July 10, 2021

ಬಿ.ಜೆ.ಪಿ. ಕಾರ್ಯಕರ್ತರ ಪಾಲಾಯಿತ್ತು ಆಹಾರ ಧಾನ್ಯಗಳ ಕಿಟ್--ಪ್ರತಿಭಟನೆ

 

ಬಿ.ಜೆ.ಪಿ. ಕಾರ್ಯಕರ್ತರ ಪಾಲಾಯಿತ್ತು ಆಹಾರ ಧಾನ್ಯಗಳ ಕಿಟ್--ಪ್ರತಿಭಟನೆ



ಕಾರ್ಮಿಕ ಇಲಾಖೆಯಿಂದ ಬಂದ ಆಹಾರ ಧಾನ್ಯಗಳ ಕಿಟ್ ನ್ನು ಬಿ.ಜೆ.ಪಿ. ಕಾರ್ಯಕರ್ತರು ಮತ್ತು ಮುಖಂಡರಿಗೆ ವಿತರಿಸಲಾಗಿದೆ ಎಂದು ಆರೋಪಿಸಿ ಗ್ರಾಮ ಪಂಚಾಯಿತಿ ಸದಸ್ಯರು ಕಾಂಗ್ರೇಸ್ ಮುಖಂಡ ಕೇಶವರಾಜಣ್ಣ ಅವರ ನೇತೃತ್ವದಲ್ಲಿ ಕಪ್ಪು ಪಟ್ಟಿ ಧರಿಸಿಕೊಂಡು ಪಂಚಾಯಿತಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಗ್ರಾಮ ಪಂಚಾಯಿತಿ ಸದಸ್ಯ ರಾಜಣ್ಣ  ಇದ್ದರು.

ಹೆಸರಘಟ್ಟ:-ಕಾರ್ಮಿಕ ಇಲಾಖೆಯಿಂದ ಸರ್ಕಾರ ಬಡವರಿಗೆ ತಲುಪಿಸಲು ಕಳುಹಿಸಿದ ಆಹಾರ ಧಾನ್ಯಗಳ ಕಿಟ್ ಬಿ.ಜೆ.ಪಿ. ಕಾರ್ಯಕರ್ತರ ಮತ್ತು ಮುಖಂಡರ ಪಾಲಾಗಿದೆ ಎಂದು ಆರೋಪಿಸಿ ಹೆಸರಘಟ್ಟ ಗ್ರಾಮ ಪಂಚಾಯಿತಿ ಸದಸ್ಯರು ಕಪ್ಪು ಪಟ್ಟಿ ಧರಿಸಿ ಕಾಂಗ್ರೇಸ್ ಮುಖಂಡ ಕೇಶವರಾಜಣ್ಣ ಅವರ ನೇತೃತ್ವದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

"5ನೇ ತಾರೀಖು ಕಾರ್ಮಿಕ ಇಲಾಖೆಯಿಂದ ಆಹಾರ ಧಾನ್ಯಗಳ ಕಿಟ್ ಬಂದಿದೆ. ಅದನ್ನು ಬಿ.ಜೆ.ಪಿ. ಕಚೇರಿಯ ಮುಂದೆ ಇಳಿಸಿಕೊಳ್ಳಲಾಗಿದೆ. ನಂತರ ಬಿ.ಜೆ.ಪಿ. ಬೆಂಬಲಿತ ಗ್ರಾಮ ಪಂಚಾಯಿತಿ ಸದಸ್ಯರ ಸಮ್ಮುಖದಲ್ಲಿ ತಮಗೆ ಬೇಕಾದ ಗ್ರಾಮಸ್ಥರಿಗೆ ಮಾತ್ರ ಕಿಟ್‍ಗಳನ್ನು ವಿತರಿಸಲಾಗಿದೆ" ಎಂದು ಗ್ರಾಮ ಪಂಚಾಯಿತಿ ಸದಸ್ಯ ರಾಜಣ್ಣ  ಆರೋಪಿಸಿದರು.

"ಕಾರ್ಮಿಕ ಇಲಾಖೆಯಿಂದ ಬಂದ ಆಹಾರ ಧಾನ್ಯಗಳ ಕಿಟ್‍ನ್ನು ಅಧಿಕಾರಿಗಳ ಸಮ್ಮುಖದಲ್ಲಿ ಇಳಿಸಬೇಕು.ಆದರೆ ಪಂಚಾಯಿತಿ ಅಧಿಕಾರಿಗಳಿಗೆ ಮತ್ತು ನಾಡಕಚೇರಿ ತಹಶೀಲ್ದಾರಿಗೆ ಈ ಬಗ್ಗೆ ಮಾಹಿತಿಯೇ ಇಲ್ಲ ಎಂದು ಹೇಳುತ್ತಾರೆ. ಅಧಿಕಾರಿಗಳ ಗಮನಕ್ಕೆ ಬಾರದೇ ಕಿಟ್ ವಿತರಿಸುವ ಕ್ರಮ ಎಷ್ಟು ಸರಿ? ಬಡವರ ಕಿಟ್‍ನ್ನು ಕೇವಲ ಒಂದು ಪಕ್ಷದ ಕಾರ್ಯಕರ್ತರಿಗೆ ವಿತರಿಸಿದ ಕ್ರಮ ಖಂಡನೀಯ" ಎಂದು ಪ್ರತಿಭಟನೆ ನಿರತ ಕಾಂಗ್ರೇಸ್ ಮುಖಂಡ ಕೇಶವರಾಜಣ್ಣ ಆಕ್ರೋಶ ವ್ಯಕ್ತಪಡಿಸಿದರು.

"ಸರ್ಕಾರ ಕಾರ್ಮಿಕರ ಇಲಾಖೆಯಿಂದ ಬಡವರಿಗೆ ವಿತರಿಸುವ ಕಿಟ್‍ನ್ನು ರಾಜಕೀಯ ಲಾಭಕ್ಕೆ ಬಳಸಿ ಕೊಳ್ಳುವುದು ನಿಜಕ್ಕೂ ಬೇಸಾರದ ಸಂಗತಿ. ಅಧಿಕಾರಿಗಳು ಇಲ್ಲದೇ ಕಿಟ್ ವಿತರಣೆಯಾದ ಬಗ್ಗೆ ತನಿಖೆ ಮಾಡುವಂತೆ ಸರ್ಕಾರವನ್ನು ನಾವು ಒತ್ತಾಯ ಮಾಡುತ್ತೀವಿ" ಎಂದು ಅವರು ತಿಳಿಸಿದರು.

"ಕಾರ್ಮಿಕ ಇಲಾಖೆಯಿಂದ ಬಡವರಿಗೆ ಆಹಾರ ಧಾನ್ಯಗಳ ಕಿಟ್ ಬಂದಿರುವ ಬಗ್ಗೆ ಮತ್ತು ವಿತರಿಸುವ ಬಗ್ಗೆ ಯಾವುದೇ ಮಾಹಿತಿ ಗ್ರಾಮ ಪಂಚಾಯಿತಿಗೆ ಬಂದಿಲ್ಲ" ಎನ್ನುತ್ತಾರೆ ಪಂಚಾಯಿತಿ ಕಾರ್ಯದರ್ಶಿ ಶ್ರೀನಿವಾಸ್


 

 

 

No comments:

Post a Comment

ಬೂತ್ ಮಟ್ಟದಲ್ಲಿ ಸಂಘಟನೆಗೆ ಕಾಂಗ್ರೇಸ್ ಗಾಂಧಿ ನಡೆ

ಸೋಲದೇವನಹಳ್ಳಿ ಗ್ರಾಮದಲ್ಲಿ ನಡೆದ ಗಾಂಧಿ ನಡೆ ಕಾರ್ಯಗಾರದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೇಸ್ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಮಾತನಾಡಿದರು. ಹಿರಿಯ ಮುಖಂಡರಾದ ವೀರಪ್ಪಮೊ...