July 21, 2021

ರಾಜಾನುಕುಂಟೆ:ಬೆಲೆ ಏರಿಕೆ ವಿರುದ್ದ ಸೈಕಲ್ ಜಾಥಾ

 ರಾಜಾನುಕುಂಟೆ:ಬೆಲೆ ಏರಿಕೆ ವಿರುದ್ದ ಸೈಕಲ್ ಜಾಥಾ

{ಕೇಂದ್ರ ಸರ್ಕಾರ ಬೆಲೆ ಏರಿಕೆ ಕ್ರಮವನ್ನು ಖಂಡಿಸಿ ಕಾಂಗ್ರೇಸ್ ಸೈಕಲ್ ಜಾಥಾವನ್ನು ಹಮ್ಮಿಕೊಂಡಿತ್ತು. ಈ ಕುರಿತು ವರದಿ ಇಲ್ಲಿದೆ.}



ರಾಜಾನುಕುಂಟೆ ಗ್ರಾಮದಲ್ಲಿ  ಭಾರತೀಯ ರಾಷ್ಟ್ರೀಯ ಮಜ್ದೂರ್ ಕಾಂಗ್ರೇಸ್ ಯುವಘಟಕದ ವತಿಯಿಂದ ಹಮ್ಮಿಕೊಂಡಿದ್ದ ಸೈಕಲ್ ಜಾಥಾದಲ್ಲಿ ಕಾಂಗ್ರೇಸ್ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ,ಕಾಂಗ್ರೇಸ್ ಮುಖಂಡ ಚೊಕ್ಕನಹಳ್ಳಿ ವೆಂಕಟೇಶ್,ಕೇಶವರಾಜಣ್ಣ,ಗ್ರಾಮ ಪಂಚಾಯಿತಿ ಸದಸ್ಯ ಮೂರ್ತಿ ಭಾಗವಹಿಸಿದರು.  

                                                                             *

ಹೆಸರಘಟ್ಟ:-ಬಿ.ಜೆ.ಪಿ. ಸರ್ಕಾರದ ಭಷ್ಟ್ರ ಆಡಳಿತವನ್ನು ಮತ್ತು ಕೇಂದ್ರ ಸರ್ಕಾರ ಪೆಟ್ರೋಲ್ ಬೆಲೆ ಏರಿಸಿರುವುದನ್ನು ಖಂಡಿಸಿ ಭಾರತೀಯ ರಾಷ್ಟ್ರೀಯ ಮಜ್ದೂರ್ ಕಾಂಗ್ರೇಸ್ ಯುವಘಟಕದ ವತಿಯಿಂದ ರಾಜಾನುಕುಂಟೆ ಗ್ರಾಮದಲ್ಲಿ  ಬೃಹತ್ ಸೈಕಲ್ ಜಾಥಾವನ್ನು ಬುಧವಾರ ಹಮ್ಮಿಕೊಂಡಿತ್ತು.  ಸೈಕಲ್ ಏರಿದ ಯುವ ತಂಡವು ಕೇಂದ್ರ ಸರ್ಕಾರದ ವಿರುದ್ದ ಬೆಲೆ ಏರಿಕೆಯನ್ನು ಖಂಡಿಸಿ ಘೋಷಣೆಯನ್ನು ಕೂಗಿತ್ತು. ಸೈಕಲ್ ಜಾಥಾವನ್ನು ಕಾಂಗ್ರೇಸ್ ಪಕ್ಷದ ಕಾರ್ಯಾಧ್ಯಕ್ಷ  ಈಶ್ವರ ಖಂಡ್ರೆ ಚಾಲನೆ ನೀಡಿದರು. 

ಬಳಿಕ ಮಾತನಾಡಿದ ಅವರು "ಬಿ.ಜೆ.ಪಿ. ಸರ್ಕಾರವು ಲಕ್ಷಾಂತರ ಜನರನ್ನು ಆರ್ಥಿಕವಾಗಿ ದಿವಾಳಿ ಮಾಡಿದೆ. ಉದ್ಯೋಗ ಸೃಷ್ಠಿಸುತ್ತೀವಿ ಎಂದು ಯುವಕರಿಗೆ ಭರವಸೆ ನೀಡಿದ್ದು ಬಿಟ್ಟರೆ ಹತ್ತು ವರ್ಷದಲ್ಲಿ ಯಾವುದೇ ಉದ್ಯೋಗ ಸೃಷ್ಠಿಯಾಗಿಲ್ಲ. ಜನರು ಹಸಿವಿನಿಂದ ನರಳುತ್ತಿದ್ದಾರೆ.ಮಾನವೀಯತೆಯನ್ನು ಈ ಸರ್ಕಾರ ಕಳೆದು ಕೊಂಡಿದೆ" ಎಂದು ಸರ್ಕಾರವನ್ನು ಟೀಕಿಸಿದರು. 

ಹಿರಿಯ ಕಾಂಗ್ರೇಸ್ ಮುಖಂಡ ಹೆಚ್.ಎಂ.ರೇವಣ್ಣ ಅವರು ಮಾತನಾಡಿ "ಕರ್ನಾಟಕದಲ್ಲಿ ಆಳ್ವಿಕೆ ಮಾಡಿದ ಪ್ರತಿ ಮುಖ್ಯಮಂತ್ರಿಗಳು ಜನಪರವಾದ ಕೆಲಸಗಳನ್ನು ಮಾಡಿ ಹೆಜ್ಜೆ ಗುರುತು ಮೂಡಿಸಿದರು. ಇಂದಿರಾಗಾಂಧಿ ಅವರು ಹಸಿವಿನಿಂದ ಈ ಸಮಾಜವನ್ನು ಮುಕ್ತಗೊಳಿಸಲು ಗರೀಬ್ ಹಠಾವೋ ಯೋಜನೆಯನ್ನು ಜಾರಿಗೆ ತಂದರು. ಆದರೆ ಬಿ.ಜೆ.ಪಿ. ಸರ್ಕಾರವು ಯಾವ ಜನಪರ ಯೋಜನೆಯನ್ನು ಅನುಷ್ಠಾನ ಮಾಡಲಿಲ್ಲ. ಕುರ್ಚಿಗಾಗಿ ಅವರಲ್ಲೇ ಕಿತ್ತಾಟವಾಗುತ್ತಿದೆ" ಎಂದರು.

"ಯಲಹಂಕ ಕ್ಷೇತ್ರದಲ್ಲಿ ಸಚಿವರಾಗಿದ್ದ ಬಸವಲಿಂಗಪ್ಪ ಅವರು ಜನರಿಗೆ ಸೂರು ಕಲ್ಪಿಸಿ ಕೊಟ್ಟರು. ಜನಹಿತವಾದ ಅನೇಕ ಕೆಲಸಗಳನ್ನು ಅವರು ಮಾಡಿದ್ದಾರೆ. ಕಾಂಗ್ರೇಸ್ ಯಲಹಂಕದಲ್ಲಿ ಇನ್ನೂ ಜೀವಂತವಾಗಿದೆ. ಮತ್ತೆ ಇಲ್ಲಿ ಕಾಂಗ್ರೇಸ್ ಧ್ವಜ ಹಾರುತ್ತದೆ. ಬಡವರ ದೀನ ದಲಿತರ ಬಳಿ ಕಾಂಗ್ರೇಸ್ ಬರಲಿದೆ" ಎಂದು ಯಲಹಂಕ ಕಾಂಗ್ರೇಸ್ ಮುಖಂಡ ಕೇಶವರಾಜಣ್ಣ ತಿಳಿಸಿದರು.

ಕಾರ್ಯಕ್ರಮದಲ್ಲಿ ಕಾಂಗ್ರೇಸ್ ಮುಖಂಡರಾದ ಚೊಕ್ಕನಹಳ್ಳಿ ವೆಂಕಟೇಶ್, ಪಂಚಾಯಿತಿ ಸದಸ್ಯರಾದ ಮೂರ್ತಿ,   ಇಂಟೆಕ್ ಘಟಕದ ರಾಜ್ಯಾಧ್ಯಕ್ಷರಾದ ಪ್ರಕಾಶ್,ಯುವ ಘಟಕದ ರಾಜ್ಯಾಧ್ಯಕ್ಷರಾದ  ವರುಣ್ ಕುಮಾರ್ ಭಾಗವಹಿಸಿದರು.

*



No comments:

Post a Comment

ಬೂತ್ ಮಟ್ಟದಲ್ಲಿ ಸಂಘಟನೆಗೆ ಕಾಂಗ್ರೇಸ್ ಗಾಂಧಿ ನಡೆ

ಸೋಲದೇವನಹಳ್ಳಿ ಗ್ರಾಮದಲ್ಲಿ ನಡೆದ ಗಾಂಧಿ ನಡೆ ಕಾರ್ಯಗಾರದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೇಸ್ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಮಾತನಾಡಿದರು. ಹಿರಿಯ ಮುಖಂಡರಾದ ವೀರಪ್ಪಮೊ...