು ಅಧಿಕಾರಿಗಳ ಸಮ್ಮುಖದಲ್ಲಿ ಇಳಿಸಬೇಕು.ಆದರೆ ಪಂಚಾಯಿತಿ ಅಧಿಕಾರಿಗಳಿಗೆ ಮತ್ತು ನಾಡಕಚೇರಿ ತಹಶೀಲ್ದಾರಿಗೆ ಈ ಬಗ್ಗೆ ಮಾಹಿತಿಯೇ ಇಲ್ಲ ಎಂದು ಹೇಳುತ್ತಾರೆ. ಅಧಿಕಾರಿಗಳ ಗಮನಕ್ಕೆ ಬಾರದೇ ಕಿಟ್ ವಿತರಿಸುವ ಕ್ರಮ ಎಷ್ಟು ಸರಿ? ಬಡವರ ಕಿಟ್‍ನ್ನು ಕೇವಲ ಒಂದು ಪಕ್ಷದ ಕಾರ್ಯಕರ್ತರಿಗೆ ವಿತರಿಸಿದ ಕ್ರಮ ಖಂಡನೀಯ" ಎಂದು ಪ್ರತಿಭಟನೆ ನಿರತ ಕಾಂಗ್ರೇಸ್ ಮುಖಂಡ ಕೇಶವರಾಜಣ್ಣ ಆಕ್ರೋಶ ವ್ಯಕ್ತಪಡಿಸಿದರು.

"ಸರ್ಕಾರ ಕಾರ್ಮಿಕರ ಇಲಾಖೆಯಿಂದ ಬಡವರಿಗೆ ವಿತರಿಸುವ ಕಿಟ್‍ನ್ನು ರಾಜಕೀಯ ಲಾಭಕ್ಕೆ ಬಳಸಿ ಕೊಳ್ಳುವುದು ನಿಜಕ್ಕೂ ಬೇಸಾರದ ಸಂಗತಿ. ಅಧಿಕಾರಿಗಳು ಇಲ್ಲದೇ ಕಿಟ್ ವಿತರಣೆಯಾದ ಬಗ್ಗೆ ತನಿಖೆ ಮಾಡುವಂತೆ ಸರ್ಕಾರವನ್ನು ನಾವು ಒತ್ತಾಯ ಮಾಡುತ್ತೀವಿ" ಎಂದು ಅವರು ತಿಳಿಸಿದರು.

"ಕಾರ್ಮಿಕ ಇಲಾಖೆಯಿಂದ ಬಡವರಿಗೆ ಆಹಾರ ಧಾನ್ಯಗಳ ಕಿಟ್ ಬಂದಿರುವ ಬಗ್ಗೆ ಮತ್ತು ವಿತರಿಸುವ ಬಗ್ಗೆ ಯಾವುದೇ ಮಾಹಿತಿ ಗ್ರಾಮ ಪಂಚಾಯಿತಿಗೆ ಬಂದಿಲ್ಲ" ಎನ್ನುತ್ತಾರೆ ಪಂಚಾಯಿತಿ ಕಾರ್ಯದರ್ಶಿ ಶ್ರೀನಿವಾಸ್


 

 

 

July 03, 2021

ಗ್ರಾ.ಪಂ. ಪರವಾನಿಗೆ ಪಡೆಯದೇ ಕಾರ್ಯ ನಿರ್ವಹಿಸುತ್ತಿದ್ದ ಪೆಟ್ರೋಲ್ ಬಂಕ್

 

ಗ್ರಾ.ಪಂ. ಪರವಾನಿಗೆ ಪಡೆಯದೇ ಕಾರ್ಯ ನಿರ್ವಹಿಸುತ್ತಿದ್ದ ಪೆಟ್ರೋಲ್ ಬಂಕ್ :

  ಶಿವಕೋಟೆ ಗ್ರಾಮ ಪಂಚಾಯಿತಿ ಸದಸ್ಯರ ಪ್ರತಿಭಟನೆ

{ಹೆಸರಘಟ್ಟ ಹೋಬಳಿ ಶಿವಕೋಟೆ ಗ್ರಾಮ ಪಂಚಾಯಿತಿ ಸದಸ್ಯರು ಗ್ರಾಮ ಪಂಚಾಯಿತಿಯ ಪರವಾನಿಗೆ ಪಡೆಯದೇ ಕಾರ್ಯ ನಿರ್ವಹಿಸುತ್ತಿದ್ದ ಪೆಟ್ರೋಲ್ ಬಂಕ್‍ನ ಕ್ರಮವನ್ನು ಖಂಡಿಸಿ ಪ್ರತಿಭಟನೆ ನಡೆಸಿದರು. ಈ ಕುರಿತು ವರದಿ ಇಲ್ಲಿದೆ.}


ಗ್ರಾಮ ಪಂಚಾಯಿತಿಯಿಂದ ಪರವಾನಿಗೆ ಪಡೆಯದೇ ಕಾರ್ಯ ನಿರ್ವಹಿಸುತ್ತಿದ್ದ ಪೆಟ್ರೋಲ್ ಬಂಕ್ನ್ನು ಶಿವಕೋಟೆ ಗ್ರಾಮ ಪಂಚಾಯಿತಿ ಸದಸ್ಯರು ಮಾಲೀಕರನ್ನು ತರಾಟೆಗೆ ತೆಗೆದುಕೊಂಡು ಬಂಕ್ ಮುಚ್ಚಿಸಿದರು.

ಹೆಸರಘಟ್ಟ:-ಗ್ರಾಮ ಪಂಚಾಯಿತಿಯಿಂದ ಪರವಾನಿಗೆ ಪಡೆಯದೇ ಕಾರ್ಯ ನಿರ್ವಹಿಸುತ್ತಿದ್ದ ಶ್ರೀ ಸಾಯಿ ಆಂಜನೇಯ ಪೆಟ್ರೋಲ್ ಬಂಕ್‍ನ ಕ್ರಮವನ್ನು ಖಂಡಿಸಿ ಶಿವಕೋಟೆ ಗ್ರಾಮ ಪಂಚಾಯಿತಿ ಸದಸ್ಯರು ಪ್ರತಿಭಟನೆ ನಡೆಸಿದರು. ಪೆಟ್ರೋಲ್ ಬಂಕ್ ಗ್ರಾಮ ಪಂಚಾಯಿತಿಯಿಂದ ಪರವಾನಿಗೆ ಪಡೆಯುವ ತನಕ ಕೆಲಸ ನಿರ್ವಹಿಸಬಾರದು ಎಂದು ಶಿವಕೋಟೆ ಗ್ರಾಮಸ್ಥರು ಪಟ್ಟು ಹಿಡಿದಾಗ ಪೊಲೀಸರು ಬಂಕ್‍ನ್ನು ಮುಚ್ಚಿಸಿದರು.

" ಶಿವಕೋಟೆ ಗ್ರಾಮದಿಂದ ಹೆಸರಘಟ್ಟ ಗ್ರಾಮಕ್ಕೆ ಹೋಗುವ ಮಾರ್ಗಮಧ್ಯೆ ಶ್ರೀಸಾಯಿ ಆಂಜನೇಯ ಪೆಟ್ರೋಲ್ ಬಂಕ್ ಪಂಚಾಯಿತಿಯಲ್ಲಿ ಯಾವುದೇ ಪರವಾನಿಗೆಯನ್ನು ಪಡೆಯದೇ  ಕೆಲಸ ನಿರ್ವಹಿಸುತ್ತಿದೆ.  ರಿಜಿಸ್ಟ್ರರ್ ಅಂಚೆ ಮೂಲಕ ನೋಟಿಸ್ ನೀಡಿದರೂ ಯಾವುದೇ ಉತ್ತರವನ್ನು ಕೊಟ್ಟಿಲ್ಲ. ಪಂಚಾಯಿತಿ ರಾಜ್ ಅಧಿನಿಯಮ 66ರಿಂದ 70ರ ನಿಯಮದ ಪ್ರಕಾರ ಪಂಚಾಯಿತಿಯಲ್ಲಿ ಎನ್.ಓ.ಸಿ. ಮತ್ತು ಪರವಾನಿಗೆ ಪಡೆಯಬೇಕು. ಇದು ಯಾವುದನ್ನು ಪಡೆಯದೇ ಪೆಟ್ರೋಲ್ ಬಂಕ್ ನಡೆಸುತ್ತಿದ್ದಾರೆ. ಹಣವಿದ್ದರೆ ಯಾವ ನಿಯಮ ಬೇಡ ಎನ್ನುವ ಮಾಲೀಕರ ಧೋರಣೆ ಖಂಡನೀಯ"ಎಂದು ಪ್ರತಿಭಟನೆ ನಿರತರಾದ ಮಾವಳಿಪುರ ಗ್ರಾಮ ಪಂಚಾಯಿತಿ ಸದಸ್ಯ ಕೆಂಪಣ್ಣ ಆಕ್ರೋಶ ವ್ಯಕ್ತಪಡಿಸಿದರು.

"ಸುಮಾರು ನಾಲ್ಕು ಕುಂಟೆ ಕೆರೆ ಜಾಗವನ್ನು ಒತ್ತುವರಿ ಮಾಡಿಕೊಂಡು ಬಂಕ್ ಗೆ ರಸ್ತೆಯನ್ನು ನಿರ್ಮಿಸಲಾಗಿದೆ.ಕೆರೆ ಜಾಗ ಒತ್ತುವರಿ ಮಾಡಿಕೊಂಡಿರುವುದನ್ನು ಕಣ್ಣಾರೆ ಕಂಡ ಅಧಿಕಾರಿಗಳು ಯಾವುದೇ ಕ್ರಮವನ್ನು ಇಲ್ಲಿಯತನಕ ತೆಗೆದು ಕೊಂಡಿಲ್ಲ. ಬಂಡವಾಳ ಶಾಹಿಗಳ ತಾಳಕ್ಕೆ ಕುಣಿಯುತ್ತಿದ್ದಾರೆ" ಎಂದು ಮತ್ಕೂರು ಗ್ರಾಮ ಪಂಚಾಯಿತಿ ಸದಸ್ಯ ಸಂಜೀವಪ್ಪ ಬೇಸಾರ ವ್ಯಕ್ತಪಡಿಸಿದರು.

"ವರ್ಷದಿಂದ ಪಂಚಾಯಿತಿಗೆ ಕಟ್ಟುವ ತೆರಿಗೆಯನ್ನು ಕಟ್ಟಿಲ್ಲ. ಜಾಗ ನೀಡಿರುವ  ಮಾಲೀಕರಿಗೆ ಇ ಖಾತೆಯಾಗಿಲ್ಲ. ಇಷ್ಟೆಲ್ಲ ನ್ಯೂನತೆಗಳು ಇದ್ದರೂ ದಬ್ಬಾಳಿಕೆಯಿಂದ ಪೆಟೋಲ್ ಬಂಕ್ ನಡೆಸುತ್ತಿದ್ದಾರೆ."ಎಂದು ಶಿವಕೋಟೆ ಗ್ರಾಮ ಪಂಚಾಯಿತಿ ಸದಸ್ಯ ಮುನಿರಾಜು ಅಸಮಾಧಾನ ತೊಡಿಕೊಂಡರು.


 

 

ಬೂತ್ ಮಟ್ಟದಲ್ಲಿ ಸಂಘಟನೆಗೆ ಕಾಂಗ್ರೇಸ್ ಗಾಂಧಿ ನಡೆ

ಸೋಲದೇವನಹಳ್ಳಿ ಗ್ರಾಮದಲ್ಲಿ ನಡೆದ ಗಾಂಧಿ ನಡೆ ಕಾರ್ಯಗಾರದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೇಸ್ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಮಾತನಾಡಿದರು. ಹಿರಿಯ ಮುಖಂಡರಾದ ವೀರಪ್ಪಮೊ...